ಜೀವ ಜೀವದ
ಗೆಳೆಯ ನೀನು
ಹೇಳಿಕೊಳ್ಳಲಾಗದ
ಗೆಳತಿ ನಾನು ||

ನಿನ್ನ ನೋಟವು
ಮನವು ತುಂಬಿದೆ
ಏತಕೇ ಸುಮ್ಮನೆ
ಕಾಡುವೆ ನೀನು ||

ಮಾತು ನಿಲ್ಲದು
ಮೌನ ಸಹಿಸು
ನಿನ್ನ ಕಾಣುವ
ಹಂಬಲ ನಿಲ್ಲದು ||

ಉಸಿರು ಉಸಿರಲ್ಲಿ
ಉಸಿರು ಹಸಿರಾಗಿ
ನನ್ನಲ್ಲಿ ನಿಲ್ಲುವ
ಪ್ರೇಮಿ ನೀನು ||

ಹೇಗೆ ಹೇಳಲಿ
ಗೆಳೆಯ ನಿನಗೆ
ವಿರಹ ನೋವಲ್ಲಿ
ಬೆಂದ ರಾಧೆ ನಾನು ||

ಬರೆದೆ ಕವಿತೆ
ನಿನಗಾಗಿ…
ಪ್ರೀತಿ ತುಂಬಿದ
ಪ್ರೇಮ ಗೀತೆ ನಮಗಾಗಿ ||
*****