ವಿಕ್ಷಿಪ್ತ

ಗಲ್ಲಕ್ಕೆ ಕೈಹೊತ್ತು ಕೂತರೆ ಬುದ್ಧನಂತೆ
ತಲೆಯಲಿದ್ದುದು ಪೆನ್ನಿಗೆ ಇಳಿದು
ಕಾಗದದ ಮೇಲೆ ಮೂಡುವದಿಲ್ಲ.

ವಿಕ್ಷೇಪ…
ಅನುಕರಣೆಯ ಅಂಟುರೋಗ
ಅಸ್ತವ್ಯಸ್ತ ಮನದ ಒಡಕು
ವಿಚಾರ ಭಾವಗಳ ತೊಡಕು
ವ್ಯಥಾ ಕಾಲಕ್ಷೇಪ…!

ಚಪಲ…
ಇಲ್ಲದುದ ಬೇಕೆಂಬ
ಹುಂಬತನ.

ಮುಖದ ಮೇಲೆ ಕಳೆಯಿಲ್ಲ
ಕಣ್ಣಿನಲಿ ಹೊಳಪಿಲ್ಲ….. ಕಪ್ಪು ವರ್ತುಲ
ಕೂದಲು ತುಂಬಿದ ಗಲ್ಲ.

ಕತ್ತು; ನೀನು ಜಾತಿ ಹಿಪ್ಪಿ ಅಲ್ಲ…..
ಆ ಹೆಣ್ಣಿನ ಅಗಲವಾದ ಬರಿದು ಸೊಂಟವ
ನೋಡಿ ಕಣ್ಣಿನ ಹಸಿವ ತಣಿಸು
ಪರೀಕ್ಷೆ ಬರೆವ ತಲೆ ನಿನಗಿಲ್ಲ
ವಿದ್ಯೆ ನಿನ್ನ ಸೊತ್ತಲ್ಲ….

ಕಾಗದದ ಮೇಲೆ ಪೆನ್ನಿನ ಮಸಿ ಬೀಳುವುದು
ಅಲ್ಲ ವಿಚಾರ ವಸ್ತು
ಅದು ತಲೆಯೊಳಗಿನ ಕಸರತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾರು ಯಾರಿಗಾಗಿ
Next post ಜಾಣಾ ನಾವಾಗದಿದೇನೆಲ್ಲದಕು ತಜ್ಞರವಲಂಬನೆಯೊ?

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…