ಇಳೆಯನೆಲ್ಲ ತುಂಬಿನಿಂತು ನಾಟ್ಯವಾಡುತಿರುವ ರೂಹೆ ! ಅಲ್ಲಿ-ಇಲ್ಲಿ ಎಲ್ಲೆಡೆಯಲಿ ಇದ್ದ ನಿನ್ನ ನಿಲುಕದೂಹೆ ! ಮನವ ಸೆಳೆದುಕೊಳ್ಳುವ ಶಕ್ತಿ ! ನಿನ್ನ ಮಿರುಗಮಿಂಚಿದೇನು ? ಬಣ್ಣ ಬಣ್ಣಗಳನ್ನು ತೋರ್‍ವ ನಿನ್ನ ಸಹಜ ಸೃಷ್ಟಿಯೇನು ? ಬಂದ ಮಾವಿನಡಿಗೆ ನಿ...

ಬಾ, ಶ್ರಾವಣ ಶುಭಸಮೀರ ಬಾರಾ! ಬಾರೈ ಶ್ರಾವಣ ಸಮೀರ, ಕಾಲನೊಲುಮೆಯೋಲೆಕಾರ, ಸುಖನಾಟಕ ಸೂತ್ರಧಾರ, ಬುವಿಯ ಬೇಟಗಾರಾ! ಬಾ, ಶ್ರಾವಣ ಶುಭಸಮೀರ ಬಾರಾ! ೧ ಪಡುಗಡಲಿಗೆ ತೆರೆಯು ಹೇರಿ, ಜಡಿಯು ಮುಗಿಲ ಕೆಳೆಯ ಸೇರಿ, ನಿಡುಮಲೆಗಳ ತಲೆಯನೇರಿ, ಕಣಿವಯಿಳಿದು ಬ...

ಬ್ರಮ್ಮ! ನಿಂಗೆ ಜೋಡಿಸ್ತೀನಿ ಯೆಂಡ ಮುಟ್ಟಿದ್ ಕೈನ! ಬೂಮೀ ಉದ್ಕು ಬೊಗ್ಗಿಸ್ತೀನಿ ಯೆಂಡ ತುಂಬ್ಕೊಂಡ್ ಮೈನ! ೧ ಬುರ್ ಬುರ್ ನೊರೆ ಬಸಿಯೋವಂತ ಒಳ್ಳೆ ವುಳಿ ಯೆಂಡ ಕೊಡ್ತೀನ್ ನನ್ದು ಪ್ರಾರ್‍ತ್ನೆ ಕೇಳು ಸರಸೋತಮ್ಮನ್ ಗಂಡ! ೨ ಸರಸೋತಮ್ಮ ಮನಸ್ಕೊಂಡೌಳ...

ಒಡಲು-ಒಡೆಯನು ತೀರಿಕೊಳಲು ಹುಟ್ಟಿದ ಮನೆಗೆ ಬಂದ ಹೆಣ್ಣಿನ ಹಾಗೆ. ಅವಳಣ್ಣ ತಮ್ಮದಿರು ತಮ್ಮದೆನುವೊಲು ಅವಳ ಆಸ್ತಿಪಾಸ್ತಿಯ ಬಳಿಸಿ ಬಿಂಕದೋರುವರು; ಅವಳೋ ಇವರ ಒಗೆತನವ ಕಿಳ್ಳಿಕೇತನು ಗೊಂಬೆ ಕುಣಿಸುವೊಲು ಕುಣಿಸುವಳು. ಸರಸದುರವಣಿಗೆ ಮೆರವಣಿಗೆ. ಕಣ್...

ಏನೆಂಥ ದುರ್ಗತಿಯು ಬಂದೊದಗಿತಲಾ ಹೀನವೆನುತಾ ಮಧು ಫಲಕ ಬದಲಾಗಿ ತೃಣ ಧಾನ್ಯವನೆ ಸಿರಿಧ್ಯಾನವೆನುತಾರೋಗ್ಯವನು ಕನವರಿಸುತಲದದೇ ದಿನಪನುರಿಯನೇರಿಸುವ ದಿನಚರಿಯ ಮೋಹ ಮದ್ಯದೊಳಿರಲು – ವಿಜ್ಞಾನೇಶ್ವರಾ *****...

ಆಕಳು ಕಂಡೀರೇನೊಂದ || ಗೊಲ್ಲರ ಆಕಳ ಕಂಡಿರೇನು? ಆಕಳ ಪೀಕಳ ಕಾಣಲಿಲ್ಲಾ || ೧ || ಆಕಳ ಮಾರಿ ನೋ ಡಲಿಲ್ಲಾ ಮೊಳ ಮೊಳ ಉದ್ದನ ಕೋಡವಿತ್ತು || ೨ || ಆಕಳ ಮೊಳ ಉದ್ದನ ಬಾಲವಿತ್ತು ಅಡವಿ ಹುಲ್ಲಾಮೇಯೂತ್ತಿತ್ತೂ || ೩ || ಮಡುದಿ ನೀರು ಕುಡಿಯೂತಿತ್ತು ಸ...

ಈ ಸಮಯಕ್ಕೆ, ಮುಂದೆ ಕೋಸೆಟ್ಟಳ ಜೀವಮಾನದಲ್ಲಿ ವಿಶೇಷ ವಾಗಿ ಸಂಬಂಧಿಸುವ ಬಾಲಕನೊಬ್ಬನು ಪ್ಯಾರಿಸ್ ನಗರದಲ್ಲಿ ಬೆಳೆಯುತ್ತಿದ್ದನು. ಇವನ ಹೆಸರು ಮೋರಿಯಸ್ ಪಾಂಟ್ ಮರ್ಸಿ ಎಂದು. ಇವನು ಎಂ. ಜಿಲ್ಲೆ ನಾರ್ಮಂಡ್ ಎಂಬ ವೃದ್ಧನ ದೌಹಿತ್ರನು. ಈ ಹುಡುಗನ ತಾ...

ದೇವಾ ಎನ್ನ ಮನಕ್ಕೆ ರಕ್ಷಿಸು ಕಾಮಕ್ರೋಧ ಮತ್ಸರಗಳಿಂದ ದೇವಾ ಎನ್ನ ಮನಕ್ಕೆ ಶಿಕ್ಷಿಸು ಪುನಃ ಪುನಃ ಮಾಡುವ ತಪ್ಪುಗಳಿಂದ ಮನದಲಿ ಮೋಹ ಬಾರದಿರಲಿ ನಿತ್ಯ ಪ್ರಪಾತಕ್ಕೆ ತಳ್ಳುವುದು ಮನದಲಿ ಸ್ವಾರ್‍ಥ ಇಣಕದಿರಲಿ ನಿತ್ಯವೂ ರಕ್ಕಸದಿ ವರ್‍ತಿಸುವುದು ಕೆಟ...

ಅಲ್ಲಿ ಮರದಡಿಯಲ್ಲಿ ನಲ್ಗಬ್ಬಮೊಂದಿರಲು, ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು, ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ! ಕಾಡಾದೊಡೇನದುವೆ ಸಗ್ಗ ಸುಖವೆನಗೆ. *****...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...