ಪರದೆ ಸರಿಸಿ ಆಡಬೇಕು ಹೊಟ್ಟೆಪಾಡಿನ ನಾಟಕ ಎಲ್ಲರ ನೋಟಕ ರಂಗ ಪಂಟಪದೊಳಗೆ ಒಂಬತ್ತು ಬಾಗಿಲುಗಳಿಗೂ ಪರದೆ ಕಟ್ಟಿ ನಟಿಸಬೇಕು ನಿರಂತರ ಕಣ್ಣಿಗೆ ಕಾಣದ ಪ್ರೇಕ್ಷಕ ಮೆಚ್ಚುವಂತ ಆಟಕ *****...

ಅಮ್ಮನ ಭಾಷೆಯಲಿ ನೂರಾಡಿದರೂ ತರದು ಹಿಗ್ಗು ಆಂಗ್ಲ ಭಾಷೆಯಲಿ ಒಂದಾಡಿದರೂ ಹೊಂದುವೆ ಇನ್ನಿಲ್ಲದ ಹಿಗ್ಗು ಇಲ್ಲವೇ ? ಸತ್ತು, ಸಾಯಿಸುವ ಈ ಮೂಢ ರೋಗಕ್ಕೆ ಮದ್ದು *****...

ನಾ ಹೇಳಲಾರೆ ನಾ ನಿನ್ನ ಪ್ರೀತಿಸುವೆ ಅರಿಯುವುದಾದರೆ ಅರಿ, ಇಲ್ಲವೆ ಇರಿ //ಪ// ನಾ ನೋಡುತಿರುವ ಈ ಮಳೆಬಿಲ್ಲು ಬಾಗಿ ಹೇಳಿಲ್ಲವೆ ನನ್ನ ಪ್ರೀತಿ ನಾ ಆಡುತಿರುವ ಈ ಹೊಸ ಸೊಲ್ಲು ಕೇಳಿದೆಯೆ ಬರಿ ಕವನದ ರೀತಿ ಎಲ್ಲವ ಓದುವ ಓ ಜಾಣೆ – ಈ ಕಣ್ಣನು...

ನಲವತ್ತು ಚಳಿಗಾಲಗಳ ಸತತ ದಾಳಿಗೆ ಹೂಡಿ ನಿನ್ನ ಚೆಲುಮೈಯ ಬಯಲಲ್ಲಿ ಕುಳಿಗಳು ತೆರೆದು, ಜನ ಮೆಚ್ಚಿ ದಿಟ್ಟಿಸುವ ಹರೆಯದೀ ಸಿರಿತೊಡಿಗೆ ಏನೇನೂ ಬೆಲೆಯಿರದ ಹರಕು ಜೂಲಾಗುವುದು. ನಿನ್ನ ಹಿಂದಿನ ಚೆಲುವದೆಲ್ಲಿ, ಜ್ವಲಿಸುವ ಹರೆಯ ತಂದ ಸಂಪತ್ತೆಲ್ಲಿ? ಎ೦...

ಈ ನನ್ನ ದೇಹದ ಎಲ್ಲ ಅವಯವಗಳು ಒಂದೇ ಆದರೂ ನಾ ದುಡಿಯುವುದು ಹೊಟ್ಟೆ-ನಿನ್ನ ತುಂಬಿಸಲು ಈ ನನ್ನ ಕಾರ್ಯದಲ್ಲಿ ಮರೆತೆ ಬುದ್ಧಿ ಬೆಳೆಸಲು. ಬೆನ್ನಿಗಂಟಿದ ಹೊಟ್ಟೆ ನಿನ್ನ ಮುಂದೆ ತರಲು ನಾ ಪಟ್ಟ ಪಾಡೇನು? ಅದಕ್ಕಾಗಿ ನಾನೇನು ಬೇಕಾದರೂ ಮಾಡೇನು. ನಿನ್ನ...

ಮುಡಿಗೆ ಮಲ್ಲಿಗೆ ಮುಡಿದು ಹಣೆಗೆ ಕುಂಕುಮವಿಟ್ಟು ಹಸಿರು ಬಳೆಯ ಕೈಗೆ ಬೆಳ್ಳಿಯ ಕಾಲುಂಗುರವ ತೊಟ್ಟು ಮಾಂಗಲ್ಯದಿ ಮತ್ತೈದೆಯಾಗಿ ಮನೆ ಬೆಳಗುವ ಸತಿ ಮನೆಯ ಮನಸುಗಳ ಬೆಸೆಯುವೆ ನೀ ಸುಮತಿ ಗರತಿ ನಿನಗೇತಕೆ ಈ ದುಸ್ಥಿತಿ? ಮೂಡಣದಿ ಸೂರ್ಯ ಮೂಡುವ ಮುನ್ನ ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...