ದೇಹ ಆತ್ಮ ಭಾವ

ಮಾನವನಲಿ ಆಧ್ಯಾತ್ಮ ವಿಕಾಸಬೇಕು
ಇದಕ್ಕಾಗಿ ಸದಾ ಶ್ರಮವಹಿಸಬೇಕು
ನಮ್ಮ ಅಂತರಂಗ ನಾವು ತಿಳಿಯಬೇಕು
ಭಾವಗಳ ಆಳಕ್ಕೆ ನಾವು ಇಳಿಯಬೇಕು

ಬಾಳಿನಲ್ಲಿ ದೇಹ ರಕ್ಷಣೆ ದೊಡ್ಡದೇನಲ್ಲ
ದೇಹ ಕಾಪಾಡುವುದಕ್ಕೆ ಹೆಣಗಬೇಕಿಲ್ಲ
ದೇಹದತ್ತ ನೀನುವಾಲಿದೆ ಆದರೆ ಆಯ್ತು
ನಿನ್ನಿಂದ ದೇವನು ದೂರ ತಿಳಿಬೇಕಲ್ಲ!

ಪೂರ್ವಕ್ಕೆ ವಾಲಿದರೆ ಸೂರ್ಯನಂತೆ
ಪಶ್ಚಿಮದತ್ತ ಸರಿದರೆ ಅಂಧಕಾರವಂತೆ
ಹಾಗೆ ದೇಹದತ್ತ ನೀನು ನೋಡಿದರೇನಂತೆ
ತಮಸವನ್ನು ನೀನು ಅನುಸರಿಸಿದಂತೆ

ದೇವರ ಸಾಕ್ಷಾತ್ಕಾರವಿಲ್ಲದ ಈ ತನು
ಹಣ್ಣು ಹೂವಿಲ್ಲದ ಮರವು ತಾನು
ಎಷ್ಟು ಕೂಡಿಟ್ಟರೂ ಅಶಾಶ್ವತ ಹೊನ್ನು
ಮಾಣಿಕ್ಯವಿಠಲನಿಗೆ ಮಣ್ಣು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀನಿರುವೆ ಎಲ್ಲೋ
Next post ಕಲಿಯುಗಾ ಬಂತು

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…