ಪ್ರಗತಿ ಅಥವಾ ದಾಸ್ಯವಿಮೋಚನೆ – ೧೪ನೆಯ ಖಂಡ – ದೈವೀಭಾವನೆ

ಪ್ರಗತಿ ಅಥವಾ ದಾಸ್ಯವಿಮೋಚನೆ – ೧೪ನೆಯ ಖಂಡ – ದೈವೀಭಾವನೆ

“ಸತ್ಯಂವದ, ಧರ್‍ಮಂಚರ; ಆಚಾರ್‍ಯದೇವೋಭವ, ಮಾತೃ ದೇವೋಭವ, ಪಿತೃದೇವೋಭವ” ಮೊದಲಾದ ಉಪನಿಷದ್ವಾಕ್ಯಗಳು ಪ್ರಗತಿಪರನಿಗೆ ಕೇವಲ ಮಾರ್‍ಗದರ್‍ಶಕಗಳಾಗಿವೆ. ಪ್ರತಿಯೊಬ್ಬ ಮನುಷ್ಯನು ಪ್ರಗತಿಯನ್ನು ಹೊಂದುವಾಗ ದೈವೀಭಾವನೆಯುಳ್ಳವನಾಗಿರೆಬೇಕು. ದೈವೀಭಾವವಿಲ್ಲದೆ ಪ್ರಗತಿಹೊಂದುವದೆಂದರೆ, ನಾಯಿಯ ಬಾಲವನ್ನು ಕೊಳವೆಯಲ್ಲಿ ಹಾಕಿ ಸರಿಮಾಡಹೋದಂತೆಯೇ ಸರಿ. ಗುರುವು ಗುರುತ್ವವನ್ನು ಕಾಯ್ದುಕೊಳ್ಳಲಿಕ್ಕೂ, ಶಿಶ್ಯನು ಶಿಶ್ಯತ್ವ ಕಾಯ್ದುಕೊಳ್ಳಲಿಕ್ಕೂ, ತಾಯಿಯು ಮಾತೃತ್ವವನ್ನು ರಕ್ಷಿಸಲಿಕ್ಕೂ, ತಂದೆಯು ಪಿತ್ರುಭಾವದವನಾಗಿರಲಿಕ್ಕೂ, ರಾಜನು ರಾಜನೆನಿಸಲಿಕ್ಕೂ, ಪ್ರಜೆಗಳು ಪ್ರಜೆಗಳೆನಿಸಲಿಕ್ಕೂ, ಕ್ಷತ್ರಿಯನು ಕ್ಷಾತ್ರಧರ್ಮಿಯಾಗಲಿಕ್ಕೂ, ಬ್ರಾಹ್ಮಣನು ಬ್ರಹ್ಮಜ್ಞಾನಿ ಯಾಗಲಿಕ್ಕೂ, ವೈಶ್ಯನು ವ್ಯವಹಾರದಕ್ಷನಾಗಲಿಕ್ಕೂ, ಶೂದ್ರನು ಬೇಸಾಯಸಾಗಿಸಲಿಕ್ಕೂ ಅರ್‍ಹರಾಗಿ, ಪ್ರಗತಿಪರರಾಗಬೇಕಾದರೆ ದೈವೀಭಾವನೆಯು ಅವರಲ್ಲಿ ಅತ್ಯವಶ್ಯವಾಗಿ ನೆಲೆಗೊಂಡಿರಬೇಕು.

ದೈವೀಭಾವನೆಯೆಂದರೆ ದೇವರಲ್ಲಿ ಇಡುವ ನಿಷ್ಠೆಯು, ಅಥವಾ ಪೂಜ್ಯರಲ್ಲಿ ಇದ್ದ ಭಕ್ತಿಯು. ಭಕ್ತನು ದೇವರಲ್ಲಿ ವಹಿಸುವ ಭಾವನೆಯೂ, ಪತ್ನಿಯು ಪತಿಯಲ್ಲಿ ವಹಿಸುವ ಭಾವನೆಯೂ, ಮಗನು ತಂದೆಯಲ್ಲಿ ವಹಿಸುವ ಭಾವನೆಯೂ, ಪ್ರಜೆಗಳು ರಾಜನಲ್ಲಿ ವಹಿಸುವ ಬಾವನೆಯೂ, ದೈವೀಭಾವನೆಯ ದ್ಯೋತಕಗಳಾಗಿರುವವು; ದೈವೀ ಭಾವನೆಯಿಲ್ಲದ ಭಕ್ತನು ಭಕ್ತನಲ್ಲ; ಪತ್ನಿಯು ಪತ್ನಿಯಲ್ಲ; ಮಗನು ಮಗನಲ್ಲ; ಪ್ರಜೆಗಳು ಪ್ರಜೆಗಳಲ್ಲ. ಹೀಗೆಯೇ ಪ್ರಗತಿಪರ ಮನುಷ್ಯನು ಸಮಾಜದಲ್ಲಿ ಅವಶ್ಯವಾಗಿ ವಹಿಸಬೇಕಾದ ದೈವೀಭಾವನೆಯುಳ್ಳವನಾಗಿರಬೇಕಲ್ಲದೆ, ಸ್ವೀಕೃತಕಾರ್ಯದಲ್ಲಿಯೂ, ಕಾರ್‍ಯಸಾಧನಗಳಲ್ಲಿಯೂ, ಕಾರ್‍ಯಸಾಧಕನಾದ ತನ್ನಲ್ಲಿಯೂ ದೈವೀಭಾವನೆಯುಳ್ಳವನಾಗಿರಬೇಕು. ಕಾರ್ಯ, ಸಾಧನ, ಸಾಧ್ಯ ಈ ತ್ರಯಿಗಳಲ್ಲಿಯೂ ದೈವೀಭಾವನೆಯು ಸರಿಯಾದ ಪ್ರಮಾಣದಲ್ಲಿದ್ದ ಹೊರತು ಸಾಧಕನ ಪ್ರಗತಿಯು ಆಗುವದಿಲ್ಲ.

ಬ್ರಹ್ಮಭಾವನೆಯುತನಾಗಬೇಕಾದರೆ “ಆಹಂಬ್ರಹ್ಮಾಸ್ಮಿ” ಎಂದು ಸಾಧಕನು ತಿಳಿದಿರಬೇಕಾಗುವದು. ಗುರುಸಾಕ್ಷಾತ್ಕಾರ ಮೊದಲಾದವುಗಳಿಗಿಂತ ಆತ್ಮಸಾಕ್ಷಾತ್ಕಾರವೇ ಪ್ರಗತಿಪರನಿಗೆ ಪ್ರಾಮುಖ್ಯವಾದ ಸಾಧನವೆಂದು ವೇದಾದಿಗಳಲ್ಲಿ ಹೇಳಿದೆ. ಆತ್ಮಸಾಕ್ಷಾತ್ಕಾರದಿಂದ ಬ್ರಹ್ಮತ್ವವನ್ನು ವಹಿಸುವವನು, ತಾನೊಬ್ಬ ಕೈಲಾಗದ ಆಶಾವಾದಿಯೆಂದು ಭಾವಿಸಿ ನಡೆದರೆ, ಬ್ರಹ್ಮತ್ವವನ್ನು ಎಂದೂ ಹೊಂದಲಾರನು. ಆದ್ದರಿಂದ ಪ್ರಗತಿಪರನು ಸುಗುಣಯುತನಾಗಿ ಸ್ವಂತದ ವಿಷಯದಲ್ಲಿ ದೈವೀಬಾವನೆಯುಳ್ಳವನಾಗಿರಬೇಕು. ಆದರೆ ನಾನೇ ದೇವರು; ನಾನೇ ಕುಲಗುರುವು; ನಾನೇ ಕುಲಪತಿಯು ಎಂದು ಬಹಿರಂಗದಲ್ಲಿ ಹೇಳುತ್ತಾ ಹೋಗುವದು ದೈವೀಭಾವನೆಯ ಲಕ್ಷಣವಲ್ಲ. ಭಾವನೆಯು ಬರೇ ಭಾವಿಸತಕ್ಕ ವಿಷಯೆವೇ ಹೊರೆತು ಒಡನುಡಿಯುವ ವಿಷಯವಲ್ಲ.

ಪ್ರಗತಿಪರನು ತಾನೆಷ್ಟು ಪೂಜ್ಯನೂ, ಸನ್ಮಾರ್‍ಗಿಯೂ ಕರ್‍ತೃ ಮಾಕರ್‍ತೃಮಶಕ್ಕ್ತಿಯುಳ್ಳವನೂ ಆಗಿದ್ದರೂ, ತನ್ನ ದೊಡ್ಡಿಸ್ತಿಕೆಯನ್ಮು ಹೇಳಿಕೊಳ್ಳಬಾರದು. ಹೀಗೆ ಹೇಳುವದರಿಂದ ತನ್ನ ಬಗ್ಗೆ ಜನರಲ್ಲಿ ಆದರವು ಕಡಿಮೆಯಾಗಿ, ದ್ವೇಷಕ್ಕೆ ಗುರಿಯಾಗಿ ಸನ್ಮಾರ್‍ಗದಿಂದ ಚ್ಯುತಿಹೊಂದಲಿಕ್ಕೆ ಕಾರಣವಾಗುವದು. ಆದ್ದರಿಂದಲೇ ಅವತಾರಿಕರು ಕೂಡ ತಾವು ಕಿಂಕರರೆಂದು ಹೇಳಿಕೊಳ್ಳುವರು. “ಮಹಾ ರಾಜಾ, ಈ ದೇಹಕ್ಕೆ ಎದೆ ಸೀಳಿದರೆ ಮೂರು‌ಅಕ್ಷರವಿಲ್ಲ ಮಹಾ ರಾಜಾ! ಆದರೆ ಮಹಾರಾಜಾ, ಮಹಾಸ್ಟಾಮಿಯು ಈ ಘಟದ ನಾಲಿಗೆಯೆ ಮೇಲೆ ಕುಳಿತುಕೊಂಡು, ಮೃದಂಗಬಾರಿಸುವವನು ಛಾಪಹಾಕಿ ಮೃದಂಗವನ್ನು ನುಡಿಸುವಂತೆ, ನುಡಿಸುತ್ತಿರುವನು, ಮಹಾರಾಜಾ” ಎಂದು ನುಡಿದು ದೇವರಲ್ಲಿ ತಾನು ಎಷ್ಟು ದೈವೀಭಾವನೆಯುಳ್ಳವನಾಗಿದ್ದೇನೆಂಬದನ್ನು ವ್ಯಕ್ತಗೊಳಿಸುತ್ತಿದ್ದ ಶ್ರೀ ಶೇಷಾಚಲ ಗುರುವರನನ್ನು ನೋಡಿದವರಿಗೆ ನಿಜವಾದ ದೈವೀಭಾವನೆಯ ಕಲ್ಪನೆಯು ಆಗದಿರದು.

ಪ್ರಗತಿಪರನು ಎಂಥ ನೀಚನನ್ನೂ ನಿಂದಿಸಬಾರರು. ವಿರಾಟ್‌ ಸ್ವರೂಪವಾದ ಜಗತ್ತೆಲ್ಲ ಈಶ್ವರನ ಸ್ವರೂಪವೇ ಆಗಿರುವದರಿಂದ ಪ್ರತಿಯೊಂದನ್ನು ಈಶ್ವರೀ‌ಅಂಶವೆಂದು ತಿಳಿದು ನಡೆಯುವಲ್ಲಿ ಯಾವ ತರದ ದೋಷವೂ ತಟ್ಟುವ ಸಂಭವವಿಲ್ಲ. “ಶುನಿಚೈವ ಸ್ವಪಾಕೇಚ ಪಂಡಿತಃ ಸಮದರ್ಶಿನಃ” ಎಂಬಂತೆ ವಿವೇಕಿಯಾದ ಪ್ರಗತಿಪರಪಂಡಿತನು ಜಗತ್ತಿಗೇ ಕಿಂಕರಭಾವವುಳ್ಳವನಾಗಿ ನಡೆಯುವದು ಅತ್ಯವಶ್ಯವು. “ಕಿಂಕರನಾದಹೊರತು ಶಂಕರನಾಗಲಾರನೆ”ಂಬ ದೊಡ್ಡವರ ವಚನದ ಮರ್‍ಮವೂ ಇದೇ ಆಗಿದೆ;

ಆದರೆ ದೈನೀಭಾವನೆಯು, ವಿವೇಕಿಗಳು ಸಂಪಾದಿಸತಕ್ಕ ಗುಣವಾಗಿದೆಯೇಹೊರತು, ಅವಿವೇಕಿಗಳಿಗೆ ಸಾಧ್ಯವಲ್ಲ. ಅವಿವೇಕಿಗಳಿಂದ ದೈವೀಭಾವನೆ ಧರಿಸಲ್ಪಡಬೇಕಾದರೆ ಅನರ್ಥಕಾರಕಗಳಾದ ತಪ್ಪುಗಳಾಗುವ ಅಂಜಿಕೆ ಬಹಳ ಉಂಟು. “ಮಾಘವನ್ನೋದಿ ಮಗಕೆಟ್ಟನು, ಕುಮಾರವನ್ನೋದಿ ಅಳಿಯಕೆಟ್ಟನು” ಎಂಬಂತೆ ಅವಿವೇಕಿಗಳಿಗೆ ದೈವೀಭಾವನೆಯ ನಿಜಸ್ವರೂಪವು ಗೊತ್ತಾಗದಿದ್ದರೆ ಅವರು ಅಡ್ಜಮಾರ್‍ಗವನ್ನು ಹಿಡಿಯಹತ್ತುವರು, ಹೆಂಡತಿಯೆಲ್ಲಿ ದೈವೀಭಾವನೆಯಿಡುವವನು ಆಕೆಯನ್ನು “ಭೋಜ್ಯೇಷು ಮಾತಾ ಶಯನೇಷು ರಂಭಾ ಕಾರ್‍ಯೇಶು ಮಂತ್ರಿ…” ಹೀಗೆ ತಿಳಿಯಬೇಕು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಕ್ತಿ ತರಂಗಗಳು
Next post ಕತ್ತಲು ಕಳೆಯಲು

ಸಣ್ಣ ಕತೆ

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ಬೆಟ್ಟಿ

  ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…