ಇನ್ನು ನೀನೆನ್ನವನು ನಾನಿನ್ನು ನಿನ್ನವನು ಇಂದಿನಿಂದೆ, ಇಂದಿನಿಂದ ಮುಂದೆ. ನಿನ್ನ ನೆನವುದೆ ಚನ್ನ, ನಿನ್ನ ಕನವುದೆ ನನ್ನ ದಿನದ ಬಾಳು, ನನ್ನ ಮನದ ಕೂಳು. ಮಳೆಯೆ ಬೇಸಗೆಯಾಸೆ ಯಂತೆ ನನ್ನ ಪಿಪಾಸೆ ಯೆದೆಯ ನೀನೆ ತಣಿಪ ಸೊದೆಯ ಸೋನೆ. ಮುಚ್ಚುಕಿಟಿಕಿಯ...

ಹುಟ್ಟುವುದಿದ್ದರೆ ಮರುಜನುಮದಲಿ ಕನ್ನಡ ನಾಡಲ್ಲೆ ಈ ಚಿನ್ನದ ಬೀಡಲ್ಲೆ ಹುಟ್ಟದಿದ್ದರೂ ಮಾನವನಾಗಿ ಕಾವೇರಿಯಲಿರುವೆ – ಅಲ್ಲಿ ಹನಿಹನಿಯಾಗಿರುವೆ – ಕನ್ನಡ ಹೊಂಬೆಳೆ ಸಿರಿ ತರುವೆ ಹಾಡದಿದ್ದರೂ ಗಾಯಕನಾಗಿ ಕೋಗಿಲೆಯಾಗಿ ಇರುವೆ –...

ಕನ್ನಡದಾ ಕಸ್ತೂರಿ ನೀನಾಗಿ ಬೆಳೆದು ಕನ್ನಡದಾ ಹೊನಲ ಬಾಳಿನಂದದಿ ನಲಿದು ಒಂದಾಗಿ ಹಾಡೋಣ ಕನ್ನಡವೇ ಉಸಿರು ಮನ ಅಭಿಮಾನದಿ || ಮೂಡಣದಾ ರವಿಕಿರಣವು ಧರೆಗೆ ಮುಖ ಚೆಲ್ಲಿ ನಿಂದು ಬೆಳದಿಂಗಳ ಹೊತ್ತಿಕೆಯ ಮಡಿಲಲ್ಲಿ ಒಂದಾಗಿ ಬೆಸೆದು ಹಾಡೋಣ ಕನ್ನಡವೇ ಉಸಿ...

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಪ್ರದರ್‍ಶನಕ್ಕಿಟ್ಟ ಮೂಕಮೃಗದಂತೆ ಸುತ್ತ ತಿರುಗುವೆನು ನಾನು, ನಾನು ಯಾರು ಎನ್ನುವುದೆ ತಿಳಿಯದು, ಎಲ್ಲಿ ಹೊರಟಿರುವೆ ಏನು? ನನಗೆ ಗೊತ್ತಿರುವುದೊಂದೇ ಮಾತು ಪ್ರೇಮಿಸಿರುವೆ ನಾನು, ನಾಚಿಕೆ – ಗೇಡಿ ಪೂರ ನಾನು....

ಈಕೆ ನನ್ನ ಯಶೋದೆ, ಇವಳೆನ್ನ ಸಲಹುವಳೊ ನಾನಿವಳ ಸಲಹುವೆನೋ ನನಗರಿದು. ಕೈಯೆತ್ತಿ ರೆಕ್ಕೆಯೊಲು ಬಡಿವಾಗ, ಕಣ್ಣನರಳಿಸಹತ್ತಿ ಕುಲುಕುಲನೆ ನಗುವಾಗ,- ಇವಳೆ ಅನುಭವಿಸುವಳೊ ಹಿರಿದಾದ ಸಂತಸವ, ನಾನೊ? ಇದು ನನಗರಿದು. ಕೇಕಿಯನು ಹಾಕಿವಳು ಕುಣಿದು ಕಳೆಯೇರು...

ರೂಪ ವಸಂತ ರೂಪ ಸುಂದರ ಪ್ರೇಮ ಪೂರ್‍ಣನೆ ಶಿವಶಿವಾ ನೀನೆ ಶೀತಲ ನೀನೆ ಕೋಮಲ ನೀನೆ ನಿರ್‍ಮಲ ವರಪ್ರಭಾ ಸುಖದ ವರ್‍ಷಾ ಪ್ರೀತಿ ಹರ್‍ಷಾ ಶಾಂತ ಸುಂದರ ವಸುಂಧರಾ ನಗುವ ಚಂದಿರ ಚಲುವ ಮಂದಿರ ಭುವನ ಪ್ರೇಮದ ಹಂದರಾ ನಿನ್ನ ನೆನಪು ಕಂಪು ತಂಪು ವಿಮಲ ಕೋಮಲ ...

ಪುಟ್ನಂಜಿ! ಬಿರ್‍ಬಿರ್‍ನೆ ಬಾಗಿಲ್ನ ತೆರದಿಕ್ಕು ಬೇವಾರ್‍ಸಿ ಬಂದೌನೆ ಕಾಯ್ತೌನೆ- ತಡವಾದ್ರೆ ಗಾಳ್ಯಾಗಿ ಬಂದು ಬಡದೇನು. ೧ ನನ್ ರತ್ನ! ನೀ ಬಂದು ಬಡಿಗಿಡಿಯೋದ್ ಎಲ್ಬಂತು? ಗಾಳ್ಯಾಗಿ ನೀ ಬಂದ್ರೆ ನನಗೇನು-ನಾನೊಂದು ಮೀನಾಗಿ ವೊಳೆಯಾಗ ಮುಳುಗೇನು. ೨...

ಹಣ್ಣೆಲೆಯು ಹಾರುತಿರೆ, ನೀರಿನುಗೆಯಾಗುತಿರೆ ದಿನದ ಬಿಸಿಲಿಗೆ ಹೂವು ಬಾಡುತಿರಲು, ಮೈಗರೆದು ಮಿಡುಕುತಿದೆ ಮೂಕ ಶೋಕವು, ಸೃಷ್ಟಿ ಕೋಗಿಲೆಯ ಕೊರಳಿನಲಿ ಹಾಡುತಿರಲು. ಮನದ ಮಗಳಾದ ನುಡಿ ಹುರುಳಿನಲಿ ನರಳುತಿದೆ. ಹಾಡು ನೆಲೆಗಾಣದಲೆ ನವೆಯುತಿಹುದು. ಬಾಳಸ...

ಹಸಿದು ಹಸಿಯುಣುವವರ ಕಂಡು ಮರುಗುತಲದಕೆ ಬಿಸಿ ಉಪ್ಪಡುಗೆ ರುಚಿಯನು ಕೊಟ್ಟುಪಚರಿಸಿದರೆ ಭಲೆ ಎನಬಹುದು ಹುಸಿ ಭರವಸೆಯ ಉಪ್ಪನೆಲ್ಲರಷ್ಟಷ್ಟಿಡುತಿರಲತಿಯಾಗಲದ ನು ಸರಿಪಡಿಸೆ ಸುರಿದ ನೀರತಿಯಾಗಿ ಮಿಕ್ಕಿದಡುಗೆಯ ಗಬ್ಬು ವಾಸನೆಗೆಲ್ಲರಾ ಹೊಟ್ಟೆ ತೊಳಸುತಿ...

ನವಲ ಕಂಡೀರಾ ನಮ್ಮ ನವಲ ಕಂಡೀರ್‍ಯಾ? ಕಡಲೀಯಾ ಹೊಲದಾಗ ಇತ್ತ ನಮ್ಮ ನವಲು || ೧ || ನವಲ ಕಂಡೀರ್‍ಯಾ ನಮ್ಮ ನವಲ ಕಂಡೀರ್‍ಯಾ? ಗೋದಿಯಾ ಹೊಲದಾಗ ಇತ್ತ ನಮ್ಮ ನವಲು ನವಲ ಕಂಡೀರಾ ನಮ್ಮ ನವಲ ಕಂಡೀರ್‍ಯಾ ? || ೨ || ರಾಗೀಯ ಹೊಲದಾಗ ಇತ್ತ ನಮ್ಮ ನವಲು ನ...

1...9192939495...885

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...