ಮಲ್ಲಿ – ೧೪

ಮಲ್ಲಿ – ೧೪

ಬರೆದವರು: Thomas Hardy / Tess of the d’Urbervilles

ನಾಯಕನಿಗೆ ಮಲ್ಲಿಯ ಯೋಚನೆಯಲ್ಲಿ ಗೀಳು ಹಿಡಿಯಿತು. ಲೋಕವೆಲ್ಲಾ ಈಗ ಆ ಹುಡುಗಿಯಲ್ಲಿ ಕೇಂದ್ರೀಕೃತವಾಗಿದೆ. ಆದರೂ ಜಗತ್ತು ಅದನ್ನು ತಿಳಿಯುವುದು ಅವನಿಗೆ ಬೇಡ. ತನ್ನಲ್ಲಿರುವ ಜೀವ ರತ್ನಗಳ ಗಂಟನ್ನು ಯಾರಿಗಾದರೂ ತೋರಿಸುವುದೂ ಉಂಟೇನು? ಹಾಗಿದೆ ನಾಯಕನ ಮನಸ್ಥಿತಿ.

ಅವನು ಲೋಕವನ್ನು. ಕಾಣದನನಲ್ಲ. ಪೋಲೀ ಬಸವನಿಗಿಂತ ಹೆಚ್ಚಾಗಿ, ತೋರಿದ ಆಟ ಆಡಿ, ತಾನಾಗಿ ಬಂದು ನೆಲೆಗೆ ನಿಂತವನು. ಅವನಿಗೇ ಆಶ್ಚರ್ಯ ತನ್ನ ಹೃದಯದ ತಂತಿಯನ್ನು ಒಂದು ಕಣ್ಣು ಬಿಡದೆ ಕಂದಮ್ಮ ಬಾರಿಸುವಳು ಎಂದರೆ ಅವನು ನಂಬಲಾರ. ಯಾರಾ ದರೂ ಕವೀಶ್ವರರು ಹೋಗಿ ನಾನೊಂದು ಮಲ್ಲೀ ಪುರಾಣ ಬರೆದಿದ್ದೇನೆ ಎಂದರೆ ನಾಯಕನು ಒಂದುಲಕ್ಷ ಕೊಡುವುದಕ್ಕೆ ಸಿದ್ದ.

ಊರಿನಲ್ಲಿ ಯಾರಿಗೂ ಆತನ ಹೃದಯದಲ್ಲಿ ಆ ಅಷ್ಟೇ ಆಳವಾಗಿ ಮಲ್ಲಿ ಮುಳುಗಿದ್ದಾಳೆ ಎಂಬುದು ತಿಳಿಯದಿದ್ದರೂ ಅತನ ಅಭಿಮಾನದ ಹೊಳೆ ಆ ಕಡೆಗೆ ನುಗ್ಗುತ್ತಿರುವುದು ಮಾತ್ರ ಎಲ್ಲರಿಗೂ ಗೊತ್ತು. ಆದರೆ ಅವರು ಹೇಳುವ ಕಾರಣ ಮಾತ್ರ ಬೇರೆ! ” ಸಾಮ್ರಾಜ್ಞಿ ಯ ಮೊಮ್ಮ ಗನ ಎದುರಿಗೆ ಹಾಡಿದವಳು ಅರಮನೆಯಿಂದ ಹತ್ತು ರೂಪಾಯಿ ಸಂಬಳ ಮಾಡಿಕೆೊಂಡವಳು ಅದೇ ಅದೃಷ್ಟ ನಾಯಕನ ಅಭಿಮಾನ ವನ್ನು ಸಂಪಾದಿಸಿಕೊಟ್ಟಿದೆ ” ಎಂದು ಎಲ್ಲರ ಭಾವನೆ. ಮುಂದಿನ ಫಲಕ್ಕಾಗಿ ನೆಟ್ಟ ತೆಂಗಿನ ತೋಟವನ್ನು ಇಂದು ಅಭಿಮಾನದಿಂದ ಸಾಕುವ ತೋಟಿಗನಂತೆ ಕೆಟ್ಟ ಕಣ್ಣಿನ ನೋಟನಿಂದ ನಾಯಕನು ಅವಳನ್ನು ನೋಡುತ್ತಿದ್ದಾನೆ ಎಂಬುದು ಯಾರಿಗೂ ತಿಳಿಯದು.

ಆದರೂ ನಾಯಕನು ಸೋಲುತ್ತಿದ್ದರೂ ‘ ವಚ್ಚ ‘ ಕೊಡದ ಜೂಜುಗಾರನಂತೆ, ತನ್ನ ಹೃದಯ, ತನ್ನ ಮರ್ಮ ಯಾರಿಗೂ ತಿಳಿಯಗೊಟ್ಟಿಲ್ಲ. ಎಂದಿನಂತೆ, ಬೆಳಗಿನ ಸ್ನಾನ, ಶಿವಪೂಜೆ, ಕಚೇ ರಿಯ ಕೆಲಸ, ಮಿತ್ರಗೋಷ್ಠಿ, ಎಲ್ಲವನ್ನೂ ನಡೆಸುತ್ತ ಇದ್ದಾನೆ. ಆದರೆ, ಒಂದೇ ಒಂದು ಕಳ್ಳ ಏಟು. ಮೊದಲಿಗಿಂತ ಕುಡುರೆಯ ಮೇಲೆ ತಿರುಗುವುದು ಹೆಚ್ಚಾಗಿದೆ. ಎಲ್ಲರೂ ನಾಯಕರು ಬಿರುದು ಪಡೆದಮೇಲೆ ಅವರಿಗೆ ಆಸ್ತಿ ಮೇಲಿನ ಗಮನ ಹೆಚ್ಚಾಯಿತು ಎನ್ನುವರು.

ಮಹಾರಾಜರ ವರ್ಧಂತಿ ಬಂತು. ನಾಯಕನಿಗೆ ಕರೆ ಬಂತು ಅರಮನೆಯ ಕರೆ, ಅದು ಮಾತಿಗೆ ಕರೆ: ಆದರೆ ನಿಜವಾಗಿ ಅದು ಸುಗ್ರೀವಾಜ್ಞೆ, ಹೋಗಲೇಬೇಕು. ನಾಯಕನಿಗೆ ಮನಸ್ಸಿಲ್ಲ. ಖಾಯಿಲೆ ಯೆಂದು ದುಪ್ಪಟಿಯನ್ನು ಹೊಡೆದುಕೊಂಡು ಮಲಗಿ ಬಿಡಲೇ ಎಂದು ಒಂದು ಮನಸ್ಸು. ಮಲ್ಲಿಯನ್ನು ಬಿಟ್ಟು ಹೋಗಲಾರ. ಕೊನೆಗೊಂದು ಗಳಿಗೆಯಲ್ಲಿ ಇತ್ಯರ್ಥ ಮಾಡಿಬಿಟ್ಟ : “ಅವಳನ್ನೂ ಕರೆದುಕೊಂಡು ಹೋಗುವುದು” ಎಂದು. ಅವಳೊಬ್ಬಳನ್ನೇ ಕರೆದುಕೊಂಡು ಹೋಗು ವುದು ಸಾಧ್ಯವಿಲ್ಲ: ಅದಕ್ಕಾಗಿ ಸಂನ್ನಾಸಿಯ ಸಂಸಾರದುತೆ ನಾಯ ಕನು ವರ್ಧಂತಿಗೆ ಸಪರಿವಾರನಾಗಿ ಹೋದ. ಕಾರಾಪುರದ ಕ್ಯಾಂಪಿನಲ್ಲಿ ಅಷ್ಟು ಅಭಿಮಾನವಾಗಿ ತನ್ನನ್ನು ಗೌರವಿಸಿದ ಮಹಾಪ್ರಭುವಿನ ಕರೆ ಮೀರಲಾರದೆ, ಮೈಸೂರಿಗೆ ಬಂದ.

ಮಹಾರಾಜರು ನಾಯಕನನ್ನು ವಿಶ್ವಾಸವಾಗಿ ಬರಮಾಡಿ ಕೊಂಡರು. ಅವನ ಜೊತೆಯಲ್ಲಿ ಬಂದಿದ್ದವರಿಗೆಲ್ಲಾ ಅರಮನೆಯ ಔತಣವಾಯಿತು. ಅರಮನೆಯನ್ನು ನೋಡಲು ಅಪ್ಪಣೆ ದೊರೆಯಿತು. ಎಲ್ಲರೂ ಮಹಾರಾಜರ ಅಭಿಮಾನದ ಹೊಳೆಯಲ್ಲಿ ಮಿಂದು ಮಡಿಯಾಗಿ ಸುಖಪಟ್ಟರು. ನಾಯಕನು ಸಪರಿವಾರನಾಗಿ ಒಂದು ವಾರ ರಾಜಾತಿಥಿ ಯಾಗಿದ್ದನು.

ಮಹಾರಾಜರು ನಾಯಕನನ್ನು ಒಮ್ಮೆ ವಸಂತ ಮಹಲಿಗೆ ಕರೆಯಿಸಿಕೊಂಡರು. ಆತನ ಆಸ್ತಿಪಾಸ್ತಿ ಸಾಲಸೋಲ ಎಲ್ಲವನ್ನೂ ವಿಚಾರಿಸಿದರು. ಆತನಿಗೆ ಅಪಾರವಾದ ಆಸ್ಮಿಯಿರುವುದನ್ನೂ ಸಾಲ ವಿಲ್ಲದಿರುವುದನ್ನೂ ಕೇಳಿ ಅವರಿಗೆ ಬಹು ಸಂತೋಷವಾಯಿತು.

“ನಾಯಕರೆ ತಾವು ಏನಾದರೂ ಓದುತ್ತೀರಾ ?”

ಪ್ರಶ್ನೆಯು ಸಹಜವಾಗಿ ಬಂತು. ಆದರೆ ನಾಯಕನು ಅದಕ್ಕೆ ಸಿದ್ಧವಾಗಿರಲಿಲ್ಲ. ತಬ್ಬಿಬ್ಬಾದನು. ಏನು ಹೇಳುವುದಕ್ಕೂ ತೋರ ಲಿಲ್ಲ. ಅವನು ಹಾಗೆ ಒದ್ದಾಡುತ್ತಿರುವುದನ್ನು ಗ್ರಹಿಸಿ ಅರಸರು ಮತ್ತಿ ಕೇಳಿದರು : “ತಮಗೆ ಹೊತ್ತು ಹೋಗುವುದಿಲ್ಲ ಎಂದಾಗಿ, ಜೈಮಿನಿ, ಭಾರತ, ರಾಮಾಯಣ ಓದುವುದಿಲ್ಲವೆ ?”

ನಾಯಕನಿಗೆ ಬದುಕಿದೆ. ಎನ್ನಿಸಿತು. ಹುಡುಗನಾಗಿದ್ದಾಗ ಅಯ್ಯಗಳು ತನಗೆ ಅವೆಲ್ಲ ಓದಿಸಿದ್ದುದೂ, ತಾನು ರಾಗವಾಗಿ ಗತ್ತಾಗಿ ಓದುತ್ತಿದ್ದುದೂ ನೆನೆಪಾಯಿತು. ಆಷ್ಟು ದೊಡ್ಡವರಲ್ಲಿ ಇಲ್ಲ ಎಂದು ಮಾನ ಕಳೆದುಕೊಳ್ಳಲಾರದೆ, ಕೊಂಚ ಸುಳ್ಳಾದರೂ ಚಿಂತೆಯಿಲ್ಲವೆಂದು, ಕೈಮುಗಿದುಕೊಂಡು ಹೇಳಿದನು : “ಮಹಾಪಾದ, ನಮಗೆ ಅಯ್ಯನವರು ಕಲಿಸಿದ್ದೇ ಅದು. ನಮ್ಮ ಕಾಲದಲ್ಲಿ ಈಗಿನಂಗೆ ಸ್ಕೂಲುಗೀಲು ಇರಲಿಲ್ಲ ಬುದ್ದಿ.”

“ದೊರೆಗಳು ನಗುತ್ತಾ ನುಡಿದರು : “ಬೆಟ್ಟದಷ್ಟು ಓದಿ ಠೇಂಕಾರ ಮಾಡುವ ವಿಚಾರವಲ್ಲ ನಾವು ಹೇಳಿದುದು. ತಾವು ಶ್ರೀಮಂತರು. ತಮಗೆ ಲಕ್ಷ್ಮಿ ಒಲಿದಿರುವ ಹಾಗೆ ಸರಸ್ವತಿಯಕಡೆ ತಾವು ಒಲಿದಕ್ಕೆ ಲೋಕಕ್ಕೆ ಕ್ಷೇಮ. ಅದರಿಂದ ತಾವು ವಿದ್ಯಾಪ್ರಿಯರಾಗಬೇಕು ಎಂದು ನಮ್ಮ ಆಶೆ. ತಾವು ಗಣೇಶನ ಹಬ್ಬ ಮಾಡುತ್ತೀರಲ್ಲ : ಆಗ ದರ್ಬಾರು ಗಣೇಶನನ್ನು ಕೂರಿಸುವುದು ಊಟುತಾನೆ! ?”

“ಉಂಟು ಮಹಾಪಾದ. ನಮ್ಮ ಅರಮನೆಯಲ್ಲಿ-ಅಲ್ಲ-ಮನೆ ಯಲ್ಲಿ.”

ದೊರೆಗಳು ನಗುತ್ತಾ. ಹೇಳಿದರು, “ತಾವು ಅರಮನೆಯಲ್ಲಿ ಎಂದರೆ ನಮಗೆ ಕೋಪವಿಲ್ಲ. ನಮ್ಮ ಪ್ರಜೆ ಒಬೊಬ್ಬರಿಗೂ ಅರಮನೆ ಕಟ್ಟುವ ಯೋಗ ಬಂದರೆ, ನಮಗೆ ಅದು ಕಿರೀಟ ಬಂದಂತೆ. ಮುಂದೆ ಹೇಳಿ. ತಮ್ಮ ಊರಿನಲ್ಲಿ, ತಮ್ಮ ಸರಹದ್ದಿನಲ್ಲಿ ಎಲ್ಲರಿಗೂ ಮನೆ ಬಾಗಿಲು ಉಂಟಷ್ಟೆ ?”

“ಈಗ ಮೂರುಮುಕ್ತಾಲು ಪಾಲು ಜನಕ್ಕೆ ಅದೆ ಪಾದ. ಇಲ್ಲಿಂದ ಹೋದಮೇಲೆ ಮನೆಯಿಲ್ಲದಿದ್ದ ಪಾಪಿ ಪರದೇಸಿಗಳಿಗೆ ಜೋಪಡಿ ನಾದರೂ ಹಾಕಿಸಿಕೊಡುತೀನಿ.”

“ನಾವು ಹೋಗುವಾಗ ಈ ಐಶ್ವರ್ಯ ಇರಲಿ, ಒಂದು ಮರಳಿನ ಕಣವೂ ನಮ್ಮ ಜೊತೆಯಲ್ಲಿ ಬರುವುದಿಲ್ಲ. ಅದರಿಂದ ದಾನಮಾಡಿ, ಕೊಡಿ. ಉಪನಿಷತ್ತು ಎಂದು ಕೇಳಿದ್ದೀರಾ? ಅಲ್ಲಿ ಜೀವರ ಬಳಿಗೆ ಮಾನವರು ಹೋಗಿ ಉಪದೇಶ ಕೇಳಿದಕತೆ ಬಂದಿದೆ. ಆಗ ದೇವರು ದಂ ಎಂದರಂತೆ. ಮಾನವರು ಸರಿ ಎಂದರಂತೆ. “ದಂ ಎಂದರೆ ದತ್ತ ಕೊಡಿ ಎಂದು ಹೇಳಿದಿರಿ. ನಾನು ಸಹಜವಾಗಿ ಲೋಭಿಗಳು-ಕೈಯು ಕೊಳ್ಳುವುದಕ್ಕೆ ಮುಂದೆ ಹೋಗುವಷ್ಟು ಕೊಡುವುದಕ್ಕೆ ಹೋಗುವು ದಿಲ್ಲ” ಎಂದರಂತೆ. ಅದು ನೆನೆಪಿರಲಿ. ನಾಯಕರೆ ತಮಗೆ ಕೊಟ್ಟ ದೇವರು, ಇಲ್ಲದವರಿಗೆ ಕೊಡು, ಅವರು ನನ್ನನ್ನು ಕಾಣರು ಕೊಡವ ನಿನ್ನಲ್ಲಿ ನನ್ನನ್ನು ಕಾಣಲಿ ಎಂದೇ ಹೇಳುವುದು. ಅಲ್ಲವೆ? ನೋಡಿ. ಮೋಡ ನಮಗೆ ನೀರು ಕೊಡದಿದ್ದರೆ ನಾವು ಬದುಕ ಲಾದೀತೆ ? ಆ ನೀರು ನಾನೇ ತಡೆದುಕೊಂಡರೆ ಆದೀತೆ ? ಅದು ತಡೆ ದಿಟ್ಟರೂ ವಿವರಣವಾಗಿ ಹಂಚಬೇಕು. ಅದು ದೇವರ ಇಷ್ಟ ! ತಾವೂ ಹಾಗೇ ಮಾಡಿ. ಆಯಿತು, ಗಣೇಶನ ವಿಚಾರ ಕೇಳಿದೆನು ಅಲ್ಲ? ಹೇಳಿ. ತಮ್ಮ ಅರಮನೆಯಲ್ಲಿ- ಮುಂದಕ್ಕೆ?”

ನಾಯಕನಿಗೆ ಅವರ ಮಾತು ನೀರಿನಲ್ಲಿ ಹಾಕಿದ ಸೀಸದ ಗುಂಡಿನ ಹಾಗೆ ಹೃದಯದ ಅಂತರಾಳದಲ್ಲಿ ಹೋಗಿ ನೆಲಸಿತು. “ಇದಕ್ಕೇ ಏನೋ ಈ ಪುಣ್ಯಪುರುಷ ದೊರೆಯಾಗಿರೋದು ?” ಎಂದು ಎದೆಯುಬ್ಬಿತು. “ಹೀಗೆ ಮಾಡಿ ಈ ದೇವರಿಂದ ಸೈಎನಿಸಿ ಕೆೊಳ್ಳಲೇ ಬೇಕು” ಎಂದು ಮನಸ್ಸು ನಿರ್ಧರಿಸುತ್ತಿರುವಾಗ ಮತ್ತೆ ಗಣೇಶನ ವಿಚಾರ ಬಂತು. ನಾಯಕನು ಥಟ್ಟನೆ ಎಚ್ಚೆತ್ತು ಕೊಂಡು ಹೇಳಿದನು.

“ಸುಮಾರು ಮುನ್ನೂರು ನಾನೂರು ವರ್ಷದ್ದು ಬೆಂಡಿನ ವಿನಾಯಕ ಅದೆ ಮಹಾಪಾದ! ಈ ಹಬ್ಬ ಬಂದರೆ ದಿನಕ್ಕೊಂದು ಪಲ್ಲಾ ಪಂಚಕಜ್ಜಾಯ, ನೂರೆಂಟು ಇಡುಗಾಯಿ, ಒಂದು ಬೆಂಡು ಗೂಡೆ ಹುರಿಗಡುಬು ನೇವೇದ್ಯ ಮಾಡಿ ಊರಗೆಲ್ಲ ಹಂಚೋದು ಹಿಂದಿನಿಂದ ನಡೆದು ಬಂದದೆ ಬುದ್ದಿ, ಆಗ ದೇಶ ದೇಶದ ವಿದ್ವಾಂಸರನ್ನ ಸಂಗೀತಗಾರರನ್ನ, ಕರಿಸಿ, ಅವರಿಗೆಲ್ಲ ಬಹುಮಾನ ಮಾಡುತಿದ್ದರಂತೆ. ಈಗ ಆ ಇಪ್ಪತ್ತೊಂದು ದಿನ ಭಾರತ ಓದಿಸ್ತೀವಿ ಬುದ್ಧಿ, ತಮ್ಮ ಅಪ್ಪಣೆ ಆಗದೆ: ಈ ಸಲ ವಿದ್ಚುಂಸರನ್ನ ಕರೆಸುತೀನಿ ಪಾದ.”

“ಬಹಳ ಒಳ್ಳೇದು. ನಮ್ಮ ದೇಶಕ್ಕೆ ಶಾರದೆಯನ್ನು ಕರೆತಂದ ವರು ಸನ್ಯಾಸಿಗಳು. ಆದರೆ ಆಕೆ ಇಲ್ಲಿಯೇ ಇರುವಂತೆ ಇರಿಸಿ ಕೊಳ್ಳುವ ಕೆಲಸ ಶ್ರೀಮಂತರದು. ಅವರು ಅದಕ್ಕಾಗಿ ಅಷ್ಟು ಯತ್ನ ಮಾಡಿಸಿಲ್ಲ. ಆಗುತ್ತದೆ ಅನ್ನೋಣ. ತಾವು ಭಾರತ ಓದಿಸುತ್ತೀರಲ್ಲ ಅರ್ಥವನ್ನೂ ಹೇಳಿಸುತ್ತಿರೋ ?”

“ನಮ್ಮ ಶಾನುಭೋಗರೂ ನಾನೂ ಒಟ್ಟಿಗೇ ಓದೋದು ಕಲಿತೋ. ಈಗ ಅವರೇ ಓಡೋದು.”

“ಅರ್ಥವನ್ನೂ ಹೇಳಿಸಿ. ಇಲ್ಲಿ ನಮ್ಮ ಅರಮನೆಗೆ ಈಶಾನ್ಯ ವಾಗಿ ತೃಣೇಶ್ವರನ ದೇವಸ್ಥಾನವಿದೆ. ಅದರ ಮಗ್ಗುಲಲ್ಲಿ ದಿನವೂ ಭಾರತ ಓಡುತ್ತಾರೆ. ದೇವುಡು ಶಾಸ್ತ್ರಿಗಳು ಓದುತ್ತಾರೆ: ರಂಗಣ್ಣ ನವರು ಅರ್ಥ ಹೇಳುತ್ತಾರೆ. ಒಂದು ದಿನವಾದರೂ ಹೋಗಿ ಕೇಳಿ ಬನ್ನಿ. ಹಾಗೆ ಊರು ಊರಿನಲ್ಲಲ್ಲ, ಕೇರಿ ಕೇರಿಯಲ್ಲೂ ಆದ ದಿನ ನಮ್ಮ ಸಂತೋಷಕ್ಕೆ ಪಾರವಿಲ್ಲ. ”

“ಅಪ್ಪಣೆ ಬುದ್ಧಿ ”

ನಾಯಕರೇ, ನೆನೆಪಿರಲಿ, ತ್ರೀಮಂತರೆಂಬ ಕೆರೆಗೆ ಕೋಡಿ ಬಿದ್ದರೆ ತಪ್ಪಿಲ್ಲ. ತೂಬಿನಲ್ಲಿ ನೀರು ಹರಿದು ಕೆರೆ ಬರಿದಾದರೂ ಅದಕ್ಕೆ ಅದು ಕೀರ್ತಿ. ಆದರೆ ಕಟ್ಟೆಯೊಡೆದರೆ ಕೆಡುವುದು ಕೆರೆ ಯೊಂದಲ್ಲ : ಊರಿಗೆಗಊರೇ ಕೆಡುವುದು. ಅದು ನೆನೆಸಿರಲಿ.”

ನಾಯಕನಿಗೆ ತಾನು ಇರುವುದು ರಾಜ್ಯವಾಳುವ ದೊರೆಯ ಬಳಿಯಲ್ಲಲ್ಲ: ಲೋಕೋದ್ಧಾರ ಮಾಡುವ ಮಹರ್ಷಿಯ ಬಳಿಯಲ್ಲಿ ಎನ್ನಿಸಿತು. “ಇದು ಉಪದೇಶ ಬುದ್ದಿ ; ಈಜನ್ಮ ಇರೋತನಕ ಇದು ಮರೆಯೋಕಿಲ್ಲ. ಸಾಕ್ಷಾತ್ ಶಿವನೆ ಅಪ್ಪಣೆ ಅಂತ ತಲೆ ಮೇಗಿ ಟ್ಟುಕೊಂಡು ನಡೀತೀನಿ” ಎಂದು ಸಾಷ್ಟಾಂಗ ನಮಸ್ಕಾರ ಮಾಡಿ ಅಲ್ಲಿಂದ ಹೊರಟು ಬಂದನು. *****
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಡನಾಮ
Next post ಸಣ್ಣ ನಾಮದ ಹುಡಗಾ

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…