ಬೆಳಕಿನಾಚೆಗೂ ಬೆಳಕು ಕೋಟಿ ಸೂರ್‍ಯ
ನನ್ನ ನಡೆಸುವವನು ನೀನು ತಾರೆ
ದಟ್ಟದರಿದ್ರನು ನಾನು ಭಾವದಿಂದ
ನಿತ್ಯ ನಿರ್‍ಮಿಕಲ್ಪನು ನಿ ಮೇರು ಸೂರ್‍ಯ

ಕೋಟಿ ಕೋಟಿ ಬ್ರಹ್ಮಾಂಡ ಯಜಮಾನ
ಆದರೂ ಕೇಳಬಲೆ ನನ್ನ ಕ್ಷೀಣ ದನಿ
ನನ್ನ ಅಂತರಾಳದಿ ನಡೆದ ಆ ಚಿಂತನೆ
ನೀನು ಆಲಿಸಲುಂಟು ನೀ ಯಜಮಾನಿ

ಆಕಾಶ ಪಾತಾಳ ಭೂ ಮಂಡಲ ನಿನ್ನದು
ಮತ್ತೇ ಜೀವ ಜೀವರಲಿ ನನ್ನ ರೂಪ
ಆದರೂ ಚೈತನ್ಯದಾಗರ ನಿ ಮಾಯಾವಿ
ಸರ್‍ವರಿಗೂ ನೀಡಿರುವ ಭಿನ್ನ ಕೂಪ

ಆದಿಯೂ ಅಂತ್ಯವು ಇರದ ಈ ಆತ್ಮ
ಇದರ ಕಾರಣ ಕರ್‍ತ ನೀನೆ ದೇವ
ನನ್ನದನ್ನೆ ಮರೆತು ಇನ್ನೊಂದರಲಿ ಬೆರೆತು
ಆಡುವುದನ್ನು ನೀ ನೋಡುವೆ ನಕ್ಕು ದೇವ

ಕ್ಷಯದ ಬಾಳು ಇದು ಬರೀ ಕನಸು
ವಾಸ್ತವ ಕನಸುಗಳಲಿ ಬದುಕಿನಾಟ
ನಿನ್ನ ವಿಶಾಲನೇತ್ರದಲಿ ಕರಗುವಾಸೆ
ಮಾಣಿಕ್ಯ ವಿಠಲನ ನಿತ್ಯ ಒಡನಾಟ
*****