ಅಮಟೆ ಅಮಟೆ ಎಂದು ಕುಂಟೆಬಿಲ್ಲೆ ಆಡುತ್ತ ಹತ್ತರತ್ತರ ಬಂದು ಕಡೇಮನೆ ಸೇರಿ ಕಿಸಕ್ಕೆಂದು ಹನಿಯುತ್ತಾಳೆ. ಹಳ್ಳತಿಟ್ಟು ಸರಿಮಾಡಿ ನನ್ನ ಹದ ಮಾಡಿ ಕೂರಿಗೆ ಹೂಡಿ ಕಾಡುತ್ತಾಳೆ. ದಾರಿ ಬಿದ್ದಲ್ಲಿ ಬೀಜ ಬಿತ್ತುತ್ತ ಬುಸುಗುಡುತ್ತ ಬೆವರಿಸುತ್ತಾಳೆ. ವಾಸ...

ಇಂಥ ಮಣ್ಣಿನಲಿ ಹುಟ್ಟಿ ಬಂದಿಹುದು ನನ್ನ ಪುಣ್ಯ ಪುಣ್ಯ ಎಂಥ ಸುಕೃತುವೋ ಇದನು ಸವಿಯುವುದು ನಾನೆ ಧನ್ಯ ಧನ್ಯ || ೧ || ಎತ್ತ ನೋಡಿದರು ಪ್ರಕೃತಿ ಮಾತೆಯ ಭವ್ಯ ದಿವ್ಯ ರೂಪಾ ಅವಳ ಮಡಿಲಿನಲಿ ನಲ್ಮೆವಡೆಯುವಾ ಮಗುವಿನಾ ಕಲಾಪ || ೨ || ಕಣ್ಣು ಹಾಯಿಸುಲ...

ಆಗಮನ ಬಾಲ್ತಸ್ಹಾರ್ ! ಬಾಲ್ತಸ್ಹಾರ್ ! ಬೇಸಿಗೆಯ ಸೂಟಿಯಲ್ವೆ ನಿನಗೆ- ಕೊಲರಾಡೋ ರಾಂಚಿನಲ್ಲಿ ಅಷ್ಟು ದಿನ ಇದ್ದು ಹೋಗು ಪಕ್ಕದಲ್ಲೆ ನದಿ ಅದರ ಸುತ್ತ ಬಯಲು ಕುದುರೆ ಮೇಲೆ ಏರಿ ಎಲ್ಲಿ ಬೇಕೋ ಅಲ್ಲಿಗೆ ಊರಾಚೆ ಸೇರುವಂಥ ಶನಿವಾರ ಸಂತೆಗೂ ಅದರಂಚಿಗಿರು...

ಕಾರಂಜಿಗಳಲ್ಲಿ ಪುಟಿಯುತ್ತೆ ನಡಿಗಳಲ್ಲಿ ಹರಿಯುತ್ತೆ ಜಲಪಾತಗಳಲ್ಲಿ ಧುಮುಕುತ್ತೆ ಜಲಾಶಯಗಳಲ್ಲಿ ನಿಲ್ಲುತ್ತೆ ಚರಂಡಿಗಳಲ್ಲಿ ನಾರುತ್ತೆ ನೀರು ಆವಿಯಾಗಿ ಆಕಾಶಕ್ಕೆ ಹಾರಿ ಮುಗಿಲಾಗಿ ಪರಿಶುದ್ಧ ಮಗುವಾಗಿ ಮರುಜನ್ಮ ತಾಳಿ ಮಳೆಯಾಗಿ ಭೂಮಿಯ ಮಡಿಲಿಗೆ ಬ...

ನಿನ್ನ ಕೆನ್ನೆ ಕುಳಿ ನಾನು ಬಿದ್ದ ಸುಳಿ ಹೇಗೆ ಹೊರ ಬರಲಿ? ಈಜಬಲ್ಲೆನೆ ಅಲ್ಲಿ! ನಿನ್ನ ಕಣ್ಣ ಕೊಳ ಕೊಳಕಿಂತ ಅದು ಆಳ ಮುಟ್ಟುವೆನೆ ಅದರ ತಳ ಆಗುವೆನೆ ನಾ ನಿರಾಳ! ಮಾತು ಮೂಡುತಿಲ್ಲ ಮೌನವೆ ಹಾಡಿದೆ ಹಾಡದು ಕಾಡಿದೆ ಬಿಡದೆ ಎಲ್ಲ ಮರೆಸಿದೆ ಇನ್ನಿಲ್ಲ...

ತಿದ್ದುವುದೆಂದರೆ ಸುಮ್ಮನೆ? ತಿದ್ದಲೇ ಬೇಕಿದೆ ಈಗ ಅಕ್ಷರ ಮಗ್ಗಿ ಬಿಟ್ಟು ಕಂಡ ಕಂಡ ವರನ್ನು ಆಗೀಗ ಎದುರಾಗು ವವರನ್ನು ಹೇಳದೇ ಮಾಡು ವವರನ್ನು ಹೇಳಿಯೂ ಮಾಡದವರನ್ನು ಬೆಲೆ ತಿಳಿಯದವರನ್ನು ತಿಳಿದೂ ಬಿಸುಟವರನ್ನು ಆತು ಹತ್ತಿರ ಬಂದವರನ್ನು ಓತು ದೂರ ...

ನಕ್ಷತ್ರ ನೋಡಿ ಅಳೆವವನಲ್ಲ ನಾಳೆಗಳ, ಆದರೂ ಇದೆ ನನಗೆ ಜ್ಯೋತಿಷ್ಯ ನುಡಿವ ಬಲ. ಬರಲಿರುವ ಹಿತ, ಅಹಿತ, ಪಿಡುಗು, ಋತು ಧಾಟಿಗಳ ಕಾಲಕಾಲಕ್ಕೆ ಅದು ಹೇಳಬಲ್ಲದ್ದಲ್ಲ ; ವ್ಯಕ್ತಿಯೊಬ್ಬನ ಬಾಳಿನೊಳಗೆ ಹಾಯುವ ಗಾಳಿ ಸಿಡಿಲು ಮಳೆ ಗುಡುಗುಗಳ ಗುಣಿಸಬಲ್ಲದ್...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...