ಯಾರು ಯಾರಿಗಾಗಿ ನೀನು
ಯಾರಿಗಾಗಿ ಹೊಗಳಿದೆ
ಯಾರಿಗಾಗಿ ತೆಗಳಿದೆ
ಯಾರಿಗಾಗಿ ನಗಿಸಿ ಅಳಿಸಿದೆ
ಯಾರ್‍ಯಾರು ಬಲ್ಲರೂ ನೀನು ಹೇಳು ||

ಯಾರಿಗಾಗಿ ಜೀವ ತಳೆದೆ
ಯಾರಿಗಾಗಿ ಬಂದು ನಿಂದೇ
ಯಾರಿಗಾಗಿ ಜೀವ ಸವೆದೇ
ಯಾರು ಯಾರಿಗಾಗಿ ಮನುಜ ನೀನು ಹೇಳು ||

ಜೀವ ಉಸಿರಾಟಕೆ
ಸ್ನೇಹ ಜೀವಿಯಾಗಿ ಬೆಸೆದೇ
ಎಲ್ಲಿಂದ ಬಂದೆ ಎಲ್ಲಿಗೆ ಹೋದೇ
ಯಾರ್‍ಯಾರು ಯಾರು ಬಲ್ಲರು ನೀನು ಹೇಳು ||

ಕಳವುದಿಲ್ಲಿ ಮೂರು ದಿನ
ನಡೆವುದಿಲ್ಲಿ ಮೂರು ದಿನ
ಯಾವ ಊರಿನವನು ಯಾವ
ಕೇರಿಯವನು ಯಾರ್‍ಯಾರು ಯಾರು ನೀನು ಹೇಳು ||

ಎಲ್ಲಿಗೆ ಪಯಣ
ಎಲ್ಲಿಯವರೆಗೆ ಋಣ
ಹೆಸರಲ್ಲಿ ಹೆಸರು ಲಿಖಿತ
ಕುಲಗೋತ್ರವ ಅಂಟಿಕೊಂಡವನು
ಯಾರ್‍ಯಾರು ಯಾರು ನೀನು ಹೇಳು ||

ದೇವರಲ್ಲಿ ದೇವ ಪುರಾಣ
ವೇದ ವಾಕ್ಯ ಸಿದ್ಧ ಕಣ
ಶುದ್ಧ ನಡತೆ ನೀತಿ ನೇಮ
ಬುತ್ತಿಕಟ್ಟಿ ಹೊತ್ತವನು
ಯಾರ್‍ಯಾರು ಯಾರು ನೀನು ಹೇಳು ||

ನೂರು ಪೂಜೆ ನೂರು ದಾರಿ
ನೆಟ್ಟವನು ಕತ್ತಲೆ ಬೆಳಕಿನಾಟದಲ್ಲಿ
ಸೂಜಿದಾರ ಪೋಣಿಸಿದವನು
ಸಂತೆಗೆ ನೂರು ಹಾದಿ ಕಂಡವನು
ಎಲ್ಲಿಂದ ಬಂದೆ ಎಲ್ಲಿಗೆ ಹೋದೆ
ಯಾರು ನೀನು ಹೇಳು ||
*****