ಸಿಡಿಲಿನ ಶಕ್ತಿ!!

ಸಿಡಿಲಿನ ಶಕ್ತಿ!!

‘ಸಿಡಿಲು’ ಎಂದಾಕ್ಷಣ ಯಾರಿಗೆ ತಾನೆ ಹೆದರಿಕೆ ಇಲ್ಲ. ಇದರ ಅಬ್ಬರ, ಶಬ್ದ ಬೆಂಕಿಯ ವೇಗಗಳನ್ನು ಕಂಡರೆ ಪ್ರಾಣಭಯ ಪಡುವವರೇ ಹೆಚ್ಚು. ಈಗಾಗಲೇ ಸಹಸ್ರಾರು ಜನ ಸತ್ತಿರುವ, ನೂರಾರು ಕಟ್ಟಡಗಳು ನೆಲಕ್ಕುರುಳಿರುವ, ಅಸಂಖ್ಯಾತ ಮರಗಳು ಸೀಳಿಕೊಂಡಿರುವ ಉದಾಹರಣೆಗಳಿವೆ, ಮಳೆಗಾಲ ಬಂತೆಂದರೆ ಸಿಡಿಲು-ಮಿಂಚುಗಳ ಅರ್ಭಟ ಹೆಚ್ಚಾಗುತ್ತದೆ.

ವಿದ್ಯುತ್ ಕಣಗಳ ಸಮೂಹವು ವೇಗದಿಂದ ಅಪ್ಪಳಿಸುವುದಕ್ಕೆ ನಾವು ‘ಸಿಡಿಲು’ ಎನ್ನುತ್ತೇವೆ. ಈ ಸಿಡಿಲಿನಿಂದ ಉತ್ಪತ್ತಿಯಾಗುವ ಶಕ್ತಿ ಸು.೧೦೦ ಕೋಟಿ ವೊಲ್ಟೇಜ್ ನಷ್ಟಿರುತ್ತದೆ ಎಂದರೆ ನಂಬಲಿಕ್ಕಾಗುವುದೇ ಇಲ್ಲ. ಸಿಡಿಲಿನಿಂದ ಉದ್ಭವಿಸುವ ಮಿಂಚುಗಳು ೩೦೦ ಅಡಿಗಳಿಂದ ನಾಲ್ಕು ಮೈಲಿ ದೂರದವರೆಗೂ ಪ್ರವಹಿಸುತ್ತವೆ. ಇವುಗಳ ಉಷ್ಣತೆ ೩೦,೦೦೦ ಡಿಗ್ರಿ ಸೆಂಟಿಗ್ರೇಡ್ ವರೆಗೂ ಇರುತ್ತದೆ. ಇದು ಸೂರ್ಯಕಿರಣಗಳ ಉಷ್ಣತೆಗಿಂತಲೂ ೫ ಪಟ್ಟು ಅಧಿಕವಾಗಿರುತ್ತದೆ. ಭೂಮಿಯ ಮೇಲೆ ನಿರಂತರವಾಗಿ ಎಲ್ಲೋ ಒಂದು ಕಡೆ ಸಿಡಿಲು ಬೀಳುತ್ತಲೇ ಇರುತ್ತದೆ. ಸೆಕೆಂಡಿಗೆ ೫೦ ರವರೆಗೂ ಬೀಳುವುದು ಸಾಮಾನ್ಯ. ಇವುಗಳಿಂದ ಭವನಗಳು ಕುಸಿಯದಿರಲು ಮಿಂಚು ಸಂವಾಹಕಗಳನ್ನು ಬಳಸುತ್ತಾರೆ. ಇವುಗಳ ಮೂಲಕ ಸಿಡಿಲು ಪ್ರವಹಿಸಿ ಅಪಾಯವಿಲ್ಲದೇ ಭೂಮಿಯೊಳಗೆ ಸಿಡಿಲು ನುಸುಳುತ್ತದೆ. ರೇಡಿಯೋಗಳು, ಟ್ಟಾನ್ಸಿಸ್ಟರ್‌ಗಳು, ಆಂಟೇನಾಗಳು ಈ ಸಿಡಿಲುಗಳನ್ನು ಆಕರ್ಷಿಸುತ್ತವೆ. ಪ್ರಪಂಚದಲ್ಲಿಯೇ ಹೆಚ್ಚಾಗಿ ದಕ್ಷಿಣ ಆಫ್ರಿಕಾದಲ್ಲಿಯೇ ಸಿಡಿಲಿನ ಅಬ್ಬರ ಹೆಚ್ಚಾಗಿರುತ್ತದೆಂದು ಸಿಡಿಲಿನ ಬಗೆಗೆ ಸಂಶೋಧನೆ ನಡಿಸಿದ ವಿಜ್ಞಾನಿಗಳು ಹೇಳುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯೋಗ
Next post ಬಾಲ್ತಸ್ಹಾರ್ ಬಾಲ್ತಸ್ಹಾರ್

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…