Home / ಬಾಲ ಚಿಲುಮೆ / ಕಥೆ / ಗಂಗದತ್ತನ ಕಥೆ

ಗಂಗದತ್ತನ ಕಥೆ

ಒಂದಾನೊಂದು ಕೊಳದಲ್ಲಿ ಗಂಗದತ್ತನೆಂಬ ಮಂಡೂಕ (ಕಪ್ಪೆ) ರಾಜನಿದ್ದನು. ಅವನ ದಾಯಾದಿಗಳು ಕೆಲವರು ಅವನನ್ನು ರೇಗಿಸಿದರು. ಆಗ ಅವನಿಗೆ ಎನ್ನಿಸಿತು: “ಈ ದಾಯಾದಿಗಳಿಗೆ ತಕ್ಕಂತೆ ಮಾಡಬೇಕು.” ಕೇಳಿಲ್ಲವೆ?
ಅಪಾಕಾರ ಉಪಕಾರ ಮಾಡಿರುವ ಶತ್ರುಮಿತ್ರರಿಗೆ |
ಅಪಾಕಾರಿ ಉಪಕಾರಿ ಯಾದವನ ಜನ್ಮ ಸಾರ್ಥಕವು ॥ ೧೧॥
ಎಂದು ಆ ಕೊಳದಿಂದ ಯಾತದ ಬಾನಿಯನ್ನು ಹಿಡಿದು ಹೊರಕ್ಕೆ ಹೊರಟು ಹೋಯಿತು. ಮುಂದೆ ಹೋಗುತ್ತಾ “ದಾರಿಯಲ್ಲಿ ಬಿಲದೊಳಕ್ಕೆ ಹೋಗುತ್ತಿರುವ ಸರ್ಪವನ್ನು ಕಂಡಿತು. “ಆಹಾ! ಇದೀಗ ಸರಿಯಾದ ಉಪಾಯ; ಇದನ್ನು ಉಪಾಯಮಾಡಿ ಆ ಕೊಳಕ್ಕೆ ಕರೆದುಕೊಂಡು ಹೋದರೆ ಅವರಿಗೆಲ್ಲಾ ತಕ್ಕ ಗತಿಯಾಗುವುದು. ಶತ್ರುವಿಗೆ ಶತ್ರುವನ್ನೂ ಬಲವಂತನಿಗೆ ಬಲವಂತನನ್ನೂ ಹೊಂದಿಸಿ, ಅವರಿಬ್ಬರೂ ಹತರಾಗುವಂತೆ ಮಾಡಬೇಕು. ತನ್ನ ಕೆಲಸವನ್ನು ಮಾಡಿಕೊಂಡು ತೆಪ್ಪಗಿರಬೇಕು. ಗಾದೆ ಇಲ್ಲವೆ “ಮುಳ್ಳನ್ನು ಮುಳ್ಳಿಂದ ತೆಗೆಯಬೇಕು. ಎಂದು?” ಎಂದುಕೊಂಡು ಆ ಬಿಲದ ಬಾಯಿಗೆ ಹೋಗಿ “ಪ್ರಿಯದರ್ಶನ, ಪ್ರಿಯದರ್ಶನ, ಬಾ,ಬಾ” ಎಂದು ಕೂಗಿತು.
ಅದನ್ನು ಕೇಳಿ ಬಿಲದಲ್ಲಿದ್ದ ಹಾವು ಯೋಚಿಸಿತು. “ಇದು ಹಾವಿನ ಕಂಠವಲ್ಲ, ಕೂಗುತ್ತಿರುವವನು ನಮ ಜಾತಿಯಲ್ಲ, ನಾನು ಇನ್ನು ಯಾರ ಜೊತೆಯಲ್ಲಿಯೂ ನನಗೆ ಸ್ನೇಹವಿಲ್ಲ. ಅದರಿಂದ, ಇಲ್ಲಿಯೇ ಇದ್ದುಕೊಂಡು ಇವನು ಯಾರು ಎ೦ಬುದನ್ನು ತಿಳಿಯಬೇಕು. ಕುಲ, ಶೀಲ, ಮನೆ, ಮಠ- ಹೆಸರು, ಬಳಗ ತಿಳಿಯದವನೊಡನೆ ಬಳಕೆಯಿಟ್ಟುಕೊಳ್ಳಬಾರದು ಎಂದು ಬೃಹಸ್ಪತಿಯು ಹೇಳಿರುವನು. ಇವನು ಯಾವನಾದರೂ ಮಂತ್ರವಾದಿಯೋ ಔಷಧವನ್ನು ಬಲ್ಲವನೋ ಆಗಿದ್ದರೆ ನನಗೆ ತಪ್ಪದೆ ಬಂಧನವಾಗುವುದು. ಅಥವಾ ಯಾವನಾದರೂ ಹಿಂದಿನ ವೈರವನ್ನು ನೆನೆದು ಇವೊತ್ತು ಕೊಲ್ಲುವುದಕ್ಕೆ ಬಂದಿದ್ದರೆ?” ಎಂದು ಹಲವು ತೆರದಲ್ಲಿ ಯೋಚನೆ ಮಾಡಿ ಅಲ್ಲಿಂದಲೇ “ಯಾರು ಎಂದನು?”
“ನಾನು ಗಂಗದತ್ತನೆಂಬ ಮಂಡೂಕ ರಾಜನು. ನಿನ್ನ ಸ್ನೇಹವನ್ನು ಬಯಸಿ ಬಂದಿರುವೆನು.”
“ನಿನ್ನ ಮಾತು ನಂಬುವಹಾಗಿಲ್ಲ. ಹುಲ್ಲು ಎಂದಾದರೂ ಬೆಂಕಿಯನ್ನು ಹುಡುಕಿಕೊಂಡು ಬರುವುದೇ? ನೀನು ನನ್ನ ಅನ್ನ. ನಾನು ನಿನ್ನ ಮೃತ್ಯು. ಯಾರಾದರೂ ಮೃತ್ಯುವನ್ನು ಹುಡುಕಿಕೊಂಡು ಬರುವರೆ? ಸುಳ್ಳು ಹೇಳುತ್ತಿದ್ದೀಯೆ. ಹೋಗು ಹೋಗು”
“ಎಲೈ ನಾನು ಹೇಳುವುದು ಸರ್ವಥಾ ನಿಜ. ನೀನು ನನಗೆ ಸ್ವಭಾವ ವೈರಿಯೆನ್ನುವುದೂ ನಿಜ. ಆದರೂ ಕೇಳು ಶತ್ರುಗಳಿಂದ ನನಗೆ ಅಪಮಾನವಾಯಿತು. ಕೇಳಿಲ್ಲವೆ?
ಸರ್ವನಾಶವು ಒದಗಿದಾಗ । ಪ್ರಾಣಕ್ಕೆ ಕಷ್ಟಬಂದಾಗ ||
ಶತ್ರುವಾದರು ಕಾಲು ಹಿಡಿದು । ಕಾದುಕೋ ಪ್ರಾಣಧನಗಳನು ॥ ೧೨ ॥
“ಅದರಿಂದ ನಿನ್ನಬಳಿಗೆ ಬಂದಿರುವೆನು.”
“ಆಯಿತು. ನಿನಗೆ ಯಾರಿಂದ ಅಪಮಾನವಾಯಿತು?”
“ಇನ್ನು ಯಾರಿಂದ. ನನ್ನ ಕುಲದವರಿಂದಲೇ! ನನ್ನ ದಾಯಾದಿಗಳಿಂದಲೇ!”
“ನೀನು ಇರುವುದೆಲ್ಲಿ? ಬಾವಿಯಲ್ಲೋ ಕೊಳದಲ್ಲೋ ಕೆರೆಯಲ್ಲೋ ಮಡುವಿನಲ್ಲೋ? “
“ಕಲ್ಲು ಕಟ್ಟಿರುವ ಕೊಳದಲ್ಲಿ.”
“ಅಲ್ಲಿಗೆ ನಾನು ಬರುವುದಿಲ್ಲ. ಅಲ್ಲಿಗೆ ನಾನು ಸುಲಭವಾಗಿ ಹೋಗಿ ಬರುವುದಕ್ಕಾಗುವುದಿಲ್ಲ. ಹೋದರೂ ಇರುವುದಕ್ಕೆ ಆಗುವುದಿಲ್ಲ ನಿನಗೆ ನನ್ನಿ೦ದ ಪ್ರಯೋಜನವಾಗುವುದಿಲ್ಲ. ಹೋಗು.
ಕೇಳಿಲ್ಲ
ನುಂಗುವಷ್ಟು ಕಚ್ಚಿಕೋ | ಅರಗುವಷ್ಟು ತಿಂದುಕೋ ||
ಬದುಕಬೇಕು ಎಂಬೆಯಾ | ಕೊನೆಗೆ ಅಹುದ ನೋಡಿಕೋ ||೧೩||
“ನೀ ಬಾ. ಅಲ್ಲಿ ಇಳಿಯುವುದಕ್ಕೆ, ನೀನು ಇರುವುದಕ್ಕೆ ಎಲ್ಲಾ ಅನುಕೂಲವಿದೆ. ನೀರಿನ ಅಂಚಿನಲ್ಲಿ ಸೊಗಸಾದ ಬಿಲವಿದೆ. ನೀನು ಅಲ್ಲಿದ್ದು ಕೊಂಡು ಆಟವಾಡಿಕೊಂಡು ಅಲ್ಲಿರುವ ಕಪ್ಪೆಗಳನ್ನೆಲ್ಲ ನೋಡಿಕೊಳ್ಳಬಹುದು.”
ಇದೆಲ್ಲವನ್ನೂ ಕೇಳಿ ಹಾವು ಯೋಚಿಸಿಕೊಂಡಿತು : “ನನಗೆ ವಯಸ್ಸಾಯಿತು. ಯಾವಾಗಲೋ ಎಲ್ಲೋ ಒಂದು ಇಲಿ ಸಿಕ್ಕಿದರೆ ಸಿಕ್ಕಿತು. ಇಲ್ಲದಿದ್ದರೆ ಇಲ್ಲ. ಈಗ ಈ ಕುಲನಾಶಕನು ಬಂದು ಒಂದು ಜೀವನೋಪಾಯವನ್ನು ತೋರಿಸುತ್ತಿದ್ದಾನೆ. ಹೀಗೇಕೆ ಮಾಡಬಾರದು? ಬಲವಿಲ್ಲದವನೂ ಸಹಾಯಗಳಿಲ್ಲದವನೂ ಸುಖವಾದ ಜೀವನೋಪಾಯವನ್ನೇ ಹುಡುಕಬೇಕು ಎಂದು ತಿಳಿದವರು ಹೇಳುವರು. ಅದರಿಂದ ಒಪ್ಪಿಕೊಳ್ಳೋಣ.” ಎಂದು ಕಪ್ಪೆಯ ಮಾತಿಗೆ ಒಪ್ಪಿಕೊಂಡು ಅದರ ಹಿಂದೆಯೇ ಹೋಯಿತು.
ದಾರಿಯಲ್ಲಿ ಹೋಗುತ್ತ ಗಂಗದತ್ತನು “ಅಯ್ಯಾ, ನೋಡು ಈಗಲೇ ಹೇಳಿದ್ದೇನೆ. ನೀನು ಮಾತ್ರ ನಾನು ತೋರಿಸಿದವರನ್ನೇ ತಿನ್ನಬೇಕು. ನಮ್ಮ ಮನೆಯವರ ತಂಟೆಗೆ ಬರಬಾರದು.” ಎಂದಿತು. ಹಾವು ಕೂಡ, ಅದಕ್ಕೊಪ್ಪಿಕೊಂಡು “ನೀನು ನನ್ನ ಮಿತ್ರನಾದೆ. ಅದರಿಂದ ಅಂಜಬೇಡ. ನಿನ್ನ ದಾಯಾದಿಗಳನ್ನು ಮಾತ್ರ ತಿನ್ನುವೆನು” ಎಂದು ಮಾತುಕೊಟ್ಟು ಹೋಗಿ, ಆ ಕಪ್ಪೆಯು ತೋರಿಸಿದ ಕಡೆಯಿಂದ ಇಳಿದು, ಅದು ತೋರಿಸಿದ ಬಿಲದಲ್ಲಿ ಹೋಗಿ ಸೇರಿ ಕೊಂಡಿತು.
ಬರುಬರುತ್ತ ಗಂಗದತ್ತನ ದಾಯಾದಿಗಳೆಲ್ಲ ನಿರ್ಮೂಲವಾಗಿ ಹೋದರು. ಹಾವು “ಮಿತ್ರ, ನಿನ್ನ ಶತ್ರುಗಳು ಮುಗಿದರು, ನನಗೆ ತಿನ್ನುವುದಕ್ಕೆ ಇನ್ನೇನಾದರೂ ಕೊಡು” ಎಂದಿತು.
“ನೀನು ನನಗೆ ಬಹಳ ಉಪಕಾರ ಮಾಡಿದೆ. ಇನ್ನು ನೀನು ಸಂತೋಷವಾಗಿ ಹೋಗಿ ಬಾ.”
“ಚೆನ್ನಾಗಿ ಹೇಳಿದೆ, ನಾನು ಎಲ್ಲಿಗೆ ಹೋಗಲಿ? ಅಲ್ಲಿ ನನ್ನ ಬಿಲವನ್ನು ಇನ್ನು ಯಾವುದೋ ಹಾವು ಹಿಡಿದುಕೊಂಡಿರುತ್ತದೆ. ಅದರಿಂದ ಹೋಗುವುದು ಗೀಗುವುದು ಆಗುವುದಿಲ್ಲ. ನಿನ್ನ ಪರಿವಾರದಲ್ಲಿಯೇ ಒಂದೊಂದು ಕಪ್ಪೆಯನ್ನು ಕಳುಹಿಸು. ಇಲ್ಲದಿದ್ದರೆ ನೋಡಿಕೋ?”
ಆ ಮಾತು ಕೇಳಿ ಕಪ್ಪೆಗೆ ಬುದ್ಧಿ ಬಂತು. ತಾನು ಹಾವನ್ನು ಕರೆತಂದುದು ತಪ್ಪಾಯಿತು ಎಂದು ತಿಳಿಯಿತು. “ತನಗಿಂತಲೂ ಬಲವಾದ ಹಗೆಯನ್ನು ಗೆಳೆಯನನ್ನು ಮಾಡಿಕೊಳ್ಳುವುದೂ ವಿಷವನ್ನು ತಿನ್ನುವುದೂ ಎರಡೂ ಒಂದೇ!” ಎಂಬ ದೊಡ್ಡವರ ಮಾತು ನೆನಪಾಯಿತು. ಕೇಳಿಲ್ಲವೆ?
ಬಡಬನಿಗೆ ಸಾಗರವು ಕೊಡುವಂತೆ ನೋಡು ॥ 
ಎಲ್ಲವನು ಕೊಂಡೆಯ್ವ ಶತ್ರು ಬಂದಾಗ | 
ಕೊಂಚವಾದರು ಕೊಟ್ಟು ಉಳಿದುಕೊಳ್ಳಯ್ಯ ॥ ೧೪ ॥ 
ಅಲ್ಲದೆ,
ಕೊಂಚವಕೊಟ್ಟು ಬಹಳವನುಳಿಸಿಕೋ ॥ 
ಕೊಂಚಕ್ಕಾಗಿ ಬಹಳವ ಕಳೆವುದು ॥ 
ಜಾಣನ ಪರಿಯಲ್ಲ” ॥ ೧೫ ॥ 
ಇಂತು ಎಲ್ಲವನ್ನೂ ಚಿಂತಿಸಿ, ಕೊನೆಗೆ ಹಾವನ್ನು ರೇಗಿಸುವುದು ತರವಲ್ಲ ಎಂದು ದಿನಕ್ಕೆ ಒಂದೊಂದು ಕಪ್ಪೆಯನ್ನು ಕಳುಹಿಸಿ ಕೊಡುವುದಾಗಿ ಒಪ್ಪಿಕ್ಕೊ೦ಡು ಹಾಗೆಯೇ ಮಾಡುತ್ತಿತ್ತು.
`ಆ ಹಾವು ಕಂಡಹಾಗೆ ಗಂಗದತ್ತನು ಕಳುಹಿಸಿದುದನ್ನು ತಿಂದು ಕಾಣದಹಾಗೆ ಕೈಗೆ ಸಿಕ್ಕಿದುದನ್ನು ತಿನ್ನುತ್ತಿತ್ತು.
ಹೀಗೆಯೇ ಇರಲು ಒಂದು ದಿನ ಆ ಹಾವು ಗಂಗದತ್ತನ ಮಗನನ್ನೇ ತಿಂದುಬಿಟ್ಟಿತು. ಆಗ ಅದು ಅಯ್ಯೋ ಎಂದು ಅಳಲು; ಅದರ ಹೆಂಡತಿಯು, “ಮನೆ ಹಾಳ, ಅಳುವುದಕ್ಕೆ ನಾಚಿಕೆಯಾಗುವುದಿಲ್ಲವೆ? ನಿನ್ನಿಂದಲ್ಲವೇ ನಮಗೆಲ್ಲಾ ಮೃತ್ಯುವು ಬಂದಿರುವುದು?” ಈಗಲೂ ಎಲ್ಲಿಯಾದರೂ ಓಡಿಹೋಗುವ ಯೋಚನೆಯನ್ನಾದರೂ ಮಾಡು. ಇಲ್ಲದಿದ್ದರೆ ಇದನ್ನು ಕೊಲ್ಲಿಸುವ ಉಪಾಯವನನ್ನಾದರೂ ಮಾಡು ಎಂದು ಹೇಳಿತು.
ಇನ್ನು ಕೊಂಚ ಕಾಲವು ಕಳೆಯುವುವರಲ್ಲಿ ಮಂಡೂಕ ಕುಲವೆಲ್ಲ ನಾಶವಾಗಿ ಹೋಗಿ ಗಂಗದತ್ತನೊಂದೇ ಒಂದು ಉಳಿಯಿತು. ಆಗ ಹಾವು ಅದರ ಬಳಿಗೆ ಬಂದು, “ಗಂಗದತ್ತ, ನನಗೆ ಹಸಿವು, ತಿನ್ನುವುದಕ್ಕೆ ಕಪ್ಪೆಗಳಿಲ್ಲ. ನೀನು ನನ್ನನ್ನು ಇಲ್ಲಿಗೆ ಕರೆತಂದವನು. ಅದರಿಂದ ನನಗೆ ಊಟಕ್ಕಿಕ್ಕು” ಎ೦ದಿತು. ಅದಕ್ಕೆ ಕಪ್ಪೆಯೂ ಯೋಚಿಸಿ, “ಮಿತ್ರ, ನಾನು ಇಲ್ಲಿಯೇ ಇದ್ದು ನಿನಗೆ ಉಟವೆಲ್ಲಿಂದ ತರಲಿ? ನನ್ನನ್ನು ಕಳುಹಿಸಿಕೊಡು. ಎಲ್ಲಾದರೂ ಹೋಗಿ ಬೇರೆ ಕಪ್ಪೆಗಳನ್ನು ಕರೆದುಕೊಂಡು ಬರುವೆನು.” ಎಂದು ಹೇಳಿ ಅದರ ಅಪ್ಪಣೆಯನ್ನು ಪಡೆದುಕೊಂಡು ಕೊಳದಿಂದ ಹೊರಕ್ಕೆ ಬಂತು.
ಕಪ್ಪೆಯು ಅಲ್ಲಿಗೆ ಮತ್ತೆ ಬರಲಿಲ್ಲ ಆಗ ಹಾವು ಅಲ್ಲಿಯೇ ಇನ್ನೊಂದು ಪೊಟರೆಯಲ್ಲಿದ್ದ ಹಲ್ಲಿಯನ್ನು ಗಂಗದತ್ತನನ್ನು ಕರೆದುಕೊಂಡು ಬಾರೆಂದು ಕಳುಹಿಸಿತು. ಹಲ್ಲಿಯು ಆ ಕಪ್ಪೆಯನ್ನು ಹುಡುಕಿಕೊಂಡು ಹೋಗಿ “ಗಂಗದತ್ತ, ನಿಲ್ಲದಿದ್ದರೆ ನಾನು ಬದುಕುವುದಕ್ಕೆ ಆಗುವುದಿಲ್ಲ. ಅದರಿಂದ ಬರಲೇಬೇಕು.” ಎಂದು ಹಾವು ಹೇಳಿಕಳುಹಿಸಿದೆ ಯೆನ್ನಲು, ಆಗ ಆ ಕಪ್ಪೆಯು “ಗಂಗದತ್ತನು ಬರುವುದುಂಟೆ?” ಎಂದಿತು. ಅದರಂತೆ, ಎಲೆ ದುಷ್ಟ, ನಾನೂ ನಿನ್ನ ಮನೆಗೆ ಎಂದೂ ಬರುವುದಿಲ್ಲ.” ಎಂದು ಕಪಿಯು ಹೇಳಿತು.
ಅದನ್ನು ಕೇಳಿ ಮೊಸಳೆಯು ಮತ್ತೆ ಹೇಳಿತು: “ಮಿತ್ರ ನೀನು ಹೇಳುವುದು ಸರಿಯಲ್ಲ. ನೀನು ಮನಸ್ಸು ಮಾಡಿ ಮನೆಗೆ ಬಾ. ಇಲ್ಲದಿದ್ದರೆ, ನನ್ನ ಪಾಪವು ಕಳೆಯುವುದಿಲ್ಲ. ಇಲ್ಲದಿದ್ದರೆ, ನಾನು ಇಲ್ಲಿಯೇ ಮಲಗಿ ಅನ್ನವನ್ನು ಬಿಟ್ಟು ಪ್ರಾಣಾತ್ಯಾಗ ಮಾಡುವೆನು.”
ಹಾಗೆಂದರೂ ವಾನರವು ಮನಸ್ಸಿಗೆ ಹಾಕಿಕೊಳ್ಳದೆ, ಹೇಳಿತು:- “ನಾನೇನು ಲಂಬಕರ್ಣನಂತೆ ಮೂರ್ಖನೆಂದುಕೊಂಡೆಯಾ? ಅಪಾಯವಿದೆಯೆಂದು ತಿಳಿದೂ ನಾನಾಗಿ ಹೋಗಿ ಸಿಕ್ಕಿಕೊಳ್ಳಲೇ?
ಕೇಳಿಲ್ಲವೆ?
ಬಂದು, ಸಿಂಹವಿಕ್ರಮ ಕಂಡು ಓಡಿತು ॥ 
ಮತ್ತೆ, ಸೋತು ಮಾತಿಗೆ ಬಂದು ಸತ್ತಿತು ॥೧೬॥ 
ಮೊಸಳೆಯು “ಆ ಲಂಬಕರ್ಣನಾರು? ಕಂಡು ಕಂಡೂ ಹೇಗೆ ಸತ್ತಿತು? ಎಂದು ಕೇಳಲು ಕಪಿಯು ಹೇಳಿತು:-
*****
ಲಂಬಕರ್ಣನ ಕಥೆಯನ್ನು ಓದಿ.
Tagged:

Leave a Reply

Your email address will not be published. Required fields are marked *

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...