Home / ಲೇಖನ / ವಿಜ್ಞಾನ / ಇನ್ನು ರೋಬೊಟ್‌ಗಳ ಕೆಲಸ

ಇನ್ನು ರೋಬೊಟ್‌ಗಳ ಕೆಲಸ

“ಇನ್ನು ಮುಂದೆ ರೋಬೊಟ್‌ಗಳು ಬೇಕಾಗಿವೆ!” ಎಂಬ ಜಾಹೀರಾತು ನೀಡುವ ಕಾಲವಿನ್ನು ದೂರವಿಲ್ಲ!

ಒಂದು ರೋಬೊಟ್- ಸರಾಸರಿ ೬ ರಿಂದ ೮ ಕಾರ್‍ಮಿಕರ ಕೆಲಸ ಕಾರ್‍ಯಗಳನ್ನು ಸುಗಮವಾಗಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆಂದು ಚೀನಾದೇಶದ ಬೀಜಿಂಗ್‌ನಲ್ಲಿ ಸಾಬೀತು ಪಡಿಸಿರುವುದು.

ಈಗಾಗಲೇ ಚೀನಾದ ಡಂಗೌನ್ ನಗರದ ಮೊಬೈಲ್ ಫೋನ್ ಉತ್ಪಾದನಾ ಘಟಕವು ಸಂಪೂರ್ಣವಾಗಿ ಮಾನವ ರಹಿತವಾಗಿದ್ದು ಅಲ್ಲಿನ ಎಲ್ಲಾ ಕೆಲಸ ಕಾರ್‍ಯಗಳನ್ನೂ ಅಲ್ಲಿನ ಕಂಪ್ಯೂಟರ್ ನಿಯಂತ್ರಿತ ರೋಬೊಟ್‌ಗಳು ಈಗಾಗಲೇ ಪರಿಪೂರ್ಣವಾಗಿ ಕೆಲಸ ನಿರ್ವಹಿಸಿ ವಿಶ್ವವ್ಯಾಪ್ತಿ ಶಹಭಾಸ್‌ಗಿರಿ ಪಡೆದಿವೆ…!

ಈಗೀಗ ಅಲ್ಲಲ್ಲಿ… ಚೀನಾದಲ್ಲಿ “ರೋಬೊಟ್‌ಗಳು ಬೇಕಾಗಿವೆ…” ಎಂಬ ನಾಮಫಲಕಗಳೂ ಜಾಹೀರಾತುಗಳು ರಾರಾಜಿಸುತ್ತಿವೆ!!

ಚೀನಾ ದೇಶದಲ್ಲಿ ಈಗಾಗಲೇ ಕಟ್ಟುನಿಟ್ಟಿನ ಜನಸಂಖ್ಯೆ ನಿಯಂತ್ರಣಾ ಭಾರೀ ಭಾರೀ ಕ್ರಮದಿಂದಾಗಿ ಅಲ್ಲಿನ ಜನಸಂಖ್ಯೆ ಗಣನೀಯವಾಗಿ ಇಳಿಮುಖ ಕಂಡಿದೆ. ಹೀಗಾಗಿ ಎಲ್ಲೆಲ್ಲೂ ಕಾರ್ಮಿಕರ ಬೃಹತ್ ಸಮಸ್ಯೆ ತಲೆದೋರಿದೆ. ಇದರಿಂದಾಗಿ – ಇನ್ನು ಮುಂದೆ ರೋಬೊಟ್‌ಗಳನ್ನೇ ಹೆಚ್ಚೆಚ್ಚು ಅಭಿವೃದ್ಧಿ ಪಡಿಸಬೇಕಾದ ತುರ್‍ತು ಅಲ್ಲಿ ತಲೆದೋರಿದೆ.

ಇಲ್ಲಿನ ಡಂಗೌನ್ ನಗರದ ಮೊಬೈಲ್ ಫೋನ್ ಉತ್ಪಾದನಾ ಘಟಕದಲ್ಲಿ ಎಲ್ಲ ಕೆಲಸಗಳನ್ನು ಕಂಪ್ಯೂಟರ್ ನಿಯಂತ್ರಿತ ರೋಬೊಟ್‌ಗಳು ಮಾಡಿ ಪೂರೈಸುತ್ತಿವೆ. ಚೀನಾದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಜನರಿಲ್ಲದ ಮೊದಲ ಕಾರ್ಖಾನೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕಂಪೆನಿಯ ಎಲ್ಲ ಸರಕು ಸಾಗಣೆ ಟ್ರಕ್‌ಗಳು ರೋಬೊಟ್‌ಗಳ ಮೂಲಕ ಗೋದಾಮುಗಳಿಗೆ ಸರಕುಗಳನ್ನು ಸಾಗಿಸುತ್ತವೆ. ತಾಂತ್ರಿಕ ಸಿಬ್ಬಂದಿ ನಿಯಂತ್ರಣ ಕಚೇರಿಯಲ್ಲಿ ಕಂಪ್ಯೂಟರ್‌ನಲ್ಲಿ ಕೆಲಸ ಕಾರ್ಯಗಳನ್ನು ನೋಡುತ್ತಾರೆ. ಉಳಿದಂತೆಲ್ಲವನ್ನೂ ಸಂಪೂರ್ಣವಾಗಿ ಈ ಎಲ್ಲ ರೊಬೋಟ್‌ಗಳೇ ಮಾಡುತ್ತವೆ.

ಇಲ್ಲಿ ಸುಮಾರು ೬೫೦ ಜನ ಕಾರ್‍ಮಿಕರು ಕೆಲಸ ನಿರ್ವಹಿಸಬೇಕು. ಆದರೆ ೬೦ ಕಾರ್ಮಿಕರು ಮಾತ್ರ ಕೆಲಸ ಮಾಡುತ್ತಿದ್ದಾರೆ! ಇದನ್ನು ೨೦ ಕ್ಕೆ ಇಳಿಸುವ ಚಿಂತನೆ ನಡೆಸುತ್ತಿದ್ದು ಇನ್ನು ೫ ರೋಬೊಟ್‌ಗಳನ್ನು ಹೆಚ್ಚಿಸಲು ಕ್ರಮ ಕೈಗೊಂಡಿರುವರು.

ಬೇರೆ ಬೇರೆ ರಾಷ್ಟ್ರದವರೆಲ್ಲ ಬಂದು ಒಂದು ಕಾರ್ಮಿಕರಿಲ್ಲದ ಕಂಪೆನಿಯನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಇಂಥಾದೊಂದು ಜನರಿಲ್ಲದ ಕಾರ್ಖಾನೆ ಆರಂಭಿಸುವ ಚಿಂತನೆ ನಡೆಸಿರುವರು.

ಬರುಬರುತ್ತಾ ಜನರಿಲ್ಲದ ಕಾರ್ಖಾನೆಗಳನ್ನು ಎಲ್ಲ ದೇಶ ವಿದೇಶಗಳಲ್ಲಿ ಆರಂಭಿಸಿದರೆ ಮುಂದಿನ ಜನಾಂಗದ ಗತಿ ಹೇಗೆಂದು ಈಗಾಗಲೇ ಚಿಂತೆಯಾಗಿದೆ…
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...