ನನ್ ಪುಟ್ನಂಜಿ ನಕ್ರೆ

ಮೂಗ ಆದಂಗ್ ಆಗ್ತೀನ್ ನಾನು
ನನ್ ಪುಟ್ನಂಜಿ ನಕ್ರೆ!
ಆಡಬೇಕಂದ್ರೆ ಮಾತೇ ಸಿಕ್ದು
ಉಕ್ ಬರ್‍ತಿದ್ರೆ ಅಕ್ರೆ-
ನನ್ ಪುಟ್ನಂಜಿ ನಕ್ರೆ! ೧

ಲಕ್ಕಂತ್ ಮತ್ತ್ ನಂಗ್ ಅತ್ಕೋಂತೈತೆ
ನನ್ ಪುಟ್ನಂಜಿ ನಕ್ರೆ!
ಝಮ್ಮಂತ್ ಇಗ್ತ ಪದವಾಡ್ತೀನಿ
ಆ ಮತ್ತ್ ನನಗಾಗ್ ಮಿಕ್ರೆ-
ನನ್ ಪುಟ್ನಂಜಿ ನಕ್ರೆ! ೨

ಆಡೋಕ್ ಅಳತೆ ಗಿಳತೆ ಇಲ್ಲ
ನನ್ ಪುಟ್ನಂಜಿ ನಕ್ರೆ!
ಮಾನ ಗ್ನಾನ ಎಲ್ಲಾನೂನೆ
ತಿನ್ನೋದೊಂದೆ- ಠೋಕ್ರೆ!
ನನ್ ಪುಟ್ನಂಜಿ ನಕ್ರೆ! ೩

ಅರಳ್ತ ವೊರಳ್ತ ಕಣ್ಣಿನ್ ಬೆಳಕು-
ನನ್ ಪುಟ್ನಂಜಿ ನಕ್ರೆ!
ಎಂಗಿರತೈತೆ ಮಲ್ಗೆ ವೂನಾಗ್
ತಿಂಗಳ್ ಬೆಳಕು ವೊಕ್ರೆ-
ಅಂಗೈತ್ ನಂಜಿ ನಕ್ರೆ! ೪

ಫಳ್ಳಂತ್ ಅಲ್ಲಿನ್ ಬೆಳಕ್ ಉಕ್ತೈತೆ
ನನ್ ಪುಟ್ನಂಜಿ ನಕ್ರೆ!
ರೆಕ್ಕೆ ಬಿಳುಪನ್ ತೆಗದ್ ಎರಚ್ದಂಗೆ
ಸಾನ ಮಾಡಿದ್ ಕೊಕ್ರೆ
ನನ್ ಪುಟ್ನಂಜಿ ನಕ್ರೆ! ೫

ನಾರದನ್ ಯಾಣೆ ನಿಲ್ಲಾಕಿಲ್ಲ
ನನ್ ಪುಟ್ನಂಜಿ ನಕ್ರೆ!
ತುಂಬ್ರ ತನ್ ಆಡ್ ಅಡಗಿಸ್ತಾನೆ
ನನ್ ಪುಟ್ನಂಜಿ ನಕ್ರೆ!
ವಜ್ರದ್ ಮುಂದಾ ಬಕ್ರೆ! ೬

ಲೋಕಾನೇನೆ ಮೆಚ್ಕೋಂತೈತೆ
ನನ್ ಪುಟ್ನಂಜಿ ನಕ್ರೆ!
ಮೆಚ್ಕೊಂಡ್ ಯೋಳ್ತೈತ್: ‘ನಂಜಿ ನಕ್ಕಾಗ್
ಸದ್ ಮಾಡೋನ್ಗೆ ಥೂಕ್ರೆ!’
ನನ್ ಪುಟ್ನಂಜಿ ನಕ್ರೆ! ೭

ಕದಲಾಕ್ ಆಗ್ದು ಕಟ್ಟಾಕ್ದಂಗೆ
ನನ್ ಪುಟ್ನಂಜಿ ನಕ್ರೆ!
ಚಾಕ್ರಿ ಗೀಕ್ರಿ ಎಲ್ಲಾ ಕೂನೆ
ಆ ವೊತ್ತೆಲ್ಲ ಚಕ್ರೇ-
ನನ್ ಪುಟ್ನಂಜಿ ನಕ್ರೆ! ೮

ಯಿಂಗಿಂಗೇಂತ ಯೋಳಾಕ್ ಆಗ್ದು
ನನ್ ಪುಟ್ನಂಜಿ ನಕ್ರೆ!
‘ಸೀ’ ಅನ್ನಾದು ಸಬ್ದ ಮಾತ್ರ!
ತಿಂದ್ ನೋಡ್ಬೇಕು ಸಕ್ರೆ!
ನೋಡ್ಬೇಕ್ ನಂಜಿ ನಕ್ರೆ! ೯
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈತಳೆದ ಕರುಣೆ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…