
ಯುದ್ಧ ದಾಳಿಗಳಿಗೆ ತತ್ತರಿಸಿದ್ದಾರೆ ನನ್ನ ಜನ. ರಂಜಾನ ಹಬ್ಬದ ಈದೀಯಾಗಿ ಕೇಳುತ್ತಿದ್ದೇನೆ ಒಂದು ಚುಟುಕು ನೆಮ್ಮದಿಯ ಚೂರು ದಯಾಮಯ ಅಲ್ಲಾಹ್ನಲಿ ಕೈಯತ್ತಿ ಬೇಡುತ್ತಿರುವೆ ನಮಗೆ ಮನುಷ್ಯತ್ವದ ವರವ ನೀಡೆಂದು. ಜಗತ್ತು ಎಷ್ಟೇ ಹೊತ್ತಿ ಉರಿದರೂ ಏನಂತ...
ಜಗದಗಲ ಧಗಧಗಿಸುವೀ ಸಮರದಲ್ಲಿ ಲಕ್ಷಶಃ ಸಾಯೆ, ಲಕ್ಷಾಂತರಂ ಸೀಯೆ, ಹಸಿವೆ ಬೇನೆಯಿನಿನ್ನೆನಿತೊ ಲಕ್ಷ ಬೀಯೆ, ನಿಜವೀರರಾರಂತೆ ಈ ಅಮರರಲ್ಲಿ? ಗೆಲವೆ ವೀರತೆಯಲ್ಲ. ಅನ್ಯರದನೆಲ್ಲಾ ಕಸಿಯೆ ಕಾದಿಸುವ, ಕಾದುವ ವೀರರಲ್ಲ. ಒತ್ತಿಬರೆ ತನ್ನಿಳೆಗೆ ಕಾದಲಾರೊಲ...
ಸ್ವರ್ಗವೆಂದರೆ ಇಲ್ಲೆ ಕನ್ನಡ ನಾಡಲ್ಲಿ ನಲುಮೆ ಗೆಲುಮೆ ಒಲುಮೆ ಎಲ್ಲ ನಿತ್ಯ ನೋಡಿಲ್ಲಿ ಚೆಲುವು ಬೆಡಗು ಹಸಿರ ಮೆರಗು ಎಂದೂ ಹಸಿರಾಗಿ ತಣಿಸಿದೆ ಕಣ್ಮನ… ಉಣಿಸಿದೆ ಹೂರಣ… ಚೆಲುವಿನ ಸಲೆಯಾಗಿ ಪಂಪ ನಾರಣಪ್ಪರ ರನ್ನ ರಾಘವಾಂಕರ ಕಾವ್ಯ ಜ...
ಕನ್ನಡತನವು ನಮಗಿರಲು ಹರಿವುದು ಆನಂದದ ಹಾಲ್ಗಡಲು ಕನ್ನಡತನವು ನಮಗಿರಲು ಅದುವೇ ಸಂತೋಷದ ಹೊನಲು|| ಕನ್ನಡತನದ ಹಿರಿಮೆಯಲಿ ಕಾನನದೊಳಗಣಾ ಮೃಗ ತೃಷ್ಣೆ ಹಸಿರೇ ಉಸಿರಾಗಿಹ ನೆಲಜಲ ಸುತ್ತಣ ಗಿರಿಶೃಂಗಚಿತ್ತ ಲೀಲೆ|| ಕನ್ನಡತನದ ಗರಿಮೆಯಲಿ ಮಾನಸ ಬಿತ್ತರದ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಜಯವಾಗಲಿ ಕ್ರಾಂತಿಗೆ, ಫಿರಂಗಿ ಗುಂಡಿನೇಟಿಗೆ! ಕುದುರೆಯೇರಿ ಕುಳಿತ ತಿರುಕ ಕೆಳಗೆ ನಿಂತ ತಿರುಕನನ್ನ ಚಾಟಿಯಿಂದ ಥಳಿಸುವ. ಕ್ರಾಂತಿಗೆ ಜಯವಾಗಲಿ, ಗುಂಡು ಮತ್ತೆ ಹಾರಲಿ! ತಿರುಕರಿದ್ದ ಜಾಗವೀಗ ಅದಲು ಬದಲು ಆಗಿದೆ, ಚಾ...
ಜಾತಿ ಜಂಗಮ ಸಾಕು ಜ್ಯೋತಿ ಜಂಗಮ ಬೇಕು ಲಿಂಗ ತತ್ತ್ವದ ಬೆಳಕು ಕಾಣಬೇಕು ಕೋತಿ ಭಾವನೆ ಸಾಕು ನೀತಿ ಜೀವನ ಬೇಕು ವಿಶ್ವ ಜಂಗಮ ದೀಪ ಬೆಳಗಬೇಕು ಶಬ್ದದಾಚೆಗೆ ಸಾಗು ಅರ್ಥದಾಚೆಗೆ ಹೋಗು ಶಬ್ದಾರ್ಥ ಗಡಿಯಾಚೆ ಅರುಹು ಚಾಚು ದೇಹ ಢಂಗುರ ದಾಟು ಆತ್ಮ ಡಿಂಢ...
ಮಸಣಕೊಯ್ದ ಹೆಣವಿದನು ಸುಟ್ಟು ಕಳೆಯೆಂದು ಮಾರುಕಟ್ಟೆಗೊಯ್ದ ಕೃಷಿ ಸರಕುಗಳನವಗಣನೆ ಮಾಡುತಲಿ ಬೆಳೆದಿಹರೆಮ್ಮ ವರ್ತಕರು ಮಸಣವಾಸಿಗಳವರು ಮಾರಿದಾ ಹೊಲಸು ಮ್ಹಾಲನು ತಿನುವರಲಾ ನಗರವಾಸಿಗಳು – ವಿಜ್ಞಾನೇಶ್ವರಾ *****...













