ಬನ್ನಿ ಕೂಗಾಡೋಣ ಸ್ಟೇಚ್ಛೆಯಾಗಿ ಕಿತ್ತಾಡೋಣ ಬಾಯ್ತುಂಬ ಜಗಳ ಮಾಡೋಣ ಸಂಶಯ, ಅಸಮಾಧಾನ ಅಶಾಂತಿ, ಜಿಗುಪ್ಸೆ ಪರಸ್ಪರ ಮಿಥ್ಯಾರೋಪ ಎಲ್ಲ ಹೊರ ಹಾಕೋಣ ನೋವಿಳಿಸಿ ಹಗುರಾಗೋಣ ದ್ವೇಷ ರೋಷ ಮರೆಯೋಣ ನಗುತ ನಗುತ ಬಾಳೋಣ. ಮೌನಾರೋಪ ಬೇಡ ಶೀತಲ ಯುದ್ಧ ಬೇಡ ಮನ...

ಅಂತರಂಗದ ಹೂವು ಅರಳಿತು ಶಿವನ ಸುಂದರ ಮಿಲನದಿ ಜಡವು ಜಾರಿತು ಜ್ಯೋತಿ ಚಿಮ್ಮಿತು ಜ್ಞಾನ ಸೂರ್ಯನ ಉದಯದಿ ನಶೆಯು ಏರಿತು ಖುಶಿಯು ತುಂಬಿತು ಮೌನದಾರತಿ ಬೆಳಗಿತು ಬಿಂದು ರೂಪದ ಜ್ಯೋತಿ ಅರಳಿತು ಸಿಂಧು ರೂಪವ ಬೆರೆಯಿತು ಹಾಲುಜೇನು ಕಾಮಧೇನು ಹೃದಯ ಹೂಬನ...

ಸ್ತ್ರೀಯರಿಗೆ ಸತೀತ್ವಕ್ಕಿಂತ ಬೇರೆ ಧರ್ಮವಿಲ್ಲವೆಂದು ಹೇಳಿದ ಪುರುಷ ಶಾಸ್ತ್ರಕಾರರು, ಭಗವತಿಯ ಸ್ನೇಹ ಬಯಸಿ ಶಾಸ್ತ್ರಗಳನ್ನೆಲ್ಲಾ ಮರೆತು ಹೋದರು. *****...

ಜೀವವನು ಜೊತೆಗೂಡಿ ಜೀವ ನವನೆಮಗೀವ ಪ್ರಕೃತಿಯೊಳಿಪ್ಪೆಲ್ಲ ಜೀವಿಗಳ ಕೊಲ್ಲುವುದೆ ಕೃಷಿಯೆಂ ಬವಸಕೆ ಬಿದ್ದಿರಲೀ ಯುದ್ಧದೊಳು ಸಾವವರಾರೆಂದು ಆರು ಪೇಳುವುದೆಂತು? – ವಿಜ್ಞಾನೇಶ್ವರಾ *****...

ಮೇ ತಿಂಗಳ ಪ್ರಖರ ಬಿಸಿಲು ಗುಲ್‌ಮೋಹರಿನ ಕೆಂಪು ರಾಚಿ ಕವಿತೆಗಳು ಸೆಖೆಯಿಂದ ತೊಯ್ದ ತಪ್ಪಡಿಯಾಗಿ, ತುಸು ನೀರಿನ ಝಳಕಕ್ಕೆ ಅರಳಿ ಮೆತ್ತಗೆ ನನ್ನ ಕೈ ಸೋಕಿದವು. ಬೇವಿನ ಮರಕ್ಕೆ ಒಡ್ಡಿ ಮಲಗಿದ ಮುದುಕಿ ಬಿಸಿಲಲ್ಲಿ ತನ್ನ ಕುಬುಸದ ಗುಂಡಿ ಬಿಚ್ಚಿ ಅಡ್...

ತಪ್ಪಾಯ್ತು ನನ್ನದೂ ಶಾಶ್ವತವಲ್ಲದ ಪ್ರೀತಿಯ ನೆನೆದು ಇಹದ ಮೋಹ ದಲ್ಲಿ ಬೆಸೆದು ನೊಂದನೂ ಗುರುವೇ ದಾರಿ ತೋರೆನಗೆ ಅವನಿಲ್ಲದ ಹಾಡು ಪಾಡು ಇವನಿಲ್ಲದ ಕಡಲು ನಿನ್ನ ಅಭಯ ಕಡಲ ದೋಣಿಯಲಿ ನಾನು ದಡವ ಸೇರಿಸು ಗುರುವೇ ದಾರಿ ಕಾಣಿಸೂ ಅವನೊಂದು ಬಣ್ಣದ ಕೊಡ ...

ಮಾನವನಲಿ ಆಧ್ಯಾತ್ಮ ವಿಕಾಸಬೇಕು ಇದಕ್ಕಾಗಿ ಸದಾ ಶ್ರಮವಹಿಸಬೇಕು ನಮ್ಮ ಅಂತರಂಗ ನಾವು ತಿಳಿಯಬೇಕು ಭಾವಗಳ ಆಳಕ್ಕೆ ನಾವು ಇಳಿಯಬೇಕು ಬಾಳಿನಲ್ಲಿ ದೇಹ ರಕ್ಷಣೆ ದೊಡ್ಡದೇನಲ್ಲ ದೇಹ ಕಾಪಾಡುವುದಕ್ಕೆ ಹೆಣಗಬೇಕಿಲ್ಲ ದೇಹದತ್ತ ನೀನುವಾಲಿದೆ ಆದರೆ ಆಯ್ತು ...

ನೀನಿರುವೆ ಎಲ್ಲೋ| ಸುಂದರ ಶಿಲ್ಪಕಲೆಯ ಗುಡಿಯಲೋ ಈ ವನರಾಶಿ ಪ್ರಕೃತಿಯ ಮಡಿಲಲೋ| ಶ್ರೀಮಂತರ ಸುಪ್ಪತ್ತಿಗೆಯಲೋ ಬಟ್ಟೆ ಪೀತಾಂಬರವಿರದ ಹರಕು ಬಟ್ಟೆಯನುಟ್ಟ ಮುರುಕು ಮನೆಯ ತಿರುಕನಲೋ|| ಜಗಜಗಿಸುವ ವಜ್ರಖಚಿತ ಮುತ್ತುರತ್ನ ಮುಕುಟ ಧರಿಸಿದವನಾಗಿಯೋ ಮಣಿ...

ಬಡವನ ಹೆಂಡತಿ ಒಡೆದ ಮಡಕೆಯ ಬಾಳು ಸೋರಿ ಹೋಗುವ ಸುಖ ಹೆಂಗೆ ತೆಡೆದಾಳೊ ತಾಯಿ ಹೆಂಗೆ ಪಡೆದಾಳೊ? ಒಡೆಯನ ಒಡಲಿಗೆ ಜೀತಗಾರನು ಗಂಡ ಸಂಜೀಕೆ ಬಂದಾನು ಹೊತ್ತು ತಂದಾನು ಗೊಟಕೆನ್ನುವ ಮಕ್ಕಳಿಗೆ ಗುಟುಕು ಕೊಟ್ಟಾನು. ಬಯಕೆ ಬಾಗಿಲ ಬಳಿ ತವಕದ ತವರು ಸೀರೆ ತ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...