ಬಂಜೆ
ಹೊಸಕವಿತೆ
ಬರೆಯ ಹೊರಟಾಗ
ನನಗರಿವಾಯಿತು
ನನ್ನೊಡಲು ಬರಿದಾಗಿದೆಯೆಂದು!
ಹಳೆಯ ಕವಿತೆಗಳೆಲ್ಲ
ಸತ್ತು ಹೋಗಿದ್ದವು
ಹೊಸ ಹುಟ್ಟಿಗೆ
ಜೀವ ಭಾವ ಕಾದುಕೊಂಡಿತ್ತು
ಆದರೆ ಹೊಸ ಕವಿತೆ ಹುಟ್ಟಲಿಲ್ಲ!
ಮನಸ್ಸು ಭಾವದ ಸಂಭೋಗವಾದರೂ
ಹೊಸಹುಟ್ಟು ಉದಯಿಸಲಿಲ್ಲ.
ಹೇಗೆ ಕಳೆಯಲಿ ಈ ಬಂಜೆತನ?
ಮನಸ್ಸು ಖಾಲಿಯಾದ
ಭಾವ ಬರಡಾದ ಈ ಜಡತನ?
ಹೊಸ ಕವಿತೆ ಹುಟ್ಟಬೇಕು
ಸತ್ತು ಹೋದ ಹಳೆಕವಿತೆಗಳಿಗೆ
ಮತ್ತೆ ಜೀವ ತುಂಬಬೇಕು.
ಯಾವ ಭಾವ ವೀರ್ಯ
ಕಳೆಯಬಹುದು ಮನದ
ಈ ಬಂಜರುತನ?
*****