ಪುಟಿದೇಳುವರಾಗದುಸಿರ ಭಾವದೆಳೆಯ ಮಧುರ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ ಹಸಿರಾಗಿಹ ನೆಲದನುಭಾವ ತುಂಬಿ ಕಂಪ ಬೀರುವ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ ಸದ್ ವಿಚಾರ ತಾಣದಗಲ ಮಾನಾಭಿಮಾನ ಮೆರೆದ ಭಾಷೆ ನಮ್ಮ ಭಾಷೆ ಕನ್ನಡ ಭಾಷೆ ಕಲೆಯದನುರಾಗಲತೆಯಲಿ ಅರಳಿ ...

ಬಾಳಿನ ದೇಗುಲದಲ್ಲಿ ದೇವರಿಲ್ಲವೇ ಹಾಗಿದ್ದರೆ ಆ ಮಂಟಪವೇಕೆ! ಬದುಕಿನ ದಾರಿಯಲಿ ಗುರಿಯಿಲ್ಲವೆ ಹಾಗಿದ್ದರೆ ಆ ಜೀವನ ವೇಕೆ ಆಸ್ತಿ ಅಂತಸ್ತುಗಳಿಗೆ ನೀನೆ ಹಕ್ಕುದಾರನೆ! ಇದು ನಿನ್ನಗೊಂದು ಭ್ರಮೆ ಹೌದು ಹೀಗೆಯೇ ಯುಗಯುಗದಲ್ಲೂ ಸ್ವಾರ್ಥ ನಿನ್ನ ದೇಹವೇ ...

೧ ಮೌನ ಮೌನಾ, ಮೌನಾ, ಮೌನಾ ಮೌನ-ವಿಮಾನಾರೂಢಾ ಅಮೃತಾತ್ಮಾ, ತರ! ಉತ್ತರ! ಭೋ ಉಧ್ವ್ರೋಧ್ವ್ರೋ, ಭೋ ಈ ಮಾಯಾಮಂಡಲ ಮುರಿಯೋ, ದಾಟೈ ಆ ತಿರ್ರನ ಚಕ್ರ ಏರೈ, ಏಕಾ, ಏಕೈಕಾ ಮರಣೋತ್ತೀರ್ಣಾ ಫೂಃ! ಪಿಸುಪಿಸು ಮಾತೋ ಮಾತು, ಇರುಳಿರುಳಿನ ಭುಂಭೋದ್ಗಾರಾ ಕರೆ,...

ಬೆಳಕನೆರಚು, ಚಳಕನೆರಳು, ಯುಗ-ಯುಗಾಂತ ತೊಳಗಲಿ! ಇಳೆಯ ಕವಿದ ಕಳ್ತಲೆಯನು ಕಳೆದೊಗೆ ದೀಪಾವಳಿ! ೧ ಬರಿಯ ಒಂದೆ ಇರುಳು ಬಂದೆ ಮುಗಿಯಿತೇನು ಕಾರ್‍ಯ? ವರುಷದಿ ನೂರಾರು ತಮಸಿ- ನಿರುಳಿವೆ ಅನಿವಾರ್ಯ! ಅಂದಂದಿನ ಕತ್ತಲಿಂದೆ ಮಂದಿಯ ಮನವಿಡಿದು ಮುಂದೆ ಕರೆ...

ಬಾ ಎನ್ನೆದೆಯ ಗುಡಿಯಲಿ ಬೆಳಗು ಗುರುವೆ ನೀ ಜ್ಯೋತಿಯಾಗಿ | ಆರದ ಜ್ಞಾನದ ದಿವ್ಯತೇಜವಾಗಿ|| ಕರುಣಿಸು ಸುಜ್ಞಾನವ ಹೊಡೆದೋಡಿಸು ಅಜ್ಞಾನವ| ಆನಂದವ ಕರುಣಿಸು ಅಂಧಕಾರದ ಕಣ್ಣೀರ ವರೆಸು| ಹರೆಸು ಮಗುವಂತೆನ್ನ ಕೈಹಿಡಿದು ನಡೆಸು|| ನನ್ನೆಲ್ಲಾ ತಮವ ನೀನಳ...

ಎತ್ತ ನೋಡುವಿರಿ ಇತ್ತ ಬನ್ನಿರಿ ಸೋಜಿಗ ತುಂಬಿದ ನೆಲದೆಡೆಗೆ ಬೆಳದಿಂಗಳ ಬೆವರು ಬಿಸಿಲಿನ ತಂಪು ಸಾವೇ ಹುಟ್ಟು ಹುಟ್ಟೇ ಸಾವು ಸೂಜಿ-ಗಲ್ಲಿನ ತಲೆಯೊಳಗೆ. ಗಿರಗಿರ ತಿರುಗುವ ಚಕ್ರದ ಮೇಲೆ ಮೂಡದು ಮಡಕೆ ಒಣಗಿದ ಮಾತನು ಹೆಣೆದೂ ಹೆಣೆದು ತಾಳದು ತಡಿಕೆ. ...

ನನ್ನ ಪುಟ್ಟ ಕೆಂಪು ಹೃದಯದೊಳಗೆ ಅದೆಷ್ಟು ನೋವಿನ ಲಂಗರುಗಳು ಈ ಪುಟ್ಟ ಕಪ್ಪು ಕಣ್ಣುಗಳೊಳಗೆ ಅದೆಷ್ಟು ನೀರ ಸಾಗರಗಳು. ನನ್ನ ಪುಟ್ಟ ಮನೆಯ ಅಂಗಳದೊಳಗೆ ಅದೆಷ್ಟೋ ಸೂರ್ಯನ ಬೆಳಕಿನ ಕಿರಣಗಳು, ನನ್ನ ಪುಟ್ಟ ಗುಡಿಸಲ ಚಿಮಣಿ ದೀಪದೊಳಗೆ ಅದೆಷ್ಟು ಬೆಳಕಿ...

ಕಡಲುಕ್ಕದಿರು ಬೆಂಕಿಯೆ ನೀ ಸೊಕ್ಕದಿರು ಗಿರಿಯೆ ನೀ ಜರಿಯದಿರು ನಮಗಿರುವುದಿದು ಒಂದೇ ಭೂಮಿ ಭುವನದ ಮಕುಟದಂಥ ಸುಂದರ ಭೂಮಿ ಜ್ವಾಲಾಮುಖಿಯೆ ನೀ ಉಗುಳದಿರು ಉಲ್ಕೆಯೆ ನೀ ಬೀಳದಿರು ಗಾಳಿಯೆ ನೀ ಮುಗಿಯದಿರು ಮಳೆಯೇ ನೀ ಮಾಯದಿರು ನಮಗಿರುವುದಿದು ಒಂದೇ ಭ...

ಮಾಗಿಽಯ ಹೊಡಿಯಾಗ ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ ನಾ ಹೋಗಿ ಒಂದ ತೆನಿಧಂಟ ತಿಂದರ ಕಲ್ಲಕಲ್ಲಿಲೆ ಹೊಡದ್ಯೊ| ನಮ ಜೀವ ಹೋದಾವೊ ಕೈಲಾಸಕ ||೧|| ನಾ ಒಂದೆ ಬಿತ್ತಿಽದಽ ನಾ ಒಂದ ಬೆಳದೀದ ನಾ ಹೋಗಿ ಒಂದ ಹೊಡೆಧಂಟ ತಿಂದರ ಬಡಬಡಗಿಲೆ ಹೊಡೆದ್ಯೊ | ನಮ ...

ಹೋದ ವರ್‍ಷ ಬಂದ ಹಬ್ಬ ಮರಳಿ ಬಂದಿದೆ ಅಂದು ನುಡಿದ ಶುಭ ಕಾಮನೆ ಜೆರಾಕ್ಸ್ ಕಂಡಿದೆ ನಾ ನುಡಿದೆ ಶುಭಾಶಯ ನೀ ನುಡಿದೆ ಶುಭಾಶಯ ಎಲ್ಲೆಲ್ಲೂ ಶುಭಾಶಯ ಇಲ್ಲ ಬರ ಇದಕೆ ಇಷ್ಟೆಲ್ಲಾ ಶುಭಾಶಯ ಪ್ರತಿ ವರ್ಷ ಪ್ರತಿ ಹಬ್ಬಕೂ ಆದರೂ ಹೆಚ್ಚುತ್ತಿದೆ ಯಾಕೆ ಇದಕೆ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...