ಕೌರವನೆದೆಯಲಿ ಕಮಲವು ಅರಳಲಿ
ರಾವಣನಾಗಲಿ ಗಿಳಿಹಕ್ಕಿ
ಭುವನದ ಮನುಜರು ಜೇಂಗೊಡವಾಗಲಿ
ಮೂಡಲಿ ಮಿನುಗಿನ ಹೊಸ ಚುಕ್ಕಿ

ಮಂದರ ಗಿರಿಯಲ್ಲಿ ಮಧುಮಯ ಸಿರಿಯಲಿ
ವಧುವಾಗಿರುವಳು ಋಷಿಕನ್ಯೆ
ನವೋದ್ಯಾನದ ತೂಗುಯ್ಯಾಲೆಗೆ
ಬಾಗುತ ಬಂದಳು ರಸಕನ್ಯೆ

ಪಡೆಯುವದೇನಿದೆ ಎಲ್ಲಾ ಪಡೆದೆನು
ಸಾಧನೆ ಸಿದ್ದಿಯ ಶ್ರೀಕಾರಾ
ಜೇನಿನ ಮಧುರಾ ಹೂವಿನ ಹಗುರಾ
ಖುಶಿಗುಣ ಋಷಿಮನ ಝೇಂಕಾರಾ

ಪ್ರೀತಿಯು ಸತ್ಯಾ ನೀತಿಯು ನಿತ್ಯಾ
ಚಿಮ್ಮಿದೆ ಬೆಳಗಿನ ಚಿತ್ಸೂರ್‍ಯಾ
ಅಂತರ್‍ಮನದಲ್ಲಿ ತೂರ್‍ಯಾರವದಲಿ
ಹಾಡಿದೆ ಕುಣಿಸಿದೆ ಆಂತರ್‍ಯಾ
*****