ಜೀನ್ಗೊಟ್ಟಿ ನನಹೇಂತಿ ಕೈಕಟ್ಟ ಬಾಯ್ಕಟ್ಟ ತೌರೋರು ಬಂದಾಗ ಹುಂಚಿಪಕ್ಕ ಒಂದಕ್ಕ ಹತ್ತುಂಡಿ ಬುಟಿತುಂಬ ಹೋಳೀಗಿ ಕರಿಗಡಬು ಹೆರತುಪ್ಪ ಚೊಕ್ಕಚೊಕ್ಕ ||೧|| ಗಂಡಗ ಚಮಚೆಯ ತುಪ್ಪಾನ ನೀಡಾಕಿ ಅಣ್ಣಗ ತಂಬೀಗಿ ಸುರುವ್ಯಾಳ ಮಕ್ಳೀಗೆ ಚಟ್ನೀಯ ಕಿರಿಬೆಳ್ಲೆ ಹ...

ಗೆಳತಿ, ಅಂದು ಅಮವಾಸ್ಯೆ ಕಳೆದು ಹುಣ್ಣಿಮೆ ಬರುತ್ತಿತ್ತು ಹೊಳೆವ ಚಿಕ್ಕಿಗಳ ಮಧ್ಯ ಚಂದ್ರನ ಹಾಲು ಬೆಳದಿಂಗಳು, ಹೊಗಳಿ ವಣ್ಣಿಸುತ್ತಿದ್ದೆ- ಚುಕ್ಕೆ ಚಂದ್ರಮನು, ಭಾವುಕಳಾಗಿದ್ದೆ, ಮೈಮರೆತು ನೋಡುತ್ತಿದ್ದೆ. ಏನು ಹೊಳೆಯಿತೋ ನಿನಗೆ ಚುಚ್ಚಿ ಎಬ್ಬಿಸ...

ಕನ್ನಡಿಯ ಮುಂದೊಂದು ಗಂಟೆ ನಿಂದರು ಕಣ್ ತಣಿಯದಾಶ್ಚರ್‍ಯ ಸೌಂದರ್‍ಯ ಕಣಿಯೆಮ್ಮ ದೇಹವಿರುತಿರಲದ ನೆಣಿಸುವಾದರದ ಮನವೆ ಸಾವಯವ ಮಣಿಯದಿರಾ ವಿಷ ತಜ್ಞತೆಗೆ – ವಿಜ್ಞಾನೇಶ್ವರಾ *****...

ಗಲ್ಲಕ್ಕೆ ಕೈಹೊತ್ತು ಕೂತರೆ ಬುದ್ಧನಂತೆ ತಲೆಯಲಿದ್ದುದು ಪೆನ್ನಿಗೆ ಇಳಿದು ಕಾಗದದ ಮೇಲೆ ಮೂಡುವದಿಲ್ಲ. ವಿಕ್ಷೇಪ… ಅನುಕರಣೆಯ ಅಂಟುರೋಗ ಅಸ್ತವ್ಯಸ್ತ ಮನದ ಒಡಕು ವಿಚಾರ ಭಾವಗಳ ತೊಡಕು ವ್ಯಥಾ ಕಾಲಕ್ಷೇಪ…! ಚಪಲ… ಇಲ್ಲದುದ ಬೇಕ...

ಯಾರು ಯಾರಿಗಾಗಿ ನೀನು ಯಾರಿಗಾಗಿ ಹೊಗಳಿದೆ ಯಾರಿಗಾಗಿ ತೆಗಳಿದೆ ಯಾರಿಗಾಗಿ ನಗಿಸಿ ಅಳಿಸಿದೆ ಯಾರ್‍ಯಾರು ಬಲ್ಲರೂ ನೀನು ಹೇಳು || ಯಾರಿಗಾಗಿ ಜೀವ ತಳೆದೆ ಯಾರಿಗಾಗಿ ಬಂದು ನಿಂದೇ ಯಾರಿಗಾಗಿ ಜೀವ ಸವೆದೇ ಯಾರು ಯಾರಿಗಾಗಿ ಮನುಜ ನೀನು ಹೇಳು || ಜೀವ ...

ನನ್ನ ಮನವ ಭುಗಿಲೆದ್ದ ಆಸೆಗಳಿಗೆಲ್ಲ ಹರಿಯೇ ನೀನೆ ನಿವಾರಿಸು ನಿನ್ನ ತೊರೆದು ಇನ್ನೇನು ಕೋರಲಿ ನನ್ನ ಜನುಮ ದುಕ್ಕನಿ ತಾರಿಸು ತಾಯಿಯ ತೊರೆದು ಪ್ರೀತಿ ಅರೆಸಿದಂತೆ ನಿನ್ನ ತೊರೆದು ಸಂಪತ್ತು ಏಕೆ! ಹಗಲಿರುಳು ನಿನ್ನ ಧ್ಯಾನವೊಂದೇ ನನ್ನ ಮನಃ ಶಾಂತಿಗ...

ಯುಗಾದಿ ಬರುತಿದೆ ಹೊಸಯುಗಾದಿ ಬರುತಿದೆ| ಎಲ್ಲೆಡೆ ಹಸಿರ ಸಿರಿಯು ಚಿಗುರಿ ಬೇವುಹೊಮ್ಮಿ ಮಾವು ಚಿಮ್ಮಿ ನಮಗೆ ಹರುಷ ತರುತಿದೆ ಹೊಸ ವರುಷ ಬರುತಿದೆ ನವಯುಗಾದಿ ಬರುತಿದೆ|| ವನರಾಶಿ ನವ್ಯನವಿರಾಗಿ ಮೈಯತಳೆದು ಬಾಗಿ ತೂಗಿ| ಸಸ್ಯ ಶ್ಯಾಮಲೆ ಕಂಪಬೀರಿ ಕೈ...

ಸ್ಥಿತಿ: ಹಾಳೂರ ಹದ್ದುಗಳೆಲ್ಲ ಹಕ್ಕುಪುಕ್ಕ ಬಿಚ್ಚಿ ಸ್ಮಶಾನದಲ್ಲಿ ಸಂವಿಧಾನಾರ್ಚನೆ; ಬಡಪಾಯಿಗಳ ಚಟ್ಟ ಸಾಲು ಸಾಲು. ಇದ್ದ ನಾಲ್ಕು ಗಜ ಜಾಗದಲ್ಲಿ ಮದಗಜಗಳ ಪಾಲು ಮೂರು ಮುಕ್ಕಾಲು ಕಾರಣ: ಹಚ್ಚಹಸಿರು ಕಳಕಳ ಎನ್ನುತ್ತಿದ್ದಾ ಕಾಲದಲ್ಲಿ ಉಬ್ಬಿ ಸಂವಿ...

ಕಾಯೋ ತಂದೆಯೆ ಕಂದನ ಸದಯ ಕನವರಿಸುತಲಿದೆ ನನ್ನೀ ಹೃದಯಾ || ಪ || ಕಾಲಿವು ಕೆಸರಲಿ ಹೂತಿವೆ ಜೀಯಾ ತಲೆಯಿದು ಮುಗಿಲಿಗೆ ನೋಡುತಿದೆ ಅರಳಿದ ಸುಮಗಳು ಅಣಕಿಪವೆನ್ನ ಹಾರುವ ಹಕ್ಕಿಯು ಕರೆಯುತಿದೆ || ೧ || ಗಗನ ಕುಸುಮಗಳು ಕನಸಾಗುತಿವೆ ಭೂಮಿಯ ಬವಣೆಯು ಹ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...