ಎತ್ತಿನ ಹಾಡು

ಮಾಗಿಽಯ ಹೊಡಿಯಾಗ
ನನ ಕೈಲೆ ಮಾಯದಿಂದ ಮಾಡಿಸಿಕೊಂಡ್ಯಾ
ನಾ ಹೋಗಿ ಒಂದ
ತೆನಿಧಂಟ ತಿಂದರ
ಕಲ್ಲಕಲ್ಲಿಲೆ ಹೊಡದ್ಯೊ| ನಮ ಜೀವ ಹೋದಾವೊ
ಕೈಲಾಸಕ ||೧||

ನಾ ಒಂದೆ ಬಿತ್ತಿಽದಽ ನಾ ಒಂದ ಬೆಳದೀದ
ನಾ ಹೋಗಿ ಒಂದ
ಹೊಡೆಧಂಟ ತಿಂದರ
ಬಡಬಡಗಿಲೆ ಹೊಡೆದ್ಯೊ | ನಮ ಜೀವ ಹೋದಾವೊ
ಕೈಲಾಸಕ ||೨||

ಹೆತ್ತಿಕಾಳೆ ಕುಡು ಅಂದ್ರಽ
ನಿನ ಮಡದಿ ಅತ್ತ ಮಾರಿ ತಿರುವ್ಯಾಳ
ಹತ್ತಗೊಳಗ ತಿನ್ನಂದ್ರ
ಖಂಡಽಗ ತಿನ್ನುವ
ತುಂಡಿನಽ ತಂದ್ಹೊಡೊ | ಜೀವ ಹೋದಾವೊ
ಕೈಲಾಸಕ ||೩||

ಹಿಂಡಿಽಯ ಕುಡು ಅಂದಽ
ನಿನ ಮಡದಿ ಮೂಗನೆ ಮುರದಾಳ
ಖಂಡಽಗ ತಿನ್ನಂದ್ರ
ಇಖ್ಖಂಡ್ಗ ತಿನ್ನಂಥ
ತುಂಡಿನಽ ತಂದ್ಹೊಡೊ | ನಮ ಜೀವ ಹೋದಾವೊ
ಕೈಲಾಸಕ ||೪||

ಇಕ್ಕಿದರ ಹೆಂಡಿನಾದಿನಽ | ಹಚ್ಚಿದರ ಕುಳ್ಳ ನಾದಿನಽ
ದೇವಽರ ಮುಂದಿಽನ
ಪರಸಾದ ನಾ ಆದ
ಮತ್ತ್ಯಾತಕಾದೇನಽ | ನಮ ಜೀನ ಹೋದಾವ
ಕೈಲಾಸಕ ||೫||

ಸತ್ತರ ತೊಗಲಾದೆನಽ | ಮೆಟ್ಟಿದರ ಕೆರವಾದೆನಽ |
ಹೆಗಲ ಮ್ಯಾಲಾಡಂತ
ಬಾರಕೋಲ ನಾ ಆದ
ಮತ್ತ್ಯಾತಕಾದೇನ | ನಮ ಜೀವ ಹೋದಾವ
ಕೈಲಾಸಕ ||೬||
*****

ಎತ್ತಿನ ಕಡೆಯಿಂದ ಅಡವಿಯಲ್ಲಿ ಬೇಕುಬೇಕಾದಷ್ಟು ಕೆಲಸವನ್ನು ಮಾಡಿಸಿಕೊಂಡು ಅದರ ಸುಖದ ಕಡೆಗೆ ಮಾತ್ರ ಅಲಕ್ಷ್ಯವನ್ನು ಮಾಡಿದರೆ ಅದಕ್ಕೆ ಎಷ್ಟು ದುಃಖವಾಗಬೇಡ! ತಮ್ಮ ಕೆಲಸಗಳನ್ನು ಮಂದಿಯ ಕಡೆಯಿಂದ ಬೇಕಾದ ಹಾಗೆ ಮಾಡಿಸಿಕೊಂಡು, ಅವರ ಅನುವು-ಆಪತ್ತುಗಳ ಕಡೆಗೆ ನೋಡುವ ಪ್ರಸಂಗ ಬಂದಾಗ ಮೋರೆ ತಿರುವುವ ಸ್ವಭಾವವು ಬಹು ಜನರಲ್ಲಿರುತ್ತದೆ. ಅಂಥರಿಗೆ ಚುಚ್ಚುವಂತೆ ಈ ಹಾಡು ಇದೆ. ಇದಲ್ಲದೆ ಒಕ್ಕಲಿಗರ ಮನೆಯಲ್ಲಿ ದನ-ಕರುಗಳ ನೀರು-ಮೇವುಗಳ ಚಿಂತೆಯು ಮನೆಯ ಒಡತಿಗೆ ಇಲ್ಲದೆ ಹೋಗಬಾರದೆಂಬುದಕ್ಕೂ ಈ ಹಾಡು ಉಸಯುಕ್ತವಾಗಿದೆಯೆಂದು ತೋರುತ್ತದೆ.

ಛಂದಸ್ಸು:- ತ್ರಿಪದಿಯ ಜಾತಿಗೆ ಸೇರಿದ್ದು.

ಶಬ್ದ ಪ್ರಯೋಗಗಳು:— ಮಾಗಿ=ಮಾಗಿಯ ಕಾಲದ ಎಂದರೆ ಮಾಘ ಮಾಸದ ನೇಗಿಲು ಗೆಲಸ. ಮಾಯದಿಂದ=ಪ್ರೀತಿಯಿಂದ. ಧಂಟಿ=ದಂಟು. ತುಂಡೀನ=ಸೊಕ್ಕಿದವಳನ್ನು. ಹೆಂಡಿ=ಸೆಗಣಿ. ಕುಳ್ಳ=ಬರಣಿ. ಪರಸಾದ=ಧೂಪದ ಬೂದಿ (ಪ್ರಸಾದ). ಬಾರಕೋಲ=ಚಬಕ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋದ ವರ್‍ಷ ಬಂದ ಹಬ್ಬ
Next post ಇನ್ನು ರೋಬೊಟ್‌ಗಳ ಕೆಲಸ

ಸಣ್ಣ ಕತೆ

 • ನಿರಾಳ

  ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಅಮ್ಮ

  ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ಗ್ರಹಕಥಾ

  [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…