ಸಖನೆ, ನೀಂ ಬಹುದಿನದ ಪಿಂತೆನ್ನ ಮನೆಯೊಳಗೆ
ಪೊಸ ಮದುವೆಯೌತಣಕೆ ಬಂದಿರ್‍ದೆಯಲ್ತೆ?
ಒಣ ಬಂಜೆ ತರ್‍ಕ ವನಿತೆಯನಂದು ನಾಂ ತೊರೆದು
ದ್ರಾಕ್ಷಿಯೆಂಬಳ ಸುತೆಯ ಮೆದುಗೈಯ ಪಿಡಿದೆಂ.
*****