ಅವನು-, ಸ್ವಚ್ಛಂದವಾಗಿ ನಗುವ ಜೋಡಿಗಳನು ನೋಡಿ ಕರಬುತ್ತಿದ್ದೇನೆ ಕಿಲುಬುಗಟ್ಟಿದ ಗೊಡ್ಡುಯೋಚನೆಗಳಿಗೆ ಸೋನೆ ಮಳೆ ಸುರಿಸು. ಅವಳು-, ಚಂದಿರ ನಗುನಗುತ ಬೆಂಕಿಹಚ್ಚಿದರೆ ಸೂರ್ಯ ಉರಿದುರಿದು ಕರಕಲಾಗಿಸಿದ ಪ್ರೀತಿಯ ಮಾತುಗಳಿಂದ ಒಮ್ಮೆಯಾದರೂ ಕಣ್ಣೀರು ...

ನಾವೈದು ಜನ ಪಾಂಡವರು ಯುದ್ದ ಮಾಡೆವು ಕೌರವರೊಡನೆ ಅನುಭವಿಸೆವು ಸಾಮ್ರಾಜ್ಯವನೆ ಇದು ಕಲಿಯುಗ ಸುಮ್ಮನಿರಬೇಕಣ್ಣ ದೊರೆಯಲು ಮುಕುತಿಯ ಮಣ್ಣ ನಾವೈದು ಜನ ಕೂಡಿದರೆ ಮುಷ್ಟಿಯಾದೇವು ಅಗಲಿದರೆ ಹಸ್ತವಾದೇವು ಅಂಗೈಲಿ ಕಮಲ ಹಿಡಿದೇವು ಹೊತ್ತೇವು ತೆನೆ ತಲೆಯ...

ಏನೀ ಸೃಷ್ಟಿಯ ಚೆಲುವು ಏನು ಇದರ ಗೆಲುವು! ಈ ಚೆಲುವಿನ ಮೂಲ ಏನು, ಯಾವುದದರ ಬಲವು? ಹಾಡುವ ಹಕ್ಕಿಯೆ ಮೋಡವೆ ಓಡುವ ಮರಿತೊರೆಯೇ ಕಾಡುವ ಹೆಣ್ಣೇ ಪರಿಮಳ ತೀಡುವ ಮಲ್ಲಿಗೆಯೇ ಎಳೆಯುವ ಸೆಳವೇ ಜೀವವ ಸುಲಿಯುವ ಸವಿನೋವೇ ಕಾಮಿಸಿ ಮಾತ್ರವೆ ಕಾಣುವ ದರ್ಶನದಾ...

ರಣಗುಡುವ ಬಿಸಿಲಿಗೆ ಚೈತ್ರನ ಸವಾಲು ಎಲ್ಲೆಂದರಲ್ಲಿ ಚಪ್ಪರ ಹೊದೆಸುವ ಭರಾಟೆಯ ಕೆಲಸ ನೂಕು ನುಗ್ಗುಲಾಟ ಗಿಡಮರಬಳ್ಳಿಗಳಿಗೆ. *****...

ಮೂಢತನವು ಸೇರಿತೇ ರೂಢೀಶ ನಿನ್ನಗೆ ಬ್ಯಾಡ ಶಿವನ ಕೂಡ ಹಗೆ ||ಪ|| ಜನನ ಸ್ಥಿತಿ ಸಂಹಾರ ಕರ್ತ ಘನ ಮಹೇಶನು| ತಾ ಯಾರಿಗೆ ಸಿಲುಕನು ||೧|| ಮನಕೆ ತಿಳಿಯೋ ಜನಕ ನಿನ್ನ ತನುಜೆ ಮಾತನು | ನಾ ಮುಗಿವೆ ಕೈಯನು ||೨|| ಅದಿ ಅಂತ್ಯವಿಲ್ಲದ ಪರನಾದ ಭಾವವೋ ತಿಳ...

ಆನಂದಮಯ, ಜಗಜನನೀ, ಒಡಲ ಸಾಮ್ರಾಜ್ಯ! ನವ ನವ ಮಾಸಗಳೋ… ಸ್ವರ್ಗ ಸೋಪಾನವೇ… ನವ ನವ ವಸಂತದ, ಚೈತ್ರ ಯಾತ್ರೆ… ಅಲ್ಲಿಲ್ಲ; ಹಸಿವು, ಬಾಯಾರಿಕೆ, ಬೇಸರಿಕೆ! ಭೇದಭಾವ! ಮುಕ್ಕೋಟಿ ದೇವರುಗಳ, ನಿತ್ಯ ದಿವ್ಯ ದರ್ಶನವಿಹುದು… ಸ...

ರಾತ್ರಿ ಸೂರ್ಯ ಎಲ್ಲಿಗೆ ಹೋಗ್ತಾನೆ? ಅಪ್ಪ ಎಲ್ಲಿಗೆ ಹೋತ್ತಾನೆ? ಅದೆಲ್ಲಾ ಕೇಳ್ಬೇಡಾ ಸುಮ್ಮನೆ ಕಣ್ಮುಚ್ಚಿ ಮಲಕ್ಕೋ ಪುಟ್ಟು ಅದೆಲ್ಲಾ ನಿನಗೆ ಅರ್ಥವಾಗೋದಿಲ್ಲ ನೀನಿನ್ನು ಸಣ್ಣವನು. *****...

ದಾರಿ ಬಿಡಿರೋ ಇವನಿಗೆ, ಉಸಿರು ಕಟ್ಟಬೇಡಿ, ದಾರಿ ಕಟ್ಟಬೇಡಿ ಹುಲಿಕರಡಿಗಳಂತೆ ಹೆದರಿಸಬೇಡಿ ಮರಿಗಿಳಿಯಂತಿವನು ಕತ್ತಿ ಬಡಿಗೆಗಳನಾಡಿಸಬೇಡಿ ಬಳ್ಳಿ ಚಿಗುರಿನಂತಿವನು ಮುಳ್ಳು ಕಲ್ಲುಗಳ ಹರವಬೇಡಿ, ಹೂಪಾದ ಇವನವು ಕೋಲಾಹಲದಲೆಯಪ್ಪಳಿಸಬೇಡಿ ಆಶ್ರಮ ಶಾಂತ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...