ಮುಗಿಯಿತೆ ನಾಟಕವು ಪರದೆ ಕೆಳಕ್ಕಿಳಿಯಿತೆ ಪ್ರೇಕ್ಷಕರೆದ್ದು ಹೋಗಿಯಾಯಿತೆ ನೇಪಥ್ಯ ಬರಿದಾಯಿತೆ ವೇಷ ಕಳಚಬೇಕು ನಟರು ಮುಖವ ತೊಳೆಯಬೇಕು ಅವರು ತೊಳೆದರೂನು ಬಣ್ಣವು ಮೋರೆಯಲ್ಲಿ ಇನ್ನುವು ಇನ್ನೂ ಏನೊ ಉಳಿದಂತೆ ಕತೆಯಿನ್ನೂ ಮುಗಿಯದಂತೆ ಮಾತು ಅರ್‍ಧವು...

ಕವಿತೆ ಹುಟ್ಟುವ ಸಮಯ ಗೊತ್ತಿಲ್ಲ ಕವಿತೆ ಬರೆವುದು ಹೇಗೆ ಗೊತ್ತಿಲ್ಲ ಕವಿತೆ ಬೆಳೆವುದು ಎಲ್ಲಿ ಕವಿತೆ ಅಳಿವುದು ಎಲ್ಲಿ? ಗೊತ್ತಿಲ್ಲ ನಾವು ಕವಿಗಳಾದೆವೆ ಬರೆದ ಕವಿತೆ ಪೂರ್‍ಣವೆ? ಗೊತ್ತಿಲ್ಲ ಕವಿತೆ ಹುಟ್ಟಬಲ್ಲದೆ ಹುಟ್ಟು ಕವಿತೆಯ ಸಾವೆ? ಗೊತ್ತಿ...

ಕುಂವೀ ಕಟ್ಟಿದರ ಮನೆಯಲ್ಲ ರಾಜರಾಜರ ದೊರೆ ಮನೆಯಲ್ಲ ಸುಗಂಧ ಬೀಸುವ ತಂಗಾಳಿಯಿಲ್ಲ ಚಾಮರ ವಿಕ್ಕುವ ದಾಸಿಯರಿಲ್ಲ ಇದು ಬಡವರ ನಿರ್ಗತಿಕರ ದಿಕ್ಕೆಟ್ಟವರ ಮನಸ್ಸಂತೆ, ಅವರವರಿಗದೇ ಅರಮನೆ ಯಂತೆ ಹಾಗೆ ಹೂವಿಗೆ ಕಾಯಿಗೆ ಗಿಡಕ್ಕೆ ಮರಕ್ಕೆ ಕಲ್ಲಿಗೆ ಮಣ್ಣಿ...

ಚೆಲುವ ಬಣ್ಣಿಸಬಹುದು ಒಲವ ಬಣ್ಣಿಸಬಹುದೆ? ಹೇಗೆ ಬಣ್ಣಿಸಲದನು ನಲುಗದಂತೆ… ಬಣ್ಣನೆಗೆ ಮೀರಿದುದು ಹೀಗೆಂದು ತೋರುವುದು ಚಂದಿರನ-ನೈದಿಲೆಯ ಸ್ನೇಹದಂತೆ ನದಿಯ ಬಣ್ಣಿಸಬಹುದು ಒಳಗುದಿಯ ಬಣ್ಣಿಸಬಹುದೆ ಹೇಗೆ ಬಣ್ಣಿಸಲಿ ಕುದಿಯ ಕಲಕದಂತೆ… ಬ...

ನನಗೋ ತಂತಿ ಮೀಟುವಾಸೆ ಆಕೆಗೋ ತಂಬೂರಿ ಆಗುವಾಸೆ ಆಕೆಗೊ ಕಾಮನ ಬಿಲ್ಲಾಗುವಾಸೆ ನನಗೋ ಕಾಮನಬಿಲ್ಲು ಕಾಣುವಾಸೆ ಪಕ್ಕದ ಮನೆ ಬೆಳಕಿಗೆ ನಮ್ಮಿಬ್ಬರ ಕಾಡುವಾಸೆ ಸದ್ದಿಗೇಕೋ ಮುನಿಸು ದಿಗ್ಗನೆದ್ದು ನೋಡಿದಳಾಕೆ ಜಾರಿದ ಸೆರಗನ್ನು ಸರಿಪಡಿಸುತ ಬೆಕ್ಕೊಂದು ...

ಹೊಸಕವಿತೆ ಬರೆಯ ಹೊರಟಾಗ ನನಗರಿವಾಯಿತು ನನ್ನೊಡಲು ಬರಿದಾಗಿದೆಯೆಂದು! ಹಳೆಯ ಕವಿತೆಗಳೆಲ್ಲ ಸತ್ತು ಹೋಗಿದ್ದವು ಹೊಸ ಹುಟ್ಟಿಗೆ ಜೀವ ಭಾವ ಕಾದುಕೊಂಡಿತ್ತು ಆದರೆ ಹೊಸ ಕವಿತೆ ಹುಟ್ಟಲಿಲ್ಲ! ಮನಸ್ಸು ಭಾವದ ಸಂಭೋಗವಾದರೂ ಹೊಸಹುಟ್ಟು ಉದಯಿಸಲಿಲ್ಲ. ಹೇ...

ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ ಹೀಗೇ ಉಳಿವೆ ನಾನು, ನೀನು ಬದಲಾದರೂ; ಒಲಿದ ಮುಖ ಕಾಣುವುದು ಒಲಿದ ಮುಖವಾಗಿಯೇ – ಮುಖ ನನಗೆ, ಹೃದಯ ಅನ್ಯರಿಗಾಗಿ ಇದ್ದರೂ. ದ್ವೇಷ ನಿನ್ನೀ ಕಣ್ಣಿನಲಿ ಎಂದೂ ಬಾಳದಿದೆ, ಒಳಗೆ ಬದಲಾದರೂ ತಿಳಿಯದದು ಕ...

ಬಂದೆಯಾ, ಮೋಹವೆಲ್ಲವನುಳಿದು? ಇಲ್ಲದಿರೆ ನಿಲ್ಲು ಈ ಗೆರೆದಾಂಟಿ, ಬಾರದಿರು ಬಾರದಿರು! ಉತ್ತುಂಗ ಶಿಖರಕ್ಕೆ ಹುಲುಬಿಂಬಿ ನೆಗೆದಂತೆ ನಿನ್ನ ಗತಿಯಾದೀತು ಎಚ್ಚರಿಕೆ ಎಚ್ಚರಿಕೆ ಮದಮೋಹಗಳನೆಲ್ಲ ಹೆಣಮಾಡಿ ಸುಟ್ಟೊಗೆದು ರಸವರ್ಜ್ಯ ನೀನಾಗಿ, ಎದೆಯತಾಣವನೊ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...