ಮನುಷ್ಯರು ಹುಟ್ಟುತ್ತಾರೆ, ಬೆಳೆಯುತ್ತಾರೆ, ವೃದ್ಧರಾಗುತ್ತಾರೆ. ಒಂದು ದಿನ ಸಾಯಲೂಬೇಕು. ಆದರೆ ವೃದ್ಧರಾಗಿ ಸಾಯುವತನಕದ ಕಾಲ ಅವರು ಅನೇಕ ರೋಗರುಜಿನುಗಳಿಗೆ ತುತ್ತಾಗಬಹುದು, ಏಕಾಕಿಯಾಗಬಹುದು. ಆಗ ನೋಡಿಕೊಳ್ಳುವುದಕ್ಕೆ ಮನೆ ಮಂದಿ ಬೇಕಾಗುತ್ತಾರೆ....

ನವಿಲು ನಮ್ಮ ರಾಷ್ಟ್ರಪಕ್ಷಿ. ನವಿಲು ತನ್ನ ಸೌಂದರ್‍ಯ, ಬಣ್ಣ ಹಾಗೂ ನಡೆಗಳಿಗೆ ಪ್ರಸಿದ್ಧಿಯಾಗಿದೆ. ಇದು ವಿಶ್ವದಲ್ಲೇ ಅತ್ಯಂತ ಸುಂದರವಾದ ಪಕ್ಷಿ. ಹೆಣ್ಣು ನವಿಲಿಗಿಂತ ಗಂಡು ನವಿಲು ಹೆಚ್ಚು ಸುಂದರ. ಹಾಲು ಬಣ್ಣದ ಹೊಳಪಿನ ಮುಖ, ನೀಲಿಬಣ್ಣದ ತಲೆ, ...

ಪ್ರಾಚೀನ ಕಾಲದ ಹಿಂದುಗಳು ಜಗತ್ತು ಹಾಗೂ ಅದರ ರಚನೆಯ ವಿಷಯದಲ್ಲಿ ಒಂದು ವಿಚಿತ್ರವಾದ ಕಲ್ಪನೆಯನ್ನು ಇಟ್ಟುಕೊಂಡಿದ್ದರು. ಹಾಗು ಆ ಕಲ್ಪನೆಯ ಆಶಯವು ವ್ಯವಸ್ಥೆಯನ್ನು ನಿರೂಪಿಸುವುದೇ ಆಗಿತ್ತು. ಮನುಷ್ಯನಿರುತ್ತಿದ್ದ ಭೂಖಂಡಕ್ಕೆ ಜಂಬುದ್ವೀಪವೆಂಬ ಹೆ...

೨೦೦೫ರ ಸೆಪ್ಟೆಂಬರ್ ೧೩ ಮಂಗಳವಾರ ನನಗೆ ಒಂದು ಮುಖ್ಯವಾದ ದಿನ. ಅಂದು ನಮ್ಮ ಪ್ರಿಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಎನ್. ಧರ್ಮಸಿಂಗ್ ಅವರು ಬಸವನಗುಡಿಯಲ್ಲಿ ನ್ಯಾಷನಲ್ ಕಾಲೇಜ್ ವೃತ್ತದಲ್ಲಿ ಮೇಲ್ದಾರಿಯನ್ನು ಉದ್ಘಾಟಿಸಿದರು. ನ್ಯಾಷನಲ್ ಕಾಲೇಜ್ ವೃ...

ಧರ್ಮ ಹಾಗೂ ದೇವರು ಹಿಂಸೆ ಮತ್ತು ಹಾದರದ ಸಂಕೇತ ಎಂದು ಸಾಧಿಸುವಲ್ಲಿ ನಾವು ಭಾರತೀಯರು ಸಂಪೂರ್ಣ ಯಶಸ್ವಿಯಾಗಿದ್ದೇವೆ ಎಂಬುದಕ್ಕೆ ಇತ್ತೀಚಿನ ಅಯೋಧ್ಯೆಯ ಘಟನೆ ಹಾಗೂ ಇಂದಿಗೂ ನಾಗರಿಕ ಜಗತ್ತು ತಲೆ ತಗ್ಗಿಸುವಂತೆ ಉಳಿದುಕೊಂಡು ಬಂದಿರುವ ದೇವದಾಸಿ ಪದ...

೧ ಅಧ್ಯಾಯ ಒಂದು ಬುದ್ಧಿಜೀವಿಗಳ ಮೊದಲಪ್ರಯೋಗ ‘ಸ್ಥಿರ’ ಚಿತ್ರವು ‘ಚಾಲನೆ’ಯನ್ನು ಪಡೆದುಕೊಂಡು ೨೦೦೮ಕ್ಕೆ ನೂರ ಹದಿಮೂರು ವರ್‍ಷಗಳಾದುವು. ವೈಜ್ಞಾನಿಕ ಆಟಿಕೆಯಾಗಿ ಅರಳಿದ ‘ಚಲನಚಿತ್ರ’ ಕ್ರಮೇಣ ‘ಸಿನಿಮಾ’ ರೂಪವನ್ನು ತಾಳಿ ಜನಪ್ರಿಯ ಮನರಂಜನಾ ಮಾಧ್...

ಭಾಷಾ ಸಮಿತಿಯ ವರದಿ (ಡಾ| ಗೋಕಾಕ್ ಸಮಿತಿ ವರದಿ) ಸನ್ಮಾನ್ಯ ಶಿಕ್ಷಣ ಸಚಿವರಿಗೆ, ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ ಉಂಟಾದ ವಿವಾದವನ್ನು ತಜ್ಞರ ಸಮಿತಿಗೆ ವಹಿಸಲು...

ಮೆಜೆಸ್ಟಿಕ್! ದಿಕ್ಕು ದಿಕ್ಕುಗಳಿಂದ ನೂರು ಕೆಲಸ ನೂರು ಕನಸು ಹೊತ್ತು ರಾಜಧಾನಿಗೆ ಬಂದವರು, ಮಹಾನಗರದ ಯಾವುದೋ ಮೂಲೆಯ ಸೇರಿಕೊಳ್ಳುವ ಧಾವಂತದವರು, ಗಾಜಿನ ಕೋಣೆಯೊಳಗೆ ನಿಂತ ಮಾಸದ ನಗೆಯ ಹುಡುಗಿ- ಕಾಂಕ್ರೀಟು ರಸ್ತೆಯ ಮೇಲೆ ಸರ್ರನೆ ಸರಿದಾಡುವ ಸಾವ...

ನಮ್ಮ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಬುದ್ಧ ರಾಜಕೀಯ ನಾಯಕತ್ವ ಬೇಕೆಂದು ಬಯಸುತ್ತೇವೆ. ಸಂಸ್ಕೃತಿಯ ಚಲನಶೀಲತೆಗಾಗಿ ಮುನ್ನೋಟದ ಸಾಂಸ್ಕೃತಿಕ ನಾಯಕತ್ವವನ್ನು ನಿರೀಕ್ಷಿಸುತ್ತೇವೆ. ದ್ವೇಷರಹಿತ ಸಮಾಜಕ್ಕಾಗಿ ಮಾನವೀಯ ಧಾರ್ಮಿಕ ನಾಯಕತ್ವವಿರಲಿ ಎಂದ...

೧.೨ ಹಣದ ಹುಟ್ಟು ಮತ್ತು ಬೆಳವಣಿಗೆ ವಿನಿಮಯ ಕ್ರಿಯೆ ಸರಿಯಾಗಬೇಕಾದರೆ ಮೌಲ್ಯವನ್ನು ಮಾಪನ ಮಾಡುವ ಸಾಮಾನ್ಯ ವಾದ ಮಾಪಕವೊಂದು (ಅಳತೆಗೋಲು) ಬೇಕೇ ಬೇಕು. ವಸ್ತು ವಿನಿಮಯ ವ್ಯವಸ್ಥೆಯ ಸೋಲಿಗೆ ಬಹುಮುಖ್ಯವಾದ ಕಾರಣ ಸಾಮಾನ್ಯ ಮೌಲ್ಯಮಾಪನ ಸಾಧನವೊಂದರ ಕ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...