ಕತ್ತಲು ಕಳೆಯಲು

ಕತ್ತಲು ಕಳೆಯಲು
ಬೆಳಕು ಮೂಡಬೇಕು
ಸುಂದರ ವನದಲಿ
ಹೂವುಗಳು ಅರಳಿರಬೇಕು

ಕಳೆಯ ಚಿಗುರಲಿ
ಪ್ರೀತಿ ತುಂಬಿರಬೇಕು
ಪ್ರೀತಿ ಒಲುಮೆಯಲಿ
ಪ್ರೇಮ ಚುಂಬನವಿರಬೇಕು

ವಿರಹದ ನೋವಲ್ಲಿ
ನೆನಪುಗಳು ಮಿಡಿಯಬೇಕು
ಮಿಡಿದ ಭಾವನೆಗಳಲಿ
ಸ್ವಪ್ನ ಸುಂದರವಾಗಿರಬೇಕು

ಸುಂದರ ಮನಸುಗಳು
ಬರೆದ ಕವಿತೆಗಳು ದೀವಿಗೆಯಾಗಬೇಕು
ದೀವಿಗೆಯು ಕಿರಣಗಳಾಗಿ
ಜಗದ ಮನುಜರ ಬೆಳಕಾಗಿರಬೇಕು

ಮನುಜ ಮನುಜನಲ್ಲಿ
ದಿವ್ಯತೆ ಸೋಪಾನವಾಗಬೇಕು
ಸೋಪಾನದಲ್ಲಿ ಪವಡಿಸುವ
ಹೂಗಳು ತಾಯ ಮಡಿಲ ಸೇರಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೪ನೆಯ ಖಂಡ – ದೈವೀಭಾವನೆ
Next post ಸ್ನೇಹ-ಶಪಥ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…