ದೂರದರ್ಶಿತ್ವ

ಆ ಹಿಂದು ಯುವಕನು ಬಾಣಬಿಟ್ಟ ಗುರಿಯನ್ನು ಛೇಧಿಸುತ್ತಲೇ ಒಂದು ನುಡಿಯು ಹೊರಬಿತ್ತು – “ಭಲೆ!  ಒಳಿತಾಗಿ!! ”

ಯಾರೋ ನುಡಿದರು – “ಅಹುದು ಆದರೆ ಇನ್ನೂ ಹಗಲಿನ ಬೆಳಕಿದೆ ಆ ಧನುರ್ಧಾರಿಯು ಗುರಿಯನ್ನು ಚೆನ್ನಾಗಿ ಇಡಬಲ್ಲನು ಆದರೆ ದಶರಥನಷ್ಟು ಇವನು ಜಾಣನಲ್ಲ”

“ಆದರೆ ದಶರಥನು ಇನ್ನು ಏನು ಮಾಡಬಲ್ಲನು”

“ಅವನು ಶಬ್ದವೇಧಿಯಾಗಿದ್ದಾನೆ”

“ಅಂದರೆ”

“ಅವನು ಶಬ್ದದ ಆಧಾರದಿಂದ ಗುರಿ ಹೊಡೆಯುತ್ತಾನೆ”

“ನೀವನ್ನುವುದರ ಅಭಿಪ್ರಾಯವೇನು?”

“ಅವನು ಕತ್ತಲೆಯಲ್ಲಿ ಬಾಣವನ್ನು ನಡೆಸಬಲ್ಲನು. ಇರುಳು ಅಡವಿಯಲ್ಲಿ ಹೋಗಿ ಅವನು ಸಪ್ಪಳವನ್ನು ಆಲಿಸುತ್ತಾನೆ ಪಶುಗಳ ಹೆಜ್ಜೆ ಇಲ್ಲವೆ ಪಕ್ಷಿಗಳ ಉಲುಹಿನಿಂದ ಅವನು ಯಾವ ಬೇಟೆಯನ್ನು ಹೊಡೆಯುವದಿದೆಯೆಂಬುದನ್ನು ಗುರುತಿಸಿ ಅವನು ಬಾಣವನ್ನು ಬಿಡುತ್ತಾನೆ ಅವನು ನೇರವಾಗಿ ಗುರಿಯನ್ನು ವೇಧಿಸಿಬಿಡುತ್ತಾನೆ. ಸ್ಪಷ್ಟ ಪ್ರಕಾಶದಲ್ಲಿ ಗುರಿಯನ್ನು ಸಾಧಿಸುತ್ತಾನೆ.”

ಈ ಪ್ರಕಾರ ಅಯೋಧ್ಯೆಯ ರಾಜಕುಮಾರನಾದ ದಶರಥನ ಕೀರ್ತಿಯು ನಾಲ್ಕೂ ನಿಟ್ಟಿನಲ್ಲಿ ಹಬ್ಬಿಬಿಟ್ಟಿತ್ತು.

ತನ್ನ ಈ ಶಬ್ದವೇಧಿಯ ಚಾತುರ್ಯದ ಬಗ್ಗೆ ಅವನಿಗೆ ಹೆಮ್ಮೆಯಿತ್ತು. ಜನರ ಬಾಯಿಂದ ತನ್ನ ಪ್ರಶಂಸೆಯನ್ನು ಕೇಳಿ ಅವನು ಸಂತುಷ್ಟನಾಗಿ ಬಿಡುತ್ತಿದ್ದನು. ಸಂಜೆಯಾಗುತ್ತಲೆ ಅವನು ಒಬ್ಬನೇ ತನ್ನ ರಥದಲ್ಲಿ ಕುಳಿತು ಕೊಂಡು ಬೇಟೆಯನ್ನರಸುತ್ತ ನಿಬಿಡವಾದ ಅರಣ್ಯದ ಕಡೆಗೆ ಹೋಗುತ್ತಿದ್ದನು. ಒಮ್ಮೊಮ್ಮೆ ಅವನಿಗೆ ಕಾಡೆಮ್ಮೆಗಳು ಇಲ್ಲವೆ ನದಿಯ ದಂಡೆಯಲ್ಲಿ ನೀರು ಕುಡಿಯುಲು ಬರುವಾ ಆನೆಯ ಹೆಜ್ಜೆಗಳ ಸಪ್ಪಳವು ಕೇಳಿಸುವದು. ಆದರೆ ಒಮ್ಮೊಮ್ಮೆ ಚಿಗರಿಯ ಸುಳುಹು ಇಲ್ಲವೆ ಕರಡಿಗಳ ಸತರ್ಕ ಪದ ಧ್ವನಿಯು ಕೇಳಿಬರುತ್ತಿತ್ತು.

ಒಂದು ದಿನ ರಾತ್ರಿಯಲ್ಲಿ ಅವನು ಮರಗಳಲ್ಲಿ ಒಣಗಿದ ಎಲೆಗಳ ಕಣಕಣಾಟ ಹಾಗೂ ನೀರಿನ ಜುಳುಜುಳು ಶಬ್ಧ  ಇವುಗಳನ್ನು ಲಕ್ಷ್ಯಗೊಟ್ಟು ಕೇಳುತ್ತಿದ್ದನು. ಅವನಿಗೆ ಒಮ್ಮಿಂದೊಮ್ಮೆ ಸರೋವರದ ತಟದಲ್ಲಿ ಯಾರೋ ಅಡಿಯಾಡುವ ಸಪ್ಪಳವು ಕೇಳಬಂತು. ಕತ್ತಲೆಯಲ್ಲಿ ಅವನಿಗೆ ಕೆಲವೊಂದು ಕಲ್ಪನೆಗಳು ಆಗುತ್ತಿರಲಿಲ್ಲ. ಆದರೆ ದಶರಥನು ಶಬ್ದವೇಧಿಯಲ್ಲವೇ ? ಅವನಿಗೆ ಧ್ವನಿಯೇ ಆಧಾರವಾಗಿತ್ತು ನಿಶ್ಚಯವಾಗಿಯೂ ಅದು ಆನೆಯೆಂದು ಅವನೆಣಿಸಿದನು ಅವನು ಬಾಣಬಿಟ್ಟನು ಆಗಲೇ ಒಂದು ಆಕ್ರೋಶ ಪೂರ್ಣವಾದ ಧ್ವನಿ ಹೊರಬಿದ್ದಿತು.

“ಕಾಪಾಡಿರಿ ಕಾಪಾಡಿರಿ! ಯಾರೋ ನನ್ನನ್ನು ಹೊಡೆದುಬಿಟ್ಟರು” ದಶರಥನು ಬೆಚ್ಚಿಬಿದ್ದನು ಅವನ ಕೈಯಿಂದ ಬಿಲ್ಲುಬಾಣಗಳು ಕಳಚಿ ಬಿದ್ದವು ಒಂದು ಭಯಮಿಶ್ರಿತವಾದ ನಡುಕು ಅವನ ಮೈಯಲ್ಲೆಲ್ಲ ದಾಳಿಯಿಟ್ಟಿತು ನಾನೇನು ಮಾಡಿಬಿಟ್ಟೆ ಅರಣ್ಯವನ್ನು ಸೀಳಿಹಾಕುವ ಆ ಸರೋವರದ ಕಡೆಗೆ ಓಡಿದನು. ಸರೋವರದ ದಂಡೆಯಲ್ಲಿ ಒಬ್ಬ ಯುವಕನು ರಕ್ತದಲ್ಲಿ ತೊಯ್ದು ಬಿದ್ದಿದ್ದನು. ಕೂದಲು ಚಲಾಪಿಲ್ಲಿಯಾಗಿದ್ದವು ಕೈಯಲ್ಲಿ ಅವನದೊಂದು ಕೊಡವಿತ್ತು. ಅದನ್ನು ಅವನು ಇದೇ ಈಗ ನೀರಿನಿಂದ ತುಂಬಿದ್ದನು.

“ಮಹಾಶಯಾ” ಎಂದು ಅವನು ಕಿರಿಚಿದನು – ನೀವೇ ಆ ಘಾತಕ ಬಾಣವನ್ನು ಬಿಟ್ಟಿರಾ? ನಾನು ನಿಮಗೆ ಅದೇನು ಕೇಡು ಮಾಡಿದ್ದೆನೆಂದು ನೀವು ನನ್ನೊಡನೆ ಹೀಗೆ ವ್ಯವಹರಿಸಿದಿರಿ? ನಾನೊಬ್ಬ ಋಷಿ ಕುಮಾರನು ನನ್ನ ಮುಪ್ಪಿನ ತಾಯಿತಂದೆಗಳು ಕುರುಡರು ಅವರನ್ನು ನೋಡಿಕೊಳ್ಳುವ ಹಾಗೂ ಅವಶ್ಯಕತೆಗಳನ್ನು ಪೂರ್ತಿಗೊಳಿಸುವ ಕೆಲಸವನ್ನು ನಾನೇ ಮಾಡುತ್ತೇನೆ. ನಾನು ಅವರ ಸಲುವಾಗಿಯೇ ನೀರು ಒಯ್ಯಬೇಕೆಂದು ಬಂದಿದ್ದೆ. ಆದರೆ ಈಗ ನಾನು ಅವರ ಇನ್ನುಳಿದ ಸೇವೆಯನ್ನು ಮಾಡಲಾರೇನು. ಆ ದಾರಿಯಿಂದ ನೀವು ಅವರ ಗುಡಿಸಲ ಕಡೆಗೆ ಹೋಗಿರಿ ಹಾಗೂ ನಡೆದುದೆಲ್ಲವನ್ನು ಅವರಿಗೆ ಹೇಳಿಕೊಡಿರಿ. ಆದರೆ ಹೊಗುವ ಮೊದಲು ನನ್ನ ಎದೆಯೊಳಿಗಿಂದ ಈ ಬಾಣವನ್ನು ಕಿತ್ತಿತೆಗೆದು ಹೋಗಿರಿ. ಇದರಿಂದ ನನಗೆ ಬಹಳ ತೊಂದರೆಯಾಗುತ್ತಿದೆ.”

ದಶರಥನು ಧಾವಿಸಿ ಬಾಣವನ್ನು ಕಿತ್ತಿದನು ಯುವಕನು ಕೊನೆಯ ಶಾಸವನ್ನು ತೆಗೆದುಕೊಂಡು ಪ್ರಾಣಬಿಟ್ಟನು.

ರಾಜಕುಮಾರನು ಕೊಡವನ್ನು ತುಂಬಿಕೊಂಡು ಸತ್ತವನಿಂದ ತೋರಿಸಲ್ಪಟ್ಟ ದಾರಿ ಹಿಡಿದು ನಡೆದನು. ಹಾಗೆಯೇ ಗುಡಿಸಲನ್ನು ತಲುಪಿದನು. ತಂದೆ ಕೇಳಿದನು-
ನನ್ನ ಮಗುವೇ ಇಂದು ಇಷ್ಟೇಕೆ ತಡವಾಯಿತು? ಆ ಸರೋವರದಲ್ಲಿ ಜಳಕ ಮಾಡಲಿಕ್ಕೆ ಹೋಗಿದ್ದಿಯಾ? ಎಲ್ಲಿಯೋ ನೀನು ಯಾವುದಾದರೂ ಗಂಡಾಂತರಕ್ಕೆ ಸಿಕ್ಕಿಕೊಂಡಿಲ್ಲವೇ ಎಂದು ನಾವು ಅಂಜಿಕೊಂಡಿದ್ದೆವು ಆದರೆ ನೀನು ಏಕೆ ಮರುಮಾತಾಡಲೊಲ್ಲೆ?”

ನಡುಗುವ ದನಿಯಲ್ಲಿ ದಶರಥನು ನುಡಿದನು-

“ಮಹಾತ್ಮರೇ ನಾನು ನಿಮ್ಮ ಮಗನಲ್ಲ. ನಾನೊಬ್ಬ ಕ್ಷತ್ರಿಯನು ನನಗೆ ಈ ವರೆಗೆ ನನ್ನ ಧನುರ್ವಿದ್ಯೆಯ ಬಗ್ಗೆ ಬಹಳ ಗರ್ವವಿತ್ತು. ರಾತ್ರಿಯಲ್ಲಿ ಬೇಟೆಯನ್ನರಸುತ್ತ ಕುಳಿತಿದ್ದೆನು ಸರೋವರ ತೀರದಲ್ಲಿ ಆನೆ ನೀರು ಕುಡಿಯುವಂತೆ ಸದ್ದಾಗತೊಡಗಿದೆಯೆಂದು ನನಗೆ ತಿಳಿಯಿತು. ನಾನು ಬಾಣ ಬಿಟ್ಟೆನು. ಅಯ್ಯಯ್ಯೋ  ಆ ಬಾಣವು ನಿಮ್ಮ ಮಗನಿಗೆ ಹೋಗಿ ತಗುಲಿತು ಹೇಳಿರಿ ಹೇಳಿರಿ. ಯಾವ ಪ್ರಕಾರದಿಂದ ನನ್ನ ಪಾಪಕ್ಕೆ ಪ್ರಾಯಶ್ಚಿತ್ತವನ್ನುಹೊಂದಲಿ?

ಮುದುಕ-ಮುದಿಕೆ ಇಬ್ಬರು ಅಯ್ಯೋ – ಅಯ್ಯೋ ಎಂದು ಅಡ್ಡರಾಸ ತೊಡಗಿದರು. ಅಲ್ಲಿ ಅವರ ಒಂಟಿಗನಾದ ಮಗನು ಬಿದ್ದುಕೊಂಡಿದ್ದನು. ಅಲ್ಲಿಗೆ ಹೋಗಿ ಅವರು ಶವದ ಬಳಿಯಲ್ಲಿ ಮಂತ್ರೋಚ್ಚಾರಣ ಮಾಡಿ ಅದರ ಮೇಲೆ ನೀರು ಚಿಮುಕಿಸಿದರು. ಬಳಿಕ ಋಷಿಯು ಹೇಳಿದನು-

“ಕೇಳು ದಶರಥ ನಿನ್ನ ತಪ್ಪಿನಿಂದ ನಾವಿಂದು ನಮ್ಮ ಪ್ರೀತೀಯ ಪುತ್ರನ ಸಲುವಾಗಿ ಕಣ್ಣೀರು ಹರಿಸುತ್ತಿದ್ದೇವೆ. ಒಂದು ದಿನ ನೀನು ಸಹ ನಿನ್ನ ಪ್ರೀತಿಯ ಪುತ್ರನ ಸಲುವಾಗಿ ವಿಲಾಪಿಸುವಿ. ಬಹಳ ವರುಷ ಕಳೆಯುವದಾದರೂ ಈ ಶಿಕ್ಷೆ ನಿನಗೆ ಆಗತಕ್ಕದ್ದೇ.”

ಹೆಣವನ್ನು ಸುಡುವುದಕ್ಕಾಗಿ ಅವರು ಚಿತೆಯನ್ನು ಸಿದ್ಧಗೊಳಿಸಿದರಲ್ಲದೆ ತಾವು ಸಹ ಅದರಲ್ಲಿ ಕುಳಿತುಕೊಂಡು ಉರಿದು ಸತ್ತುಹೋದರು.

ಕಾಲಕಳೆದು ಹೋಯಿತು ದಶರಥನು ಅಯೋಧ್ಯೆಯ ರಾಜನಾಗಿ ಬಿಟ್ಟನು ಹಾಗೂ ಕೌಶಲ್ಯೆಯೊಡನೆ ಅವನ ಮದುವೆಯಾಯಿತು. ಬಳಿಕ ಅವನಿಗೆ ಯಶಸ್ವಿ ರಾಮನಂಥ ಮಗನು ಹುಟ್ಟಿದನು.

ರಾಜನ ಎರಡನೇ ರಾಣಿಯಾದ ಕೈಕೇಯಿ ಹಾಗೂ ಆಕೆಯ ದಾಸಿ ಇವರನ್ನುಳಿದು ಸರ್ವಪ್ರಜೆಗಳು ರಾಮನನ್ನು ಪ್ರೀತಿಸುತ್ತಿದ್ದರು. ಆ ಇಬ್ಬರು ಸ್ತ್ರೀಯರು ಗುಪ್ತಕಟ್ಟು ಮಾಡಿಕೊಂಡು ಸಜ್ಜನನಾದ ರಾಮನಿಗೆ ಬಹು ಹಾನಿಯನ್ನು ತಂದಿಟ್ಟರು. ಅವರ ಪಿತೂರಿಯಿಂದ ಅವನು ಹದಿನಾಲ್ಕು ವರುಷಗಳವರೆಗೆ ಅರಣ್ಯಕ್ಕೆ ಕಳಿಸಲ್ಪಟ್ಟನು.

ಆ ಮುಪ್ಪಿನ ತಾಯಿತಂದೆಗಳು ನಡುರಾತ್ರಿಯಲ್ಲಿ ಸರೋವರ ತೀರದಲ್ಲಿ ಪ್ರಾಣ ಬಿಟ್ಟ ತಮ್ಮ ತರುಣಪುತ್ರನ ಸಲುವಾಗಿ ಅರಣ್ಯದಲ್ಲಿ ವಿಲಾಪಿಸಿದ ಹಾಗೆ ದಶರಥನು ಆಗ ಪುತ್ರನ ಅಗಲಿಕೆಯಲ್ಲಿ ವಿಲಾಪಿಸಿದನು.

ದಶರಥನಿಗೆ ತನ್ನ ವಿದ್ಯೆಯ ಬಗ್ಗೆ ಅದೆಷ್ಟು ಹೆಮ್ಮೆಯುಂಟಾಗಿ ಬಿಟ್ಟಿತ್ತೆಂದರೆ- ಆ ಕಾಲಕ್ಕೆ ಅವನಲ್ಲಿ ಆ ದೂರದರ್ಶಿತ್ವವು ಸಹ ಉಳಿಯಲಿಲ್ಲ. ಅದರಿಂದ ಅವನು ಕತ್ತಲಲ್ಲಿ ಯಾವನಾದರೂ ಮನುಷ್ಯನನ್ನು ಸಹ ಗಾಯಗೊಳಿಸಬಹುದೆಂಬ ವಿಚಾರ ಮಾಡಲಿಕ್ಕಾಗುತ್ತಿತ್ತು. ತನ್ನ ಶಬ್ದವೇಧಿಯ ಚಾತುರ್ಯದ ವಿಷಯದಲ್ಲಿ ಇಂಥ ದಡ್ಡತನದಿಂದ ತುಂಬಿದ ಹೆಮ್ಮೆಯುಂಟಾಗಿದ್ದರಿಂದ ಅವನು ಕೇವಲ ಹಗಲು ಬೆಳಕಿನಲ್ಲಿಯೇ ಬಾಣ ಹೊಡೆಯುವ ಅಭ್ಯಾಸ ಮಾಡುವುದು ಅವನಿಗೆ ಒಳ್ಳೆಯದಿತ್ತು. ಆದ್ದರಿಂದ ಯಾರೂ ಕಷ್ಟಕ್ಕೀಡಾಗುತ್ತಿದ್ದಿಲ್ಲ. ಆದರೆ ಅವನು ಅದೂರದರ್ಶಿಯಾಗಿದ್ದನು.
*   *   *   *   *

ಒಮ್ಮೆ ಎರಡು ಮುಪ್ಪಿನ ರಣಹದ್ದುಗಳು ಬಹುಸಂಕಟಾವಸ್ಥೆಯಲ್ಲಿದ್ದವು ಕಾಶಿಯ ಒಬ್ಬ ವರ್ತಕನಿಗೆ ಅವುಗಳ ಮೇಲೆ ದಯೆ ಹುಟ್ಟಿತು. ಅವನು ಅವುಗಳನ್ನು ಒಂದು ಒಣಗಿದ್ದ ಸ್ಥಳದಲ್ಲಿ ತಕ್ಕೊಂಡು ಬಂದನು. ಬೆಂಕಿ ಹೊತ್ತಿಸಿ ಅವನು ಅವುಗಳಿಗೆ ಕಾವುಗೊಳಿಸಿದನು ಹಾಗೂ ಸತ್ತ ದನಗಳನ್ನು ಸುಡಲಾಗುವ ಸ್ಥಳದಿಂದ ಮಾಂಸದ ತುಣುಕುಗಳನ್ನು ತಂದು ಅವುಗಳ ಹೊಟ್ಟೆಗೆ ಹಾಕಿದನು.

ಮಳೆಗಾಲ ಬಂದಮೇಲೆ ಆ ರಣಹದ್ದುಗಳು ಪರ್ವತ ಪ್ರದೇಶದ ಕಡೆಗೆ ಹಾರಿಹೋದವು. ಆಗ ಅವು ತುಂಬ ಸ್ವಸ್ಥ ಹಾಗೂ ಹೃಷ್ಟ ಪುಷ್ಟವಾಗಿದ್ದವು. ಬನಾರಸದ ವರ್ತಕನ ಉಪಕಾರವನ್ನು ತೀರಿಸಬೇಕೆಂದು ಅವು ನಿಶ್ಚಯಿಸಿದವು. ತಮ್ಮ ದಯಾಳು ಮಿತ್ರನಿಗೆ ಕೊಡುವುದಕ್ಕಾಗಿ ಅಲ್ಲೊಂದು ಇಲ್ಲೊಂದು ವಸ್ತ್ರಗಳನ್ನು ಸಂಗ್ರಹಿಸಬೇಕೆಂದು ಅವು ಒಂದು ಮನೆಯಿಂದ ಇನ್ನೊಂದು ಮನೆಗೆ, ಒಂದು ಊರಿನಿಂದ ಇನ್ನೊಂದೂರಿಗೆ ನೆಗೆಯುತ್ತ ಹೊರಟವು. ಹಾಗೂ ಯಾರಾದರೂ ಗಾಳಿಯಲ್ಲಿ ಅರಿವೆಗಳನ್ನು ಒಣಗಲು ಹಾಕಿದ್ದರೆ ಅವುಗಳನ್ನು ಎತ್ತಿಕೊಂಡು ಒಯ್ಯವವು ಮತ್ತು ಅವುಗಳನ್ನು ಆ ವರ್ತಕನ ಮನೆಯಲ್ಲಿ ಬಿಟ್ಟು ಬರುವವು. ವರ್ತಕನು ಅವುಗಳ ಸದುದ್ದೇಶವನ್ನು ಮನ್ನಿಸುತ್ತಿದ್ದನೇನೋ ಸರಿ. ಆದರೆ ಕದ್ದು ತಂದ ಆ ಅರಿವೆಗಳನ್ನು ಅವನು ತನ್ನ ವ್ಯವಹಾರಕ್ಕೂ ಬಳಸುತ್ತಿರಲಿಲ್ಲ; ಹಾಗೂ ಅವುಗಳನ್ನು ಮಾರುತ್ತಲೂ ಇರಲಿಲ್ಲ. ಅವನು ಅವುಗಳನ್ನು ಒಂದು ಕಡೆಗೆ ಜೋಕೆಯಾಗಿ ಇಟ್ಟುಬಿಡುತ್ತಿದ್ದನು.

ಆ ಎರಡು ಹದ್ದುಗಳನ್ನು ಹಿಡಿಯಬೇಕೆಂದು ಎಲ್ಲ ಕಡೆಯಲ್ಲಿಯೂ ಬಲೆಗಳನ್ನು ಹಾಕಿದರು ಒಂದು ದಿನ ಅವುಗಳಲ್ಲೊಂದನ್ನು ಹಿಡಿದರು ಮತ್ತು ಅದನ್ನು ರಾಜನೆದುರಿಗೆ ತಂದು ನಿಲ್ಲಿಸಿದರು ರಾಜನು ಅದಕ್ಕೆ – “ನೀನು ನನ್ನ ಪ್ರಜೆಗಳಲ್ಲಿ ಕದಿಯುತ್ತಿರುವುದೇಕೆ” ಎಂದು ಕೇಳಿದನು.

ಪಕ್ಷಿಯು ಉತ್ತರ ಕೊಟ್ಟಿತು- “ಒಬ್ಬ ವರ್ತಕನು ನನ್ನ ಹಾಗೂ ನನ್ನ ಬಂಧುವಿನ ಜೀವ ಉಳಿಸಿದ್ದನು. ಅವನ ಋಣ ತೀರಿಸಬೇಕೆಂದು ನಾವು ಕೆಲವೊಂದು ವಸ್ತ್ರಗಳನ್ನು ಅವನ ಸಲುವಾಗಿ ಸಂಗ್ರಹಿಸಿದೆವು.”

ಬಳಿಕ ವರ್ತಕನನ್ನು ವಿಚಾರಿಸುವ ಸರತಿ ಬಂತು ಅವನು ಸಹ ರಾಜನ ಮುಂದೆ ಬಂದು ನಿಂತನು ಅವನು ಹೇಳಿದ್ದೇನಂದರೆ- ಸ್ವಾಮೀ ರಣಹದ್ದುಗಳು ನಿಜವಾಗಿಯೂ ನನಗೆ ಬಹಳಷ್ಟು ವಸ್ತ್ರಗಳನ್ನು ತಂದುಕೊಟ್ಟಿವೆ ಆದರೆ ನಾನು ಅವೆಲ್ಲವನ್ನೂ ಒಂದು ಸ್ಥಳದಲ್ಲಿ ಇಟ್ಟುಬಿಟ್ಟಿದ್ದೇನೆ. ನಾನು ಅವುಗಳನ್ನು ಅವುಗಳ ಒಡೆಯರಿಗೆ ಮರಳಿ ಕೊಡಲಿಕ್ಕೆ ಸಿದ್ಧನಿದ್ದೇನೆ.”

ರಾಜನು ರಣಹದ್ದುಗಳನ್ನು ಕ್ಷಮಿಸಿದನು. ಯಾಕಂದರೆ ಅವು ಆ ಕಾರ್ಯವನ್ನು ಪ್ರತ್ಯುಪಕಾರದ ಸಲುವಾಗಿ ಮಾಡಿದ್ದವು. ಅಹುದು ಅವುಗಳಲ್ಲಿ ವಿಚಾರಶಕ್ತಿಯ ಅಭಾವವಿತ್ತು. ಆದರೆ ವರ್ತಕನು ಅವುಗಳ ಸಲುವಾಗಿ ಯಾವ ಕಷ್ಟಕ್ಕೂ ಈಡಾಗಬೇಕಾಗಲಿಲ್ಲ ಇದರಲ್ಲಿ ಅವನ ದೂರದೃಷ್ಟಿ ಇತ್ತು.
*   *   *   *   *

ಜಪಾನಿಯರ ಮನೆಗಳಲ್ಲಿ ದೂರದರ್ಶಿತ್ವದ ವಿಚಾರವನ್ನು ಪ್ರತ್ಯಕ್ಷ ಮೂರ್ತಿಮಂತವಾಗಿ ನೋಡಲಿಕ್ಕೆ ಸಿಗುತ್ತದೆ.

ಅವರ ಒಂದು ಮಂದಿರದಲ್ಲಿ ಮಹಾತ್ಮಾಬುದ್ಧರ ಒಂದು ವಿಶೇಷ ಪ್ರಕಾರದ ಮೂರ್ತಿ ಅದೆ. ಅವರು ಒಂದು ಕಮಲದ ಹೂವಿನ ಮೇಲೆ ಧ್ಯಾನಾವಸ್ಥೆಯಲ್ಲಿ ಕುಳಿತಿದ್ದಾರೆ. ಅವರೆದುರಿಗೆ ಮೂರು ಸಣ್ಣ ಮಂಗಗಳಿವೆ ಒಂದರ ಕೈಗಳು ಅದರ ಕಣ್ಣುಗಳ ಮೇಲಿವೆ ಮತ್ತೊಂದರವು ಎರಡೂ ಕಿವಿಗಳ ಮೇಲೆ ಹಾಗೂ ಮೂರನೇದು ಕೈಗಳಿಂದ ತನ್ನ ಬಾಯಿಯನ್ನೇ ಮುಚ್ಚಿಕೊಂಡಿದೆ. ಆ ಮೂರೂ ಮಂಗಗಳ ಅರ್ಥ ನಿಮಗೆ ತಿಳಿಯುವುದೇ?  ಮೊದಲನೇದು ತನ್ನ ಸೂಚನೆಗಳಿಂದ ಹೇಳುತ್ತಿರುವದೇನಂದರೆ- “ನಾನು ಕೆಡಕು ಹಾಗೂ ಅಂದಗೇಡಿಯಾದ ವಸ್ತುಗಳನ್ನು ನೋಡುವದಿಲ್ಲ.” ಎರಡನೇದು ಹೇಳುವದೇನಂದರೇ- “ನಾನು ಅಂಥಾ ಮಾತುಗಳನ್ನು ಕಿವಿಯಿಂದ ಕೇಳುವದಿಲ್ಲ.” ಹಾಗೂ ಮೂರನೇದು-“ನಾನು ಅಂಥ ಮಾತುಗಳನ್ನು ನುಡಿಯುವದಿಲ್ಲ.”

ಈ ಪ್ರಕಾರ ಬುದ್ದಿವಂತ ಮನುಷ್ಯರು ನೋಡಿದ್ದರಲ್ಲಿ ಕೇಳಿದ್ದರಲ್ಲಿ ನುಡಿಸಿದ್ದರಲ್ಲಿ ವಿಚಾರಪೂರ್ಣತೆಯು ಬಹಳ ಇರುತ್ತದೆ.

ಅವರು ಪರಿಣಾಮವನ್ನು ಕುರಿತು ವಿಚಾರಿಸುತ್ತಾರೆ ನಾಳಿನ ದಿವಸದ ವಿಷಯವನ್ನು ವಿಚಾರಿಸುತ್ತಾರೆ ಹಾಗೂ ತಮಗೆ ದಾರಿ ತೋರಿ ಬರದಿದ್ದರೆ ಅವರು ಯಾರನಾದರೂ ಕೇಳಿಕೊಳ್ಳುತ್ತಾರೆ.

ಹಿಂದಿ ಮೂಲ: ಶ್ರೀ ತಾಯಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿ ಅರಿವಿಗೆ ಇರದೊ ಬೇಲಿ
Next post ಮನ್ನಣೆ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys