
ಮೇಲುನೋಟಕೆ ಮರೆಯಲಾರಳು
ಹಲವು ಹೆಣ್ಗಳ ಪರಿಯೊಳು;
ಅವಳ ಚೆಲುವನು ನಾನೆ ಅರಿಯೆನು
ನಗುವತನಕೊಲಿದೆನ್ನೊಳು.
ಆಗ ಕಂಡೆನು ಕಣ್ಣ ಹೊಳಪನು,
ಒಲುಮೆ ತುಳುಕುವ ಬೆಳಕನು.
ಈಗ ನೋಡಳು, ನಾಚಿ ನುಲಿವಳು,
ನಾನು ನೋಡಲು ಮುನಿವಳು;
ಏನೆ ಮಾಡಲಿ, ಹಿಡಿಯಬಲ್ಲೆನು
ಕಣ್ಣೊಳೊಲವಿನ ಬೆಳಕನು.
ಅವಳ ಹುಬ್ಬಿನ ಗಂಟೆ ಚೆಂದವೊ!
ಏತಕುಳಿದರ ನಗೆಗಳು?
*****
H. COLERIDGE (1796 – 1849) She is not fair to outward view














