ಸೀರೆ ಸೆರಗ ತಾಗಿದ ಗಾಳಿ ಪ್ರೇಮದ ನವಿರು ಹೊತ್ತುತಂತು ಆಡಿದ ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿ ಚಿತ್ರ ಬಿಡಿಸಿತು ನೀನಿಡುವ ಪ್ರತಿ ಹೆಜ್ಜೆಯಲಿ ಕನಸು ಇಣುಕುತ್ತಿದೆ ಗೆಳತಿ ಮನಸುಗಳ ಅಗಣಿತ ತರಂಗಗಳು ಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನ...

ಹಸಿರು ನನ್ನದು ಹೂವು ನನ್ನದು ನಾನು ಹರುಷದ ಹೊಂಗೊಳಾ ಬೆಳಗು ನನ್ನದು ಬಣ್ಣ ನನ್ನದು ನಾನು ನಿನ್ನಯ ಬೆಳ್ಗೊಳ ||೧|| ಮುಗಿಲ ತೋರಣ ಚರಣ ಚರಣಾ ನೋಡು ಬಂದನು ಭಾಸ್ಕರಾ ಕಡಲ ಕಾಮಿನಿ ಇರುಳ ಯಾಮಿನಿ ನೋಡು ಹಾಡಿದ ಸುಸ್ವರಾ ||೨|| ಏನು ಮರಣಾ ಮತ್ತೆ ಜನನ...

ನನ್ನ ಆತ್ಮವನ್ನೊಮ್ಮೆ ಕಾಣಬೇಕೆಂದು ಬಯಸಿ ಎದೆಯೊಳಗೆ ಇಣುಕಿದೆ; ಅಲ್ಲಿ, ಅದು- ಕೊಳದ ದಂಡೆಯಲಿ ವಿಹರಿಸುವ ಬದಲು ಚಂಡಮಾರುತದೊಡನೆ ಹೋರಾಡುತ್ತಿತ್ತು. ನದಿಯ ನೀರಲ್ಲಿ ಮೀಯುವ ಬದಲು ಕಂಬನಿಯ ಕಡಲಲ್ಲಿ ಕೈತೊಳೆಯುತ್ತಿತ್ತು. ತಂಗಾಳಿಯ ಅಲೆಗಳಲಿ ಆನಂದಿ...

ಏಕೆ? ಹೆಂಡತಿ.. ನಾ ಅಂದುಕೊಂಡ ಹಾಗೆ ಒಳ್ಳೆಯವಳಲ್ಲವೆಂದು ಕೊರಗುವೆ| ಏಕೆ? ಅನ್ಯರಿಗವಳ ಹೋಲಿಸಿ ಕ್ಷಣಕ್ಷಣಕೊಮ್ಮೆ ಒಳಗೊಳಗೆ ಅಸಮಧಾನಿಯಾಗುವೆ|| ಗುಣಗಳು ಒಮ್ಮೆಲೆ ಬದಲಾಗುವುದಿಲ್ಲ ಸ್ವಭಾವಗಳು ಸುಮ್ಮನೆ ಸರಿಯಾಗುವುದಿಲ್ಲ| ಕಾಲ ಬೇಕು, ಕಾಯಬೇಕು ನ...

ಬೀಜ ವೃಕ್ಷದೊಳಾವುದಿಳೆಗೆ ಮೊದಲೆಂದು ವ್ಯಾಜ್ಯವಿಲ್ಲದಿದುವೆ ಸತ್ಯವೆನುತೊಂದು ರಾಜಿ ಮಾತನೊರೆವುದಾರಿಂಗೆಂದಾದೊಡಂ ಈ ಜಗದೊಳತಿ ಕಠಿಣ ಕಜ್ಜವಿರುತಿರಲೆನ್ನ ನ್ನ ಜ್ಞಾನದ ಮಿತಿಯಿದನು ಸೇರದಿರೆ ಮನ್ನಿಸಿರಿ – ವಿಜ್ಞಾನೇಶ್ವರಾ *****...

ಮುದ್ದಾದ ಕುರಿಮರಿಯ ತರುವೆ ಬೆಳೆಸುವೆ ಕಕ್ಕುಲತೆಯಲಿ ಕೇಳೀತೆ ಹಸಿವೆಂದು ಬೆಬ್ಬಳಿಸಿಯಾತೆ ಬಾಯಾರಿಕೆಯೆಂದು ಮೊರೆದೀತೆ ದೇಹಾಲಸ್ಯವೆಂದು ನಮ್ಮಂತೆಯೇ ಅಲ್ಲವೆ ಅದರದೂ ಜೀವವೆಂದು. ಸಗಣಿ ಬಾಚುವೆ ಮೈಯ ತೊಳೆಯುವೆ ಕೈಯಾರೆ ತಿನ್ನಿಸಿ, ಕುಣಿಸಿ, ಆಡಿಸಿ ...

‘ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು ಮಗುವಾಗಿದ್ದಾಗಿನಿಂದಲೂ ಬಲ್ಲ ಅವನನ್ನು ‘ಬಾ’ ‘ಬಾ’ ಎಂದವನ ಎಷ್ಟು ಸಲ ಕರೆದಿದ್ದೆನು ಬರುವನೊ, ಬಾರನೊ, ತಿಳಿಯದೆ ಇಂದಿಗೂ ಕಾಯುತ್ತಲೇ ಇರುವೆನು ಹೇಳಿ ಹೇಗೆ ಪ್ರೀತಿಸದೆ ಇರಲಿ ಚಂದ್ರನನ್ನು ಯಾವ ಕಾಲದಲ್ಲಿ, ...

ಕಾಡಿನ ಕೋತಿ ಬಿದುರಿನ ಚದುರೆ ಖಾಸ ಬಂಗ್ಲಿ ಬೋನಲ್ಲಿ………. ವಿಕಾರ! ವಿಕಟ! ನಗೆಗೇಡೆಂದು ಹಳಿವರು ನಾವು ಮಾನವರು! ಗಡವಮಂಗ, ಬಾಲದಕೋತಿ, ಮೊಂಡು ಬಾಲ, ನೀಲಮೂಗು, ಈ ಪರಿಯುಂಟು ಮಂಗಗಳು ಹಣ್ಣೆ ತಿಂದು ಜೀವಿಪವು; ಸಂಶಯ ಬಂತು ಆಕೆ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...