ಸೀತೆಯ ವೈಭವೀಕರಿಸಿದರು ಅವಳ ಪತಿಭಕ್ತಿಗಾಗಿ ಎಲ್ಲೂ ವೈಭವೀಕರಿಸಲಿಲ್ಲ ಅವಳ ಧೀಃಶಕ್ತಿಗಾಗಿ ಪರಿತ್ಯಕ್ತ ಹೆಣ್ಣೊಬ್ಬಳು ಒಬ್ಬಂಟಿಗಳಾಗಿ ಮಕ್ಕಳ ಬೆಳೆಸಿದ ಅವಳ ಆತ್ಮಶಕ್ತಿಗಾಗಿ! ತರಲಿಲ್ಲವೇ ಗಾಂಧಾರಿ ಕುರುರಾಜನಲಿ ಮಾನಸಿಕ ಸಮಸ್ಥಿತಿ? ಉಕ್ಕಿಸಲಿಲ್ಲ...

ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ ಗಾನವೇದಿಕೆಯೆನಿಸಿ, ಝಗಝಗಿಸಿ, ಈಗ ಬರಿ ಹಣ್ಣೆಲೆಯೆ ತುಂಬಿರುವ, ಇಲ್ಲ ಒಂದೆರಡಿರುವ, ಅಥವ ಚಳಿಕೊರೆತಕ್ಕೆ ಬೆದರಿ ಎಲ್ಲಾ ಉದುರಿ ಭಣಗುಡುವ ಒಣಕೊಂಬೆ ಕಾಂಡಗಳ ಹೇಮಂತ ನನ್ನ ಮೈಯಲ್ಲಿ ನೆಲೆ ಹೂಡುವುದ ನೋ...

ಬಾರೆ ಗೆಳತಿ ಬಾರೆ ಕೃಷ್ಣ ಬಂದ ನೀರೆ ನಿನ್ನ ಮುಖವ ತೋರೆ ಮನದ ಮಬ್ಬು ಜಾರೆ ದಣಿದು ಬಂದ ರಂಗ ಏಕೆ ಮನಕೆ ಭಂಗ ಬಾರೆ ಬಾರೆ ಹೀಂಗ ತಳುವಬೇಡ ಹಾಂಗ ಕೊಳಲ ನುಡಿಸಲಾರ ಜಾಣೆ ನೀನೆ ಬಾರ ಅವನ ಹೃದಯ ಭಾರ ಇಳಿಸೆ ನೀನೆ ಬಾರ ಕಮಲ ಕಣ್ಣು ಬಾಡಿ ನಿನ್ನ ನೆಲ್ಲು...

ಪೇಟೆ ಬೀದಿಯಲ್ಲಿ ಹಗಲು – ಹತ್ತು ಘಂಟೆಯ ಸಮಯ ಒಬ್ಬ ಬಿದ್ದಿದ್ದ ಕುಡಿದೋ ಜ್ಞಾನ ತಪ್ಪಿಯೋ, ಸತ್ತೋ ಬಿದ್ದಿದ್ದ. ನೋಡಲು ಯಾರಿಗೂ ಮನಸ್ಸಿಲ್ಲ, ಧೈರ್ಯವಿಲ್ಲ, ಸಮಯವಿಲ್ಲ ಸಂಜೆ – ಅವನು ತರಕಾರಿ ಮಾರುತ್ತಿದ್ದ. ಬೆಳಗಿನ ವೇಳೆ ಸಂತೆಯಲ್...

ಅರಿತ ಜೀವಿಗಳೆರಡು ಬೆರೆತು ಸಪ್ತಪದಿಯ ಹಾದಿ ತುಳಿದು ಜೀವನ ಸಂಗಾತಿಗಳಾಗಿ ನಡೆದು ಬಾಳ ದೋಣಿಯನೇರಿ ತೀರ ಬಿಡಲು ಪಯಣವು ಹಾಯಾಗಿ ಸಾಗಿರಲು ದೂರ ತೀರವ ಸೇರುವ ತವಕ ನಡೆಯುತಿರಲು ಪ್ರೀತಿಯ ಪುಳಕ ಪ್ರಣಯದ ಗೀತೆಯ ಹಾಡಿತು ಮನ ಮಧು ಚಂದ್ರದಲಿ ಒಂದಾದರು ದ...

ಉಸಿರು ತುಂಬಿದ ಕ್ಷಣದಿಂದ ಯಾಚನೆಗೊಡ್ಡಿದ ಅನಾಥ ಬೊಗಸೆ ಬಿಕ್ಕಳಿಸುತ್ತಲೇ ಇದೆ ಕೊಚ್ಚಿ ಬಂದ ಮಹಾಪೂರ ತುಂಬಿಟ್ಟುಕೊಳಲಾಗದೇ ಅದಕ್ಕೆ ಬರಿದೇ ಮುಳುಗಿ ಮೀಯುವ ಸಂಭ್ರಮ ಉಕ್ಕುವ ನೀರಿನಲ್ಲೂ ಕರಗಿಸುವ ಆರ್ದ್ರತೆ! ಆ ಸೆಳೆತಕ್ಕೆ ಪುಟ್ಟ ಬೊಗಸೆಯೇ ಕರಗಿ ...

ಹಗಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ; ಖಗ ಹಾರಿತು ಗೂಡಿನ ಒಳಗೆ; ಜಗವೆಲ್ಲಾ ಬೆಳಗಿತು ದೀಪವು ಬೆಳಗೆ, ಗಗನಾಂಗಣದಲ್ಲಿ ಉಡು ತೊಳಗೆ; ಮೃಗವೆಲ್ಲಾ ಅಲೆವವು ಬೆಟ್ಟದ ಕೆಳಗೆ; ಹೊಗುತಿರುವುದು ಕತ್ತಲೆ ಇಳೆಗೆ. ಓ-ಮಗುವೇ, ನೀ ಸಂಜೆಯ ಗಳಿಗೆಯಲಿ ನಗುತಲಿ...

ಗುರು ಹಿರಿಯರೊಡಗೂಡಿ ಪ್ರಕೃತಿಯ ಕುರಿತಾಡಿ ಅನ್ನದರಿವನು ಮೈಗೂಡಿ ಗರಿತಳೆದೊಂದುಚಿತದುನ್ನದ ಕೃಷಿ ಜಾರಿ ಹೋಯ್ತಲಾ ಕನ್ನದರಿವಿನಲಿ ವಾರಿಯೊಡಗೂಡಿ ಭಾರಿಯಾಳದಲಿ – ವಿಜ್ಞಾನೇಶ್ವರಾ *****...

ಎಲ್ಲಿದ್ದರೇನು ಹೇಗಿದ್ದರೂ ಏಕಾಂಗಿ ನಾನು ಮುಚ್ಚಿಡಲಾರೆನು, ಬಿಚ್ಚಿಡಲಾರೆನು ಭಾವನೆಗಳ ಮಹಾಪೂರ ಕುಳಿತಿರಲಿ ಮಲಗಿರಲಿ ಬಂದು ಮುತ್ತುವಿರಿ ಒಗಟಾಗಿ ನಿಂದು ಬರುವಿರೇಕೆ ಮನದ ಗೂಡಿನೊಳಗೆ ಕುಣಿಯುವಿರೇಕೆ ಪರದೆಯೊಳಗೆ ಕಾಡುವಿರೇಕೆ ಕನಸುಗಳ ಕತ್ತರಿಸುವ...

ಮಿಂಚು ಬಾರೆ ಮಿಂಚು ರಾಣಿ ! ಮುದ್ದು ಮೊಗವ ತೋರೆ ಜಾಣಿ !! ಮುಗಿಲಿನಲ್ಲಿ ಮಲಗಿಕೊಂಡು ಮೋಡಗಳಲಿ ಮುಸುಕಿಕೊಂಡು ಸೂರ್‍ಯನಿಲ್ಲದ ಸಮಯದಲ್ಲಿ ಕತ್ತಲೇರುವ ಕಾಲದಲ್ಲಿ ಕಣ್ಣು ಮುಚ್ಚಲು ಕಾಣಿಸಿಕೊಳ್ಳುವಿ ! ಕೈಯಚಾಚಲು ಕಾಲುತೆಗೆಯುಸಿ ! ಮಿಂಚು ಬಾರೆ ಮಿ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...