ದಾರಿಯುದ್ದಕ್ಕೂ ಭರವಸೆಯ ಕೋಲಹಿಡಿದು ಹೊರಟೆ ಕನಸಿನಾ ಅರಮನೆ ಹುಡುಕಿ, ಚಮಣಿಯಿಂದುರಿದಾ ಕಿರು ಕಿಡಿಯೊಂದು ಕೇಕೆ ಹಾಕಿ: ಮೆರೆಯುವುದೆಂಬ ಭ್ರಮೆ ಇರಲೇ ಇಲ್ಲ. ಬಾಳ ಹಾದಿಯು ಹಾಗೆ ಸವೆಯುತಿದೆ ಸುಮ್ಮನೆ, ಆತ್ಮಜ್ಯೋತಿಯ ಬತ್ತಿ ಕರಗುತಿದೆ ಮೆಲ್ಲನೆ, ಗ...

ಮೊದಲ ಪುಟಗಳನು (ತನಗೆ ಬೇಕಷ್ಟು) ನುಂಗಿಹಾಕುವ ಹಕ್ಕು ಹಿರಿತನದ ಸಹಜ ಅಧಿಕಾರ ಬಲ ತೋರಿದ್ದೆ ದಿಕ್ಕು ತಿಳಿದವರು ತಿಳಯದವರು ಎಂಥ ಮಹಾತ್ಮರೂ ಓದುವರು ಮುನ್ನುಡಿ ಬಾಗಿಲು ದಾಟಲೇಬೇಕಷ್ಟೆ ಮನೆಯ ಒಳಗಿರಿಸುವುದಕ್ಕೆ ಅಡಿ ಮನಸ್ಸು ಮಾಡಿದರೆ ಎಂಥ ಲೇಖಕನನ...

ಬಾವಿಯ ಪಕ್ಕದ ಮರದಲ್ಲಿ ಹಣ್ಣಾದ ಎಲೆಗಳು ಆಡುತ್ತಿದ್ದವು. ಹೆಂಗಸರು ಬಟ್ಟೆ ಒಗೆಯುವ ಶಬ್ದದಲ್ಲಿ ಮಾಗಿ ಅರಳುತ್ತಿತ್ತು, ಹಾಡುತ್ತಿತ್ತು. ಮಾಳಿಗೆಯ ಮೇಲೆ ಒಬ್ಬನೇ ಮಲಗಿ ನಿದ್ದೆ ಹೋದೆ. ಎಚ್ಚರ ಆದಾಗ ನನ್ನ ಪಕ್ಕದ ಅರ್ಧ ಹಾಸಿಗೆಯಲ್ಲಿ ಬರೀ ಬೆಳದಿಂಗ...

ನನಗು ನಿನಗೂ ನಡುವೆ ಇಂಥ ಕೊರಕಲು ಇದ್ದು ತಿಳಿಯದಿದ್ದುದು ಹೇಗೆ ಮಾರಾಯ? ಅಡ್ದಬಿದ್ದಿದ್ದ ಈ ಲೊಡ್ಡು ಸಂಕವ ಗಟ್ಟಿ ನೆಲವೆಂದೆ ಭ್ರಮಿಸಿದ್ದೆ ಎಂಥ ಮಡೆಯ! ಇಷ್ಟು ದಿನ ಅದೃಷ್ಟವಿತ್ತು ಆ ಕಡೆ ಬರಲು ಮುರಿದುಬಿದ್ದಿತು ಈಗ ಲೊಡ್ಡು ಹಲಗೆ, ಚಂದ್ರಮಾಯೆಯ...

ಭಯವೇತಕೆ ಮನವೇ ಬದುಕು ಬಯಲಿನಾಟದ ನಿಲುವು || ಹುಟ್ಟಿರಲು ಭಯಕಾಡಲಿಲ್ಲ ಮೆಟ್ಟಿರಲು ಭಯವೆಂಬುದಿಲ್ಲ ಬರಲು ಮುಪ್ಪು ಭಯವೇತಕೆ ಸಾವು ನೇರಳಿನಾಟದೆ ಬೆಪ್ಪನಾದೆ ನೀನು || ಪಾಪಿ ನಾನು ಪುಣ್ಯ ಧಾರೆ ಎರೆದು ಧರ್‍ಮಕರ್‍ಮ ಪಕಳೆ ತೆರೆದು ತಾನು ಆನು ನೀನು ...

ಹಸಿವಿನೊಳಗೆ ರೊಟ್ಟಿ ರೊಟ್ಟಿಯೊಳಗೆ ಹಸಿವು ತನ್ಮಯತೆಯಲಿ ಬೆರೆತು ಅಹಂಗಳು ನಾಶವಾಗಿ ಪರಸ್ಪರ ಸೋಲದೇ ಗೆಲ್ಲದೇ ಹಸಿವು ಹಸಿವೇ ಆಗಿ ರೊಟ್ಟಿ ರೊಟ್ಟಿಯೇ ಆಗಿ ಖಂಡಗಳು ಅಖಂಡವಾಗುವ ಪರಿಪೂರ್ಣತೆಯ ಕೌತುಕ ಆ ಕ್ಷಣದ ನಿಜ. *****...

ಕರಿ ಎರಿ ಹೊಲದಲ್ಲಿ ಘಮ್ಮೆಂದು ಕೆಂಪು ಹಾಯ್ದ ಬಳಿಜೋಳದ ತೆನೆ ತೆನೆಗಳಲಿ ಹಕ್ಕಿಹಿಂಡು ಹಾಡು ಬಿಚ್ಚಿ ಕೊಂಡ ಅನವು ಹೆಚ್ಚಾಗಿ ಹರಡಿತು ಭೂಮಿ ಎದೆ ಕುಬುಸ ಬಿಚ್ಚಿಕೊಂಡ ಉಲಿತ. ಮಾಗಿದ ಚಳಿಯ ಪದರಲಿ ಸೋಸಿ ಸೂಸಿದ ಚಿಗುರ ಗಂಧಗಾಳಿ ತೂರಿ ಜಿಗಿದವು ಕನಸು...

ಗಾಳಿ ಬೆಳಕಿನ ಸೋಂಕಿಗಿಂತ ಮೊದಲೇ ಎರಡು ನಾಲ್ಕಾಗಿ ನಾಲ್ಕು ಎಂಟಾಗಿ ಟಿಸಿಲೊಡೆಯುವ ಭ್ರೂಣಕ್ಕೆ ಏಡ್ಸ್ ಸೋಂಕಿ ಚಿಗುರೇ ಮುಟುರಿಕೊಂಡಿತ್ತು. *****...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...