ಕಾರಂಜಿಗಳಲ್ಲಿ ಪುಟಿಯುತ್ತೆ
ನಡಿಗಳಲ್ಲಿ ಹರಿಯುತ್ತೆ
ಜಲಪಾತಗಳಲ್ಲಿ ಧುಮುಕುತ್ತೆ
ಜಲಾಶಯಗಳಲ್ಲಿ ನಿಲ್ಲುತ್ತೆ
ಚರಂಡಿಗಳಲ್ಲಿ ನಾರುತ್ತೆ
ನೀರು
ಆವಿಯಾಗಿ ಆಕಾಶಕ್ಕೆ
ಹಾರಿ ಮುಗಿಲಾಗಿ
ಪರಿಶುದ್ಧ ಮಗುವಾಗಿ
ಮರುಜನ್ಮ ತಾಳಿ
ಮಳೆಯಾಗಿ
ಭೂಮಿಯ ಮಡಿಲಿಗೆ
ಬೀಳುವ ಭಾಗ್ಯ
ಎಲ್ಲ ನೀರಿಗೂ ಎಲ್ಲಿ ಸಾಧ್ಯ
*****