ಬಾಲಚಂದ್ರನು ಮೂಡಿ ನಗುತಿರಲು ಗಗನದಲಿ ಕರಿಮುಗಿಲ ತೆರೆಯವನ ಮರೆಗೊಳಿಪುದು. ಕೋಗಿಲೆಯು ಬನದಲ್ಲಿ ಉಲಿಯುತಿರೆ ನಲಿಯುತಿರೆ ಗ್ರೀಷ್ಮರಾಜನು ಅಂದು ಕಾಲಿಡುವನು. ೧ ಯೌವನದ ಹೊನಲು ಹೊರಹೊಮ್ಮುತಿರೆಮುಖದಲ್ಲಿ ಜೀವನದ ಸಂಪದವು ಹೆಚ್ಚುತಿರಲು ನಿಜಪತಿಯ ಸೇರ...

ಮೇಲುನೋಟಕೆ ಮರೆಯಲಾರಳು ಹಲವು ಹೆಣ್ಗಳ ಪರಿಯೊಳು; ಅವಳ ಚೆಲುವನು ನಾನೆ ಅರಿಯೆನು ನಗುವತನಕೊಲಿದೆನ್ನೊಳು. ಆಗ ಕಂಡೆನು ಕಣ್ಣ ಹೊಳಪನು, ಒಲುಮೆ ತುಳುಕುವ ಬೆಳಕನು. ಈಗ ನೋಡಳು, ನಾಚಿ ನುಲಿವಳು, ನಾನು ನೋಡಲು ಮುನಿವಳು; ಏನೆ ಮಾಡಲಿ, ಹಿಡಿಯಬಲ್ಲೆನು ಕ...

ಕಾರಿರುಳ ಜೊತೆ ಸೇರಿ ಕಣ್ಗೆ ಮಂಕನು ತೂರಿ ಕಂಡಿತಹ ನನಗೊಂದು ಮಿಂಚುಹುಳುವು. ಕತ್ತಲಿನ ಕಡಲಿನೊಳು ತೇಲ್ವ ಕಿರುದೋಣಿಯೊಳು ಮಂಕಾಗಿ ಮಿನುಗುತಿಹ ಹಣತೆಯೇನೋ ಇರದು! ಎಂದಿಗುಮಿರದು! ನಿಶೆಯ ಜಡೆಯೊಳು ಮೆರೆದು ಹೊಳೆಯುತಿಹ ವಜ್ರದಾಭರಣವೇನೋ. ನಿಶೆಯು ಹಬ್...

ಓ ತಾಯೆ ಬರದೆ ಮಾಯೆ ಈಯೆ ಒಂದು ಹಾಡನು ಕಾಯೆ ನಿನ್ನ ಕಂದನನ್ನು ಬಾಯ ಬಿಡುತ ಬಂದನು ಮೊದಲ ನುಡಿಗಳಾದರೇನು? ತೊದಲು ನುಡಿಗಳಿಲ್ಲವೇ? ಹೃದಯದಲರ ನನ್ನಿವಾತು ಜಗಕೆ ರುಚಿಸಲಾರವೇ! ಮೂಕನಾಗಿ ನೂಕಲಾರೆ ಸಾಕು ಬಾಳು ಬೇಸರ ಲೋಕವೆಲ್ಲ ಕೈಯ ಬಿಟ್ಟರೆನಗೆ ನೀನ...

ಎಳೆತನದಿನಿ೦ದುವರೆಗೀ ಜಗದ ಬೆರಗ ನಾ- ನಳಿಯದಂತಿರಿಸಿಹವು ವಸ್ತು ವ್ಯಕ್ತಿ ಅಲ್ಪವಿವು ಸಾಮಾನ್ಯವೆನೆ ಪ್ರಕಟಗೈಯುತ್ತ ತಮ್ಮತುಲ ಸುಖದುಃಖವೀವ ಶಕ್ತಿ. ತನಗೆ ತನ್ನರಿವಷ್ಟೆ; ಮಿಕ್ಕುದರ ತಿಳಿವೆಲ್ಲ ಭ್ರಮೆಯೆನಿಸುವೀ ತೋರ್ಕೆಯರಿವರಾರು? ನೆಚ್ಚಿದರ ವಂಚ...

೧ “ಜಗಕೆಲ್ಲ ಬಿದ್ದಿತ್ತೊ ಇಷ್ಟು ಹೊತ್ತಿರುಳೆಂಬ ಕಂಪಾದುದೊಂದು ಕನಸು! ಹಗಲಿನ್ನು ಬಂದು ಬೆಳಕಿನ ಸೊಬಗು ಬೆಳಗುವದು- ಕನಸು ಆಗುವುದು ನನಸು! ೨ ಕನಸು ಕನಸೆಂದು ಕಂಗಳರು ಕನಕರಿಸುವರು ಕನಸು ಕನಸಾಗಬಹುದೇ? ಜನಿಸದಿರೆ ಕನಸಿನೊಳು ನನಸು, ನನಸಿನ...

ನನ್ನ ಜೋತಿಯು ನಿನ್ನೊಳರಗಲಿ ನನ್ನ ಬಲವೇ ನಿನ್ನ ಹುಮ್ಮಸು | ನಿನ್ನ ಹೃದಯವ ಕಲಕದಿರಲವ ತಿತನು ತಾನೆಂದೂ || ಸನ್ನುತಲ್ಲದ ಪೂರ್ಣವಲ್ಲದ ನ್ಯೂನಫಲವನು ಬಯಸಲಾಗದು | ಘನ್ನವಾತ್ಮವಗೊಳಪ ವರವನು ಬಯಸು ಎಂದೆಂದೂ || ೧ || ನಿನ್ನದಾಗಲಿ ಒ೦ದೆ ಸಂತಸ ಘನ್ನದ...

೧ ಆಗೊಮ್ಮೆ ಈಗೊಮ್ಮೆ ಬಿರಿದರಳಿ ಸೊಗಯಿಸಿದ ಸೌಸವದ ಸುಮಗಳನ್ನೊಲಿದಾಯ್ದು, ಸರಿ ನೆಯ್ದು, ಸಾಹಿತ್ಯ ಶಾರದೆಯ ಕೊರಳಿಂಗೆ ಕಲೆಗೊಳಿಸಿ ತೊಡಿಸಿರುವೆ ಚೆಲುವಿಲ್ಲದಲರುಗಳನುಳಿದ ಸರ ೨ ಹೃದಯಾಂತರಾಳದಲಿ ಭಾವಗಳ ಘರ್ಷಣೆಯು ಸಂಸ್ಫೂರ್ತಿವಡೆದಾಗ ಚೆಲ್ಲಿ ಹರಿ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...