ಬಾ ಎನ್ನೆದೆಯ ಗುಡಿಯಲಿ ಬೆಳಗು
ಗುರುವೆ ನೀ ಜ್ಯೋತಿಯಾಗಿ |
ಆರದ ಜ್ಞಾನದ ದಿವ್ಯತೇಜವಾಗಿ||

ಕರುಣಿಸು ಸುಜ್ಞಾನವ
ಹೊಡೆದೋಡಿಸು ಅಜ್ಞಾನವ|
ಆನಂದವ ಕರುಣಿಸು
ಅಂಧಕಾರದ ಕಣ್ಣೀರ ವರೆಸು|
ಹರೆಸು ಮಗುವಂತೆನ್ನ ಕೈಹಿಡಿದು ನಡೆಸು||

ನನ್ನೆಲ್ಲಾ ತಮವ ನೀನಳಿಸು
ನಿನ್ನ ಜ್ಯೋತಿಯಿಂದೆನ್ನ ಹೃದಯದಲಿ
ದೀಪವ ಅಂಟಿಸು|
ಅಗಾಧ ಅನುಭವದ ತೈಲವನು
ಉರ್‍ಜಿತ ಗೊಳಿಸು
ಅನಂತ ಅನವರತ ನೀ‌ಎನ್ನ
ಸಂಪ್ರೀತ ಗೊಳಿಸು||

ವಂದಿಪೆ ಗುರುವೆ ನಿನ್ನಡಿದಾವರೆಗೆ
ಸದಾ ನಡೆಸು, ನುಡಿಸು ಕಾಪಾಡು
ನಾ ಪರಿಪೂರ್ಣನಾಗುವವರೆಗೆ||
*****