ಆಗಿದ್ದಳು ಕನ್ನಡಮ್ಮ ನಮ್ಮ ತಂದೆ, ತಾತ, ಮುತ್ತಾತರಿಗೆ ತಾಯಿ. ಆದಳು ನಮಗೆ, ನಮ್ಮ ಮಕ್ಕಳಿಗೆ ಮಲತಾಯಿ. ನಮ್ಮ ಮೊಮ್ಮಕ್ಕಳು, ಮರಿಮಕ್ಕಳಿಗೆ ಯಾರಾಗುವಳು ? ತಾಯಿ. *****...

ಹಳ್ಳ ಇರುವ ಕಡೆಗೆ ನೀರು ಹರಿವುದು ನಾನು ನಿನ್ನ ಕಡೆಗೆ ಯಾಕೆ ಹರಿವುದು! //ಪ// ಮುಚ್ಚಿದರೂ ಕಣ್ಣು ಅಲ್ಲಿ ತೂರುವೆ ಬಚ್ಚಿಟ್ಟುಕೊಂಡು ಒಳಗೆ ಆಟವಾಡುವೆ ಇದು ನನ್ನ ತಪ್ಪೆ ಹೇಳು ನನ್ನ ನಲ್ಲೆ ನಾ ಏನಾಗುವೆನು ಎಲ್ಲ ನೀನು ಬಲ್ಲೆ! ಇರುವ ಬದುಕು ಒಂದು...

ಕಡಲು ಬೆಟ್ಟಕ್ಕೆ ಹೇಳಿತು: “ನನ್ನ ತಳ ಮಂದರ, ನಿನ್ನ ಮುಡಿ ತಾರ, ನಡುವಿನ ಸ್ವರಸಹಿತ ನಾನೂ ನೀನೂ ಕೂಡಿ ಭೂಮಿ ಏನು ಗಾನಮನೋಹರ!” ಬೆಟ್ಟ ಕಡಲಿಗೆ ಹೇಳಿತು : “ಅದಕ್ಕೆಂದೇ ಆಗಸ ಪ್ರತಿ ರಾತ್ರಿ ತೊಡಿಸುತ್ತದೆ ಇಳೆಯ ಕೊರಳಿಗೆ ನಕ...

ಭಾರತ ಮಾತೆಯ ಮಮತೆಯ ಕುಡಿ ಪಿತನ ಪ್ರೀತಿಯಲಿ ಸಾಗುತ ಮುನ್ನಡಿ ಗುರುವಿನ ಗರಡಿಯಲಿ ಸಿದ್ಧಿಯ ನೀ ಪಡಿ ಜಾತಿ ಧರ್ಮಗಳ ಮೆಟ್ಟುತ ನೀ ನಡಿ ಭಾಷೆ ಭಾವನೆಗಳ ಸಂತೈಸುವ ನುಡಿ ನೀನಾಗು ನಮ್ಮೀ ಸಂಸ್ಕೃತಿಯ ಕನ್ನಡಿ ಸಾರು ಜಗಕೆಲ್ಲ ಮಾನವೀಯತೆಯ ಸಿರಿ ನೀನಾಗು ...

ಒಂದು ಕಾಲವಿತ್ತು ಆಗ ನನ್ನ ಕೂಗಿನಿಂದಲೇ ಬೆಳಗಾಗುತ್ತಿತ್ತು ಮುಂಜಾನೆಗೆ ಹೆಸರೇ ಇತ್ತು “ಕೋಳಿ ಕೂಗೋ ಹೊತ್ತು” ಎಂದು. ನಾನು ಕೂಡ ಸುಂದರ ಬಾತುಗಳಂತೆ ರಾಜ ಹಂಸಗಳಂತೆ. ನನಗೂ ಮೋಹಕ ನಡಿಗೆ ಇತ್ತು ದೊಡ್ಡ ಸಂಸಾರವಿತ್ತು ನನ್ನ ಮರಿಗಳೊಂ...

ಪಂಚ್ಮಿ ಬಂದೇತೆ ಪಂಚೇತ್ಯಾಗೇತೆ ಪುಂಗಿ ತಂಗಿಲ್ಲಾ ||ಪಲ್ಲ|| ಮೋಸಂಬ್ವನದಾಕಿ ತೆಂಗಿನ್ ಬನದಾಕಿ ಇದ್ದಿದ್ಹಾಂಗ ಇಲ್ದಂಗಾದಿಯಾ ಗಿಣಿಮೂಗು ಚಲುವಾಕಿ ಹೊಳಿತುಂ ಜಡಿಯಾಕಿ ಅಗಸಿ ಆಚಿ ಚೊಗಚಿ ಆದಿಯಾ ||೧|| ಕಡೆಕಡೆ ಪಂಚ್ಮ್ಯಾಗಿ ಕಲ್ಲಂಗ್ಡಣ್ಣಾಗಿ ಗಲ್‍...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...