ಪರದೆ ಸರಿಸಿ
ಆಡಬೇಕು
ಹೊಟ್ಟೆಪಾಡಿನ
ನಾಟಕ
ಎಲ್ಲರ ನೋಟಕ
ರಂಗ ಪಂಟಪದೊಳಗೆ
ಒಂಬತ್ತು ಬಾಗಿಲುಗಳಿಗೂ
ಪರದೆ ಕಟ್ಟಿ
ನಟಿಸಬೇಕು ನಿರಂತರ
ಕಣ್ಣಿಗೆ ಕಾಣದ
ಪ್ರೇಕ್ಷಕ
ಮೆಚ್ಚುವಂತ ಆಟಕ
*****