ಅದೆಷ್ಟು ದಿನಗಳಾದವು ಕಸುವು ಹದಗೊಳ್ಳಲು ಕಾದು, ಬರುವ ನಿರೀಕ್ಷೆಗಳಲ್ಲಿಯೇ ನೆಟ್ಟ ಕಣ್ಣು ಬಿದಿರುಕೋಲಿನ ನಾದ ಕರ್‍ಣಕ್ಕಿಳಿಯದೇ ಕದಿರು ಕತ್ತರಿಸಿದ ಪೈರು ಆಕೆ ಆ ನೀಲಾಂಗನನ ಸುತ್ತ ನೆರೆದ ಗೋಪಿಕೆಯರ ಕಮಲದಳ ಕಣ್ಣುಗಳ ದಂತ ಕದಳಿ ಮೈ ನುಣುಪು ತೋಳುಗ...

ಕಡಲ ಉಪ್ಪು ನೀರಿನಲ್ಲುರುಳುರುಳಿ ಒರಟಾದ ಕಲ್ಲಿನಂತೆ, ಅಪಳಿಸುವ ಅಲೆಗೆ ಎದೆಯೊಡ್ಡಿ, ಬಂದೇ ಬರುವ ಚಳಿಗೆ ಮಳೆ ಗಾಳಿ ಬಿಸಿಲಿಗೆ ಸಾಕ್ಷಿಯಾಗಿ ಕಾಲದ ಕಟ್ಟು ಮೀರಿದ ಬಂಡೆಗಲ್ಲಿನಂತೆ ಸಹಜವಾಗಿ ಇದ್ದುಬಿಡಬಹುದಾಗಿತ್ತು. ಹಾಗೆ ಆಗಲಿಲ್ಲ. ತನ್ನ ಕುರಿತು...

ಜೀವ ಜೀವದ ಗೆಳೆಯ ನೀನು ಹೇಳಿಕೊಳ್ಳಲಾಗದ ಗೆಳತಿ ನಾನು || ನಿನ್ನ ನೋಟವು ಮನವು ತುಂಬಿದೆ ಏತಕೇ ಸುಮ್ಮನೆ ಕಾಡುವೆ ನೀನು || ಮಾತು ನಿಲ್ಲದು ಮೌನ ಸಹಿಸು ನಿನ್ನ ಕಾಣುವ ಹಂಬಲ ನಿಲ್ಲದು || ಉಸಿರು ಉಸಿರಲ್ಲಿ ಉಸಿರು ಹಸಿರಾಗಿ ನನ್ನಲ್ಲಿ ನಿಲ್ಲುವ ಪ್...

ಆಹಾ ದೆವ್ವ ನೀ ಎಂಥ ಸುಖ – ನಿನ್ನ ಬೆಚ್ಚನೆ ತೆಕ್ಕಯೊಳೆಂಥ ಸುಖ, ಊರ ಹೊರಗಿನ ಕೆರೆಯ ಆಳಕ್ಕೆ, ಇಳಿಸಿ ಈಜಿಸಿದೆ ತಡಿತನಕ ಬಿಯರಿನ ಕಹಿಯಲಿ ಏನು ಮಜ, ವಿಸ್ಕಿಯ ಒಗರೇ ಅಮೃತ ನಿಜ ! ‘ಸಿಗರೇಟಿನ ಹೊಗೆ ವರ್ತುಳ ವರ್ತುಳ’ ಇಸ್ಟೀಟಿಗೆ ಬೇಕಿಲ್ಲ ರ...

ಎಲ್ಲ ಒಲಿಯೆ ಎಂಥ ಬಲಿಯೆ ಬಾಹು ಬಲಿಯೆ ನಿನ್ನದು ಹೇಳು ನನಗೆ ಬಿಡುವ ಬಗೆ ತಾನೆ ಗೆದ್ದು ಪಡೆದುದು ಕಣ್ಣರಪ್ಪೆ ಬಲವನೊಪ್ಪೆ ಆಗಿ ನೀನು ಅನಿಮಿಷ ಬೇಡವೆನುತ ಭೋಗದಮೃತ ಸಡಿಲುಗೊಂಡ ನಿಮಿಷ ಬಿಟ್ಟು ದೇಶ ಬಿಟ್ಟು ಕೋಶ ಬಿಟ್ಟು ಪಡೆದ ಬಿಡುಗಡೆ ಜಗದಗಲ ನೆಲ...

ಆಹಾ ಬಂತು ಬಂತು ಹಬ್ಬ ನೀನು ಬಂದ ಗಳಿಗೆಗೆ ಒಹೋ ಬಂತು ಬಂತು ಹರುಷ ನೀನು ಕಂಡ ನಿಮಿಷಕೆ ||೧|| ನನ್ನ ಒಡೆಯ ನಲ್ಲ ರಾಯ ಯುಗದ ಕೂಗು ಕೂಗಿದೆ ಜಗದ ನೊಗದ ನೂರು ಭಾರ ಚರಣ ತಲಕೆ ಬಾಗಿದೆ ||೨|| ನೀನೆ ಮೂಡು ನೀನೆ ಬೆಳಗು ನೀನೇ ಹಿರಿಯ ಪ್ರೇರಣಾ ನೀನೆ ಜ...

ಬೀಗಬಾರದ ರೊಟ್ಟಿ ಬಾಗಲಾರದ ಹಸಿವು ರೊಟ್ಟಿ ಪ್ರಶ್ನಿಸುವಂತಿಲ್ಲ ಹಸಿವು ಉತ್ತರಿಸಬೇಕಿಲ್ಲ ಯಥಾಸ್ಥಿತಿಯ ಗತಿಯಲಿ ರೊಟ್ಟಿಗೆ ಮುಖವಾಡದ ಮೇಲೆ ಮುಖವಾಡ ಹಸಿವಿಗೆ ಗೆಲುವಿನ ಠೇಂಕಾರ. *****...

ಬೆಳಗುಜಾವದಲಿ ಹರಿ ನಿನ್ನ ದರ್ಶಿಸೆ ನಯನಾನಂದವು| ಪ್ರಸನ್ನ, ಕರುಣಾಸಂಪನ್ನ ಹರಿ ನಿನ್ನ ಧ್ಯಾನಿಪೇ ಮನಸಿಗೆ ಹರ್ಷಾನಂದವು| ಹರಿ ನಿನ್ನನೆಬ್ಬಿಸುವ ಸುಪ್ರಭಾತವು ಅದುವೇ ಕರ್ಣಾನಂದವು || ಉದಯ ರವಿಯು ನಿನ್ನ ಗುಡಿ ಗೋಪುರದ ಕಾಂತಿಯನು ಬೆಳಗುತಲಿ ದ್ವಿ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...