ಆಸೆಗಳಿಗೆ ದಾಸನಾಗದಿರು ಮನುಜ ಕಷ್ಟಗಳಿಗೆ ನಿತ್ಯವೂ ಕೈಚಾಚು ನರದೇಹವು ನಿನ್ನದು ಶಾಶ್ವತವಲ್ಲವು ಮೋಹ ಸಂದೇಹಗಳ ಮರೆಮಾಚು ಆತ್ಮವು ದೇಹದ ಆಲಯದಲ್ಲಿದ್ದರೂ ದೇಹದಾಚೆಗೂ ಅದು ಪಸರಿಸಿದೆ ಕಾಲಕ್ಕೆ ತಕ್ಕಂತೆ ದೇಹ ಬದಲಿಸಿದರೂ ಆತ್ಮ ಕಾಲಾತೀತವಾಗಿ ಬೆಳಗಿ...

ಆ ಅಸೀಮದಾ ಸಂಚುಹೊಂಚಿನಲಿ ಒಂದು ಕುದ್ರ ಘಟಕ ವೈಶ್ವಾನರನ ಆವರ್ತನೃತ್ಯರಂಗದಲಿ ಸಣ್ಣ ಚುಟುಕ. ಬಟಾಬಯಲು ಇದು, ಹೋ ಅಭಂಡ ತಾನರ್ಥಹೀನ ಹಳವು ಅಕಸ್ಮಾತ್ತೊ ಎನುವಂತೆ ಬಂತು ಭೂಮಿಯಲಿ ನರನ ಫಲವು. ತನ್ನ ನರೆತ ಅಜ್ಞಾನದಲ್ಲಿ ತಾನೆರೆತ ಒಂದು ಪ್ರಾಣಿ ನೆರಳ...

ಮುನ್ನುಡಿ ರಾಮನನ್ನರಿತವರು ಶಬರಿಯನು ಅರಿತಿಹರು, ಮಾತು ಶಬರಿಯದಲ್ಲ, ಬರವೊನಲಿದಾಕಯದು. ೧ ಬೀಡ ಬಳಿಯೊಳು ಕುಳಿತು: “ಒಬ್ಬಳೇ ಒಬ್ಬಳೀ ಕಾಡಿನೊಳಗಿರುವೆ, ನನ್ನ ಹುಟ್ಟನು ತಿಳಿಯೆ, ಬಳೆದ ಬಗೆಯನ್ನರಿಯೆ, ನಾನಾರು..? ಬಂದೆನೆಲ್ಲಿಂದಿಲ್ಲಿ..? ...

ಅಮ್ಮ ಎಂದು ಯಾರನು ಕೂಗಲಿ? ಅಮ್ಮ ಎಂದು ಯಾರ ತಬ್ಬಿಕೊಳಲಿ| ನಿನ್ನ ಪ್ರೀತಿ ಮಮತೆ ಸಿಗದೀಜಗದಿ ನಾನಾದೆನಿಂದು ತಬ್ಬಲಿ|| ಅಮ್ಮಾ ನನ್ನ ಆಸೆಗಳನ್ನೆಲ್ಲಾ ಯಾರಬಳಿ ಹೇಳಲಿ ಅಮ್ಮ ನನ್ನ ಬೇಕು ಬೇಡಗಳ ಹೇಗೆ ತಾನೆ ತಿಳಿಯಲಿ| ಅಮ್ಮಾ ನನ್ನ ಸರಿ ತಪ್ಪುಗಳ ಹ...

ಬೆದೆ ಹತ್ತಿದ ಎದೆ ಹಾಡಿದಾಗ ಸದೆ ಬಡಿಯುವ ಸಿಂಹಾಸನವೇ ಸಾವ ಸಂಭ್ರಮದಲ್ಲಿ ನೋವು ನಿವಾರಿಸುವ ಜೋಳವಾಳಿಯೇ. ಕಾಲ ಚಕ್ರ ಉರುಳುತ್ತಲೇ ಅರಿವು ಅರಳುತ್ತ ನಾಲಗೆ ನಿಧಾನವಾಗಿ ಮಿಸುಕಾಡುತ್ತಿದೆ ಬಾಯೊಳಗೆ ಬ್ರಹ್ಮಾಂಡ, ಶತಶತಮಾನದ ವಿರಾಟ್ ದರ್‍ಶನ ವಿರಾಟಪ...

ಮಣ್ಣು ಹೊನ್ನಿನ ಗೂಡು ಮಣ್ಣು ಜೀವದ ಸೂಡು ಮಣ್ಣು ಹೆಣ್ಣಿನ ಬೀಡು ಮಣ್ಣು ಗಂಡಿನ ನಾಡು. ಮಣ್ಣು ಪಾವನಮೆದು ತುಳಸಿ ಮೈತ್ರಿಕೆಯಾಯ್ತು ಬಣ್ಣ ಬಣ್ಣದ ಮಣ್ಣು ಮೈಗೆ ಪೂಸುವ ಗಂಧ. ಉಪ್ಪು ಸಿಹಿಕಾರಗಳ ಷಡ್ರಸಾಹಾರಗಳ ಜೀವಕೇ ತವರಿದುವು ಮಣ್ಣು ಸಂಜೀವನವು. ...

ಉಕ್ಕಿ ಹೊರ ಬರಲು ಯತ್ನಿಸುವ ಕಣ್ಣೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ, ನಿಟ್ಟುಸಿರುಗಳ ನುಂಗಿ, ಹಸಿರಿನುಸಿರಿಗೆ ಹಂಬಲಿಸಿ, ಹಳದಿ ಕಾಯಿಲೆ ಓಡಿಸಿದ ಜೀವ ಸೂತ್ರ ಸ್ವತಂತ್ರ. ಮುಚ್ಚಿರುವ ಮುಸುಕಿನ ಅಡಿಯಲಿ ಹಿಡಿದಿಟ್ಟ ಬಿಗಿಯುಸಿರು ಸ್ವತಂತ್ರ ಕೋಗ...

ಮಗಳೆ ನಿನ್ನ ಪ್ರೀತಿಗೆಂದು ಮನೆಯನೊಂದ ಕಟ್ಟಿದೆನು ಮಾಡು ಹಾರಿತು ಗೋಡೆ ಬಿದ್ದಿತು ಮನೆಕಟ್ಟು ಮಾತ್ರ ಉಳಿಯಿತು ಮಗಳೆ ನಿನ್ನ ಪ್ರೀತಿಗೆಂದು ಗೊಂಬೆಯೊಂದ ತಂದೆನು ಬಟ್ಟೆ ಹರಿಯಿತು ಬೆರಳು ಮುರಿಯಿತು ಚೂರು ಮಾತ್ರ ಉಳಿಯಿತು ಮಗಳೆ ನಿನ್ನ ಪ್ರೀತಿಗೆಂದ...

ಕಳೆದು ಹೋದ ದಿನಗಳೆ ಕನಸಾಗಿ ಕಾಡದಿರಿ ಉರುಳಿಹೋದ ಹಾಡುಗಳ ಉರುಳಾಗಿ ಮಾಡದಿರಿ || ಕೈ ಬೀಸಿದ ಚಂದ್ರತಾರೆ ಮಗಿಲಿನಾಚೆ ನಿಲ್ಲಲಿ ಕವಿ ಮಾಡಿದ ಆ ಕೋಗಿಲೆ ಕಾವ್ಯದಲ್ಲೆ ನೆಲೆಸಲಿ ಬದುಕು ನಿತ್ಯ ಶ್ರಾವಣ ಸುವರ್‍ಣದ ಹೂರಣ ನೆನಪಾಗಿ ಬಾರದಿರಲಿ ಚಿತ್ರವಾಗ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...