ಕೌರವನೆದೆಯಲಿ ಕಮಲವು ಅರಳಲಿ ರಾವಣನಾಗಲಿ ಗಿಳಿಹಕ್ಕಿ ಭುವನದ ಮನುಜರು ಜೇಂಗೊಡವಾಗಲಿ ಮೂಡಲಿ ಮಿನುಗಿನ ಹೊಸ ಚುಕ್ಕಿ ಮಂದರ ಗಿರಿಯಲ್ಲಿ ಮಧುಮಯ ಸಿರಿಯಲಿ ವಧುವಾಗಿರುವಳು ಋಷಿಕನ್ಯೆ ನವೋದ್ಯಾನದ ತೂಗುಯ್ಯಾಲೆಗೆ ಬಾಗುತ ಬಂದಳು ರಸಕನ್ಯೆ ಪಡೆಯುವದೇನಿದೆ...

ಸಂಜೇಲ್ ಓ ಲಸ್ಮಣಾಂತ್ ಏಳಿ ಅಟ್ಟೀಗ್ ಬಂದ್ರೆ ಬೇಗ ದಾರೀನ್ ನೋಡ್ತ ನಿಂತ್ಕೊಂಡೌಳೆ ನಂಜಿ ಬಾಗಿಲ್ನಾಗ! ೧ ಜೀತಕ್ ಜೀವ ಬಲಿ ಕೊಟ್ಮೇಲೆ ನಂಜೀನೆ ಒಸ್ ಪ್ರಾಣ! ನಂಜೀನ್ ಏನ್ರ ನೆನಿದೆ ಓದ್ರೆ ಉಡಗೋಗ್ತೈತೆ ತ್ರಾಣ! ೨ ಜೀವಾನ್ ಬೆಳಸೋಕ್ ತಾಕತ್ ಅಂದ್ರೆ ...

ತಂತಾನೆ ತಣಿವಿನಲ್ಲಿದ್ದ ತಲ್ಲೀನತೆಯು ನಿದ್ದೆ ತಿಳಿದೆದ್ದಾಗ ಎನಿತೆನಿತು ಶಾಂತಿ! ಬಾಯಿಲ್ಲದನುಭವದ ನೆನವೆ ನನೆಕೊನೆಹೋಗಿ ಕನಸೇ ನನಸಾಗಿರಲದೆಂಥ ನವ ಕಾಂತಿ! ಆಟವೇ ಹಿಗ್ಗು? ಒಡನಾಟವೇ ಹಿರಿ ಹಿಗ್ಗು ನೋಟದ ವಿಲಾಸವೇ ಗುಡಿಕಟ್ಟಿದಂತಿದೆ. ಒಂದು ಹಿಗ್...

ಸಂತಸವೆಂದೊಡದು ಕುಂತತಿ ತಿನ್ನುವುದಲ್ಲ ಅಂತೆ ತಿನದಿರ್‍ಪವರ ಕಂಡು ಸುಖಿಸಲಳವಿಲ್ಲ ಸ್ವಂತ ದುಡಿಮೆಯು ಸಾಯುತಿರಲೆಂತು ನೋಡಿದೊಡಂ ಕಂತುತಿದೆ ನಿಶ್ಚಿತದಿ ಅನ್ನ ಮೂಲದ ಬಲವು ಚಿಂತನದ ಕೃಷಿ ದಾರಾವೃತವನಿವಾರ್‍ಯವೀ ಜಗಕೆ – ವಿಜ್ಞಾನೇಶ್ವರಾ ***...

ಕಂದ ನಂದನೋ ತಾನೆ ನಂದನಂದನಾ ತಂದನ್ನೆ ತಾನೋ ತಾನಾನಾ || ಪಲ್ಲವಿ || ಜಾಗಡಿ (ಶೀತೆಗೆ ಎಂದು) ಶೀತೆಗೋ ಶಿರರಾಮಾಗೋ ಮಕ್ಕಳಿಲ್ಲಾ ಮಾದೇವಾ ಹುಟ್ಟಾದೆರಡು ಚಿಕ್ಕಮಕ್ಕಳು ತಾನೋ ತಂದನಾನಾ ತಂದನೆನಾನೊ ತಾನಾನಂದೆ ತಾನತಾನ ತಂದನೆನಾನೊ ತಾನಾನಂದೆ ತನನಾನಾ...

ಕೇಶವ ಕೇಶವ ಮಾಧವಾ ನೀನು ನನ್ನ ಮೊರೆಯ ನೀ ಕೇಳಲಾರೆಯಾ ಏಳುತ್ತ ಬೀಳುತ್ತ ಸಾಗಿರವನನಗೆ ಬಂದರೆಡು ಮಾತು ಹೇಳಲಾರೆಯಾ ಭವಸಾಗರದಲಿ ನಿನ್ನ ನನ್ನ ಬೀಳಿಸಿದೆ ನನಗೊಂದು ನೀಡಿ ರಂಧ್ರದ ದೋಣಿ ತೇಲುತ್ತಿದೆ ಮುಳುಗತ್ತಿದೆ ನಿತ್ಯ ನೋಡು ಕಾಪಾಡದೆ ನೀನಿದ್ದರೆ...

ಸಖನೆ, ನೀಂ ಬಹುದಿನದ ಪಿಂತೆನ್ನ ಮನೆಯೊಳಗೆ ಪೊಸ ಮದುವೆಯೌತಣಕೆ ಬಂದಿರ್‍ದೆಯಲ್ತೆ? ಒಣ ಬಂಜೆ ತರ್‍ಕ ವನಿತೆಯನಂದು ನಾಂ ತೊರೆದು ದ್ರಾಕ್ಷಿಯೆಂಬಳ ಸುತೆಯ ಮೆದುಗೈಯ ಪಿಡಿದೆಂ. *****...

ಬೆಟ್ಟಪ್ಪ ಎದ್ದಾನ ಘಟ್ಟದ ಮ್ಯಾಲೆ ಕಣ್ಣ ಮಿಟುಕಿಸಿ ಕಂಬಳಿ ಸರಿಸಿ ಮೂಡಲ ಮನೆಯೊಳಗೆ ಸೂರಪ್ಪ ಆಗಲೆ ಎದ್ದೆದ್ದು ಬೆಳಕ ಕಳಿಸ್ಯವನೆ ಇನ್ನೀಗ ನಿದ್ದಿಲ್ಲ ಇನ್ನೀಗ ಕನಸಿಲ್ಲ ಬೆಟ್ಟಪ್ಪ ತಲೆಯೆತ್ತಿ ಕುಂತವನೆ ಮೋಡದ ಮರಿಗಳ ತಲೆ ತಡವಿ ಹೇಳ್ಯವನೆ ಕುರಿಗಳ...

ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು ಅದಕೊ ಅದರಿಚ್ಛೆ ಹಾದಿ ಇದಕು ಹರಿದತ್ತ ಬೀದಿ. ನೆಲನೆಲದಿ ಮನೆಯ ಮನೆಯ ಮೇಲೆ ಕೊಳ ಬಾವಿ ಕಂಡು ಕಾಣದೋಲೆ ಗಿಡ ಗುಲ್ಮ ತೆವರು ತಿಟ್ಟು ಎನ್ನದಿದಕೊಂದೆ ನಿಟ್ಟು. ಗಾಳಿ ಬೆರಗಿದರ ನೆಲದೊಳೋಟ! ವೇ...

ಇದೆಂತಹ ಗಡಿಗಳು ಎಂತಹ ವಿಭಾಜಕ ರೇಖೆಗಳು ಕಾವೇರಿಯ ತಟದಲಿ ಕುಂಟಾಬಿಲ್ಲೆ ಆಡುತ್ತಾ ಎಲ್ಲರೊಂದಿಗೆ ಕೂಡಿ ಬೆಳೆದವಳು ನಾನು ಇಲ್ಲಿ ಮುಹಾಜಿರಳಾಗಿರುವೆ. ಅಲ್ಲಿ ಮಾಮರಗಳ ಹತ್ತಿ ಮರಕೋತಿ ಆಡಿದ್ದವಳು ಆ ನದಿ, ಬೆಟ್ಟ, ಗಿಳಿ, ಕೋಗಿಲೆ ಹಿಂಡು ಹಿಂಡು ಗೆಳ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...