ರೂಪ ವಸಂತ ರೂಪ ಸುಂದರ
ಪ್ರೇಮ ಪೂರ್‍ಣನೆ ಶಿವಶಿವಾ
ನೀನೆ ಶೀತಲ ನೀನೆ ಕೋಮಲ
ನೀನೆ ನಿರ್‍ಮಲ ವರಪ್ರಭಾ

ಸುಖದ ವರ್‍ಷಾ ಪ್ರೀತಿ ಹರ್‍ಷಾ
ಶಾಂತ ಸುಂದರ ವಸುಂಧರಾ
ನಗುವ ಚಂದಿರ ಚಲುವ ಮಂದಿರ
ಭುವನ ಪ್ರೇಮದ ಹಂದರಾ

ನಿನ್ನ ನೆನಪು ಕಂಪು ತಂಪು
ವಿಮಲ ಕೋಮಲ ನಿರ್‍ಮಲಾ
ಎದೆಯ ನೋವು ಮನದ ಬಾವು
ಘಾಯ ಮರೆಸಿತು ಗುರುಬಲಾ

ಶಾಂತಿ ಸಾಗರ ಪ್ರೀತಿ ಸಾಗರ
ನನ್ನ ನಿನ್ನೊಳು ತೇಲಿಸು
ಜ್ಞಾನ ಸಾಗರ ಶಕ್ತಿ ಸಾಗರ
ನನ್ನ ನಿನ್ನೊಳು ಕರಗಿಸು
*****