ಗಗನ ಹಕ್ಕಿಯು ಗಾನ ತುಂಬಿತು ಪ್ರೇಮ ಪರ್‍ವತ ನಗಿಸಿತು ಮುಗಿಲು ಹನಿಹನಿ ಗಂಧ ತೂರಿತು ಪ್ರೀತಿ ಗಮಗಮ ಹರಡಿತು ಬೀಜ ಒಡೆಯಿತು. ಚಿಗುರು ಚಿಮ್ಮಿತು ಮೊದಲ ಚುಂಬನ ನೀಡಿತು ರಸದ ಮಾವಿನ ಮಧುರ ಸೋನೆಯು ತುಟಿಯ ಮೇಲಕೆ ಇಳಿಯಿತು ಗುಡ್ಡ ಆಡಿತು ಬೆಟ್ಟ ಚಾಚಿ...

ಮೂಗ ಆದಂಗ್ ಆಗ್ತೀನ್ ನಾನು ನನ್ ಪುಟ್ನಂಜಿ ನಕ್ರೆ! ಆಡಬೇಕಂದ್ರೆ ಮಾತೇ ಸಿಕ್ದು ಉಕ್ ಬರ್‍ತಿದ್ರೆ ಅಕ್ರೆ- ನನ್ ಪುಟ್ನಂಜಿ ನಕ್ರೆ! ೧ ಲಕ್ಕಂತ್ ಮತ್ತ್ ನಂಗ್ ಅತ್ಕೋಂತೈತೆ ನನ್ ಪುಟ್ನಂಜಿ ನಕ್ರೆ! ಝಮ್ಮಂತ್ ಇಗ್ತ ಪದವಾಡ್ತೀನಿ ಆ ಮತ್ತ್ ನನಗಾಗ್ ಮ...

ಮೈತಳೆದ ಕರುಣೆ ಮೈಮರೆತು ಕುಳಿತಿದೆ ನೋಡು ಯೋಚನೆಯ ಯೋಜನೆಯ ಕುರಿತು ಬೆರೆತು. ಜಗದ ಉದ್ಧಾರಕ್ಕೆ ಜಗಕೆ ಅವತರಿಸಿಹುದು ನೊಗ ಹೊತ್ತ ರೀತಿಯಿದು ಜಗಕೆ ಹೊರತು. ಇದುವೆ ಮುಕ್ತಾಸನವೊ? ಏನು ಯುಕ್ತಾಸನವೊ? ಕೂಡಿಹವು ಚಿಂತೆ ಚಿಂತನಗಳಿಲ್ಲಿ ಎಡಗೈಯ ಭಾರವನು...

ತಿಂದುದೆಲ್ಲವು ಎಮ್ಮ ದೇಹಕೆ ಸಲುವುದಿ ಲ್ಲೆಂದು ತಿನದಿರ್‍ಪುದುಂಟೇ? ತಿಂದು ದಂತಿಮದಿ ಕೊಳಕಪ್ಪುದೆಂದು ಕೊಳಕುಣುವು ದುಂಟೇ? ಅಂತೆಮ್ಮ ಬುದ್ಧಿಗೂ ಶುದ್ಧಿ ಮಾತಿನ ನಂಮೃತದ ತುತ್ತುಣಿಸುತಿರಬೇಕು – ವಿಜ್ಞಾನೇಶ್ವರಾ *****...

ಯಾವ ನಾಡ ದೊರಿಯು ಬಂದು ರಸ್ತಿಯೊಳಗ ಮನಿಯಗಟ್ಟಿ ಮುತ್ತಿನ ಚೆಂಡಾಡ್ವನಲ್ಲ, ಸಣ್ಣ ನಾಮದ ಹುಡುಗಾ || ೧ || ವೋಣಿ ವೋಣಿ ತಿರುಗುತಾನಾ ಜೋಡಕಿನ್ನುರೀ ಬಾರ್‌ಸು ಜಾಣ ನಮ್ಮ ವೋಣೀಗೆ ಯಾಕ ಬರಲಿಲ್ಲಾ? ಸಣ್ಣ ನಾಮದ ಹುಡುಗಾ || ೨ || ***** ಹೇಳಿದವರು: ದ...

ಬೆಳಕಿನಾಚೆಗೂ ಬೆಳಕು ಕೋಟಿ ಸೂರ್‍ಯ ನನ್ನ ನಡೆಸುವವನು ನೀನು ತಾರೆ ದಟ್ಟದರಿದ್ರನು ನಾನು ಭಾವದಿಂದ ನಿತ್ಯ ನಿರ್‍ಮಿಕಲ್ಪನು ನಿ ಮೇರು ಸೂರ್‍ಯ ಕೋಟಿ ಕೋಟಿ ಬ್ರಹ್ಮಾಂಡ ಯಜಮಾನ ಆದರೂ ಕೇಳಬಲೆ ನನ್ನ ಕ್ಷೀಣ ದನಿ ನನ್ನ ಅಂತರಾಳದಿ ನಡೆದ ಆ ಚಿಂತನೆ ನೀನ...

ಮೊನ್ನೆ ಸಂಜೆಯಲಿ ಮಧುವಾಟಿಕೆಯ ಬಾಗಿಲಲಿ ಗಂಧರ್‍ವನೊರ್‍ವನೆನ್ನೆಡೆಗೈದಿ ನಗುತೆ ತೋಳಿನಲಿ ತಳೆದಿರ್‍ದ ಪಾತ್ರೆಯನ್ನು ತೋರುತ್ತ ಕುಡಿಯೆಂದು ಬೆಸಸಿದನು; ಕುಡಿಯಲದು ಮಧುವು. *****...

ಇಷ್ಟೊಂದು ದೇವರ ಎಷ್ಟೊಂದು ದೇವರ ಎಲ್ಲೆಲ್ಲಿ ನೋಡಿದರು ದೇವರೆ ದೇವರ ಇಷ್ಟೊಂದು ದೇವರಲಿ ನಿನಗಾರು ದೇವರ ನಿನಗ್ಯಾಕೆ ದೇವರ ನೀನೇ ದೇವರ ಯಜಮಾನ ದೇವರ ಧಣಿಗಳು ದೇವರ ಜನನಾಯಕರು ದೇವರ ಢಣನಾಯಕರು ದೇವರ ಅಂಬಾರಿ ದೇವರ ಜಂಬೂಸವಾರಿ ದೇವರ ಪೂಜೆಯ ದೇವರ ...

ಹೆರರ ನೋವಿಗೆ ಅಯ್ಯೊ ಎಂದು ಮರುಗಿ ಸುಯ್ಯಲನಿಡಲು ಒಲವೆ? ಹಿರಿಯ ಸುಖದಿರವೆನ್ನ ದೆನ್ನುವ ಅರಿವು ಒಲಿದವಗಿರುವುದೆ? ಜನುಮದೊಂದಿಗೆ ಜೊತೆಯ ಕೂಡಿ ಕೊನೆಯವರೆಗೂ ಬೆನ್ನ ಬಿಡದ ಜನುಮದುನ್ನತಿ ಕುಲದ ಹೆಮ್ಮೆಯ. ಕಟ್ಟ ಕಳೆವುದೆ ಕರುಣೆಯು? ಕೊಳದ ಕರೆ ಬಳಿ ...

ಪ್ರೀತಿಯಿಂದ ಕಟ್ಟಿದ ಅವಳ ನಾಗರೀಕತೆಗಳ ಮೇಲೆ ಕಾಣುತ್ತಿದೆ ನಿಮ್ಮದೇ ಕ್ರೂರ ಮುದ್ರೆ ಅವಳೇ ಕಟ್ಟಿದ ಸಂಸ್ಕೃತಿಗಳ ಮೇಲೆ ಇರಲಿ ಬಿಡಿ ಅವಳದೇ ಮುದ್ರೆ, ನಿಲ್ಲಿಸಲಿ ಬಿಡಿ ಅವಳದೇ ಸೌಧ ತೋರಿಸಲಿ ಬಿಡಿ ಲೋಕಕ್ಕೆ ಹೊಸ ಸೂರ್‍ಯೋದಯ ಕೇಳಲಿ ಬಿಡಿ ಹೊಸ ಸುಪ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...