ಬೆಳಕಿನ ದಾರಿ

ಬೆಳಕಿನ ದಾರಿ

ಚಿತ್ರ: ಜಾನ್ ಅಲೆಕ್ಸಾಂಡರ್‍
ಚಿತ್ರ: ಜಾನ್ ಅಲೆಕ್ಸಾಂಡರ್‍

ನನಗೆ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ದೊರೆತದ್ದು ವಿದ್ಯೆಯ ಮೊಗವಾಡ, ಬರಿಯ ಪದವಿ ಪತ್ರ ಎಂದು ಸ್ಪಷ್ಟವಾದದ್ದು; ನಮ್ಮ ಸಮಾಜದ ಪ್ರತಿಷ್ಠಿತರು ನಮ್ಮನ್ನು ಎಷ್ಟು ನಯವಂಚಕರನ್ನಾಗಿ ಬೆಳೆಸಿದ್ದಾರೆ ಎಂದು ಅರಿವಾದದ್ದು; ದೀನದಲಿತರ ಉದ್ಧಾರಕ್ಕೆ ದೇಶದ ಉದ್ದಗಲ ನಾಲಗೆ ಚಾಚುವ ದೇಶಭಕ್ತರ ಹುಂಬತನ ಅರ್ಥವಾದದ್ದು; ಧರ್ಮದ, ಮಾನವ ಕಲ್ಯಾಣದ ಹೆಸರಿನಲ್ಲಿ ಜಾತಿಯ ವಿಷಬೀಜ ಬಿತ್ತುತ್ತ ಮಾನವತೆಯನ್ನು ವಿನಾಶದೆಡೆಗೆ ಒಯ್ಯುತ್ತಿರುವ ಮಠ ಮಾನ್ಯಗಳ, ಮಠಾಧೀಶರ, ಮಸೀದಿ ಚರ್ಚುಗಳ, ರಾಜಕೀಯ ಪಕ್ಷಗಳ ಅಂತರಂಗದ ಅರಿವಾದದ್ದು; ಬರವಣಿಗೆ, ಭಾಷಣ, ಚರ್ಚೆ, ಗೋಷ್ಠಿ, ವಿಚಾರ ಸಂಕಿರಣ ಇತರ ತೀಟೆ ತೀರಿಸಿಕೊಳ್ಳುವ ಕೋಣೆಯೊಳಗಿನ ಕಾದಾಟದಲ್ಲಿಯೆ ಕಮರಿಹೋಗದೆ ನಾಡಿನ ಮೂಲೆ ಮೂಲೆಯಲ್ಲಿ ನೋಡಬೇಕಾಗಿರುವ ಅಗತ್ಯ ಕೆಲಸದತ್ತ ದೃಷ್ಟಿ ಹರಿದದ್ದು; ಸತ್ಯ ಧರ್ಮ, ಪ್ರಾಮಾಣಿಕತೆ ಎಂದರೆ ಗಾಂಧಿ, ನೆಹರೂ ಎಂದು ತಿಳಿದಿರುವ ಶೇ.೯೯ ಜನರೊಳಗೆ ಒಂದಾಗಿದ್ದ ನನಗೆ ಸತ್ಯ, ಧರ್ಮ, ಪ್ರಾಮಾಣಿಕತೆಯ ವಾಸ್ತವ ಸ್ವರೂಪದ ಅರಿವಾದದ್ದು; ಸಾಮಾಜಿಕವಾಗಿ, ರಾಜಕೀಯವಾಗಿ ಯಾರೊಬ್ಬರ ಪ್ರಭಾವಕ್ಕೂ ಒಳಗಾಗದೆ, ಮತ್ತೊಬ್ಬನ ನೆರಳಾಗದೆ, ಬಾಲಬಡುಕನಾಗದೆ ಒಳ ಚೈತನ್ಯದ ಜಾಗೃತಿಯಿಂದ ಸ್ವಂತ ವ್ಯಕ್ತಿತ್ವದ ದೃಷ್ಟಿ ಬೆಳದದ್ದು : ತನ್ಮೂಲಕ ಆಕಾಶದಲ್ಲಿ ಹಾರಾಡುತ್ತಿದ್ದ ಬದುಕು ನೆಲದಲ್ಲಿ ಬೇರುಬಿಟ್ಟು ಹತ್ತಿರವಾಗಿ ಜೀವಂತವಾದದ್ದು ಅಲ್ಲದೆ ಪ್ರಿಯವಾದದ್ದು; ಎಲ್ಲಕ್ಕಿಂತ ಮುಖ್ಯವಾಗಿ ನಾನು ಮನುಷ್ಯನಾಗಿಯೆ ಮುಂದುವರಿಯಲು ಕಾರಣವಾದದ್ದು ಲೋಹಿಯಾ ಹಾಗೂ ಬೆಳಕಿನ ದಾರಿಯಲ್ಲಿ ಕೈಹಿಡಿದು ಕರೆದುಕೊಂಡು ಹೋಗುವ ಅವರ ಬರವಣಿಗೆ.

ಅನ್ಯಾಯದ ವಿರುದ್ಧ ಸದಾ ಸುಡುತ್ತಿದ್ದ ಸೂರ್ಯ ಲೋಹಿಯ ; ಪ್ರಾಮಾಣಿಕತೆಯ ಸಾಕಾರಮೂರ್ತಿ ಲೋಹಿಯ ; ಮೋಸ, ವಂಚನೆ, ಅನ್ಯಾಯ, ಅಸಮಾನತೆಗಳು ಕಂಡಲ್ಲೆ ಕಿಡಿತಾಗಿದ ಮದ್ದಿನಂತೆ ಸಿಡಿದ ಬಾಂಬು ಲೋಹಿಯ; ವಿಶ್ವಮಾನವತೆಯಲ್ಲಿ ಅಗಲವರಿಯದ ಅನಂತ ಆಕಾಶ ಲೋಹಿಯ.

೧೯೨೯ರಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಲಂಡನ್ ? ಅಥವಾ ಬರ್ಲಿನ್? ಎಂಬ ಪ್ರಶ್ನೆ ಬಂದಾಗ ನಮ್ಮನ್ನು ಗುಲಾಮರನ್ನಾಗಿಸಿಕೊಂಡು ಆಳಿದ ಲಂಡನ್ನಿನಲ್ಲಿ ಕಲಿಯುವುದೆಂದರೆ ಮಾನಸಿಕ ಗುಲಾಮೀಯತೆ ಎಂದು ತಿರಸ್ಕರಿಸಿದವರು ; ನೆಹರು ಸ್ತ್ರೀ ಸಮಾನತೆಯ ಕಾಯಿದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ ಹಳ್ಳಿಗಳಲ್ಲಿ ವಾಸಿಸುತ್ತಿರುವ ಕೋಟ್ಯಾಂತರ ಭಾರತೀಯ ಸ್ತ್ರೀಯರ ಅಗತ್ಯ ಸಮಾನತೆಯ ಬರಿಯ ಕಾಯಿದೆಯಲ್ಲ, ಬದಲಿಗೆ ಕುಡಿಯುವ ನೀರು, ಮಲಮೂತ್ರ ವಿಸರ್ಜನೆಗೆ ವ್ಯವಸ್ಥೆ ಎಂದು ಖಂಡತುಂಡವಾಗಿ ಖಂಡಿಸಿದವರು; ದೇಶದ ಸಾಮಾನ್ಯ ಪ್ರಜೆಯೊಬ್ಬ ದಿನ ಒಂದಕ್ಕೆ ೮ ಆಣೆಯಿಂದ ೫ ರೂನಲ್ಲಿ ಬದುಕುತ್ತಿದ್ದರೆ ಅದೇ ದೇಶದ ಪ್ರಧಾನಿ ನೆಹರೂ ದಿನ ಒಂದಕ್ಕೆ ೨೫ ರಿಂದ ೩೦ ಸಾವಿರದವರೆಗೆ ಖರ್ಚುಮಾಡುವುದು ಅನ್ಯಾಯದ ಪರಮಾವಧಿ ಎಂದು ಲೋಕಸಭೆಯಲ್ಲಿ ನೆಹರೂ ವಿರುದ್ಧ ನೆಹರೂ ಸಮ್ಮುಖದಲ್ಲೆ ಸಿಡಿದು ನಿಂತವರು ; ೧೯೪೭ರ ಮುಂಚಿನ ಮನುಷ್ಯನನ್ನಾಗಿಸುವ ಅವಕಾಶ ನನಗೆ ಸಿಗುತ್ತದೆ, ಆದ್ದರಿಂದ ನೀವು ಹೆಚ್ಚು ವರ್ಷ ಬದುಕಿ ಎಂದು ದಾಕ್ಷಿಣ್ಯಕ್ಕೆ ಬಸಿರಾಗದೆ ನೆಹರೂಗೆ ನೇರನಾಗಿ ಬರೆದವರು ; ಜನರನ್ನು ಸಕ್ರಿಯವಾಗಿ ತೊಡಗಿಸುವುದರ ಮೂಲಕ ಕೇವಲ ಒಂದು ಲಕ್ಷ ರೂಪಾಯಿಗಳ ಸದಸ್ಯರ ಚಂದಾಹಣದಲ್ಲಿ ಪ್ರಬಲ ಕಾಂಗ್ರೆಸ್ಸಿಗೆ ಪ್ರತಿಯಾಗಿ ಇಡೀ ಭಾರತದಲ್ಲಿ ರಾಜಕೀಯ ಪ್ರತಿಪಕ್ಷ ಕಟ್ಟಿದವರು; ಗಣರಾಜ್ಯ ಭಾರತದ ಅಧ್ಯಕ್ಷರಾದ ಡಾ.ಬಾಬು ರಾಜೇಂದ್ರಪ್ರಸಾದ್ ಕಾಶಿ ಕ್ಷೇತ್ರದಲ್ಲಿ ಸಾರ್ವಜನಿಕವಾಗಿ ೨೦೧ ಜನ ಬ್ರಾಹ್ಮಣರ ಪಾದಪೂಜೆ ಮಾಡುತ್ತಿದ್ದಾಗ ಬ್ರಾಹ್ಮಣನ ಕಾಲುತೊಳೆಯುವ ಅಧ್ಯಕ್ಷರ ನಾಡಿನಲ್ಲಿ ಪುರೋಹಿತ, ಚಮ್ಮಾರ, ಅಗಸ, ಶಿಕ್ಷಕ ಇವರ ಮಧ್ಯೆ ಮುಕ್ತ ಸಂವಾದದ ಸಾಧ್ಯತೆ ಕಡಿದು ಹೋಗುತ್ತದೆ ಎಂದು ಈ ಜಾತಿಯ ಗುಲಾಮಗಿರಿಯ ವಿರುದ್ದ ಆಟಂಬಾಂಬಿನಂತೆ ಸಿಡಿದವರು; ಒಂದು ದೇಶಕ್ಕೆ ಒಂದೆ ಸಿವಿಲ್ ಕೋಡ್* (ಸಮಾನ ನಾಗರಿಕೆ ಕಾಯ್ದೆ) ಇರಬೇಕೆಂದು ಹೇಳಿಕೆ ಕೊಟ್ಟಾಗ, ಈ ಹೇಳಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ ಓಟು ಕೊಡುವುದಿಲ್ಲ ಎಂದ ಮುಸ್ಲಿಮರಿಗೆ ತಮ್ಮ ನಿಲುವನ್ನು ಮನವರಿಕೆ ಮಾಡಿ ಸಮಾನ ನಾಗರಿಕ ಕಾಯ್ದೆಯನ್ನು  ಸಮರ್ಥಿಸಿಕೊಂಡು, ಗೆದ್ದು ಆಯ್ಕೆಯಾದವರು; ನೆಹರು ಸತ್ತ ದಿನ ಅಮೆರಿಕದ ಜಾಕ್‌ಸನ್‌ನ ಒಂದು ಹೋಟೆಲ್‌ನಲ್ಲಿ ಕರಿಯರನ್ನು ಒಳಗೆ ಬಿಡುವುದಿಲ್ಲ ಎಂದ ಕ್ಷಣಾರ್ಧದಲ್ಲಿ ಬಣ್ಣ ಮತ್ತು ಅಸಮಾನತೆಯ ವಿರುದ್ಧ ನಿಂತ ನಿಂತಲ್ಲೆ ಸಿಡಿದು ದಸ್ತಗಿರಿಯಾಗಿ ಅವರ ತಪ್ಪನ್ನು ಅವರಿಗೆ ಅರಿವು ಮಾಡಿ ಕ್ಷಮಾಪಣೆ ಕೇಳುವಂತೆ ಮಾಡಿದವರು; ನಿಮ್ಮ ಮಾನವ ವಿನಾಶದ ಅಣ್ವಸ್ತ್ರಕ್ಕೆ ಬದಲಾಗಿ ಮಾನವ ಕಲ್ಯಾಣದ ಸಂಶೋಧನೆಯ ಸಿದ್ಧಿ ಏನಾದರೂ ಆಗಿದೆಯೆ ಎಂದು ಐನ್‌ಸ್ಟೈನ್‌ರನ್ನು ಆಲಂಗಿಸಿದವರು ಲೋಹಿಯಾ. ಹೀಗೆ ಆವರ ವಿಶ್ವಮಾನವ ಹೃದಯದ ತುಡಿತ ಮಿಡಿತಗಳು ಒಂದೇ… ಎರಡೇ…!

ಸತ್ತಾಗ (?) ಬಡವರ, ದೀನದಲಿತರ, ನೊಂದವರ, ತುಳಿತಕ್ಕೆ ಒಳಗಾದವರ ಅನಾಥರ ಹೃದಯದಲ್ಲಿದ್ದೇನೆ ಎನ್ನುವುದನ್ನು ಬಿಟ್ಟು-ವಿಶ್ವದಗಲಕ್ಕೂ ಬೆಳೆದವರಾಗಿಯೂ-ಮನೆಯಿಲ್ಲದೆ, ಕಾರಿಲ್ಲದೆ, ಬ್ಯಾಂಕಿನಲ್ಲಿ ಹಣವಿಲ್ಲದೆ, ಹೆಂಡತಿ, ಮಕ್ಕಳಿಲ್ಲದೆ, ಪ್ರಾಪಂಚಿಕವಾದ ಕೋರಿಕೆಗಳಾವದೂ ಇಲ್ಲದೆ, ಮುಂದಿನ ಪೀಳಿಗೆಗೆ ಎಂದೆಂಗೂ ಒರಿಜನಲ್‌ ಆಗೇ ಉಳಿಯುವ ವ್ಯಕ್ತಿತ್ವ ಒಂದನ್ನೇ ಬಿಟ್ಟು ತೆರಳಿದವರು ಡಾ.ಲೋಹಿಯಾ ಒಬ್ಬರೇ.

ಹೀಗಾಗಿ ಇಂದಿನ ಯುವಜನತೆ ಡಾ. ಲೋಹಿಯಾರವರನ್ನು ಪರಿಚಯಿಸಿಕೊಳ್ಳದೆ ಹೋದರೆ ಅವರ ಬದುಕು ವ್ಯರ್ಥ. ಅಷ್ಟೇ ಅಲ್ಲ, ಅದರಿಂದಾಗಿ ಅವರ ವಿಶ್ವ ಅರ್ಥಕಳೆದುಕೊಳ್ಳುತ್ತದೆ. ಆದ್ದರಿಂದ ವಿಶ್ವದ ಮನೆ ಮನೆಗೆ, ಮನಮನಕ್ಕೆ ಲೋಹಿಯಾ ಹಾಗೂ ಅವರ ಚಿಂತನೆ ಇಂದಿನ ತೀವ್ರ ಅಗತ್ಯ.

ಜೊತೆಗೆ ಲೋಹಿಯಾ ಆಚೆಗೆ ಚಿಂತಿಸಬಲ್ಲ ಲೋಹಿಯಾ ರೀತಿಯ ಸ್ವತಂತ್ರ ಮನಸ್ಸು ಇನ್ನೂ ಹೆಚ್ಚಿನ ತೀವ್ರತಮ ಅಗತ್ಯ.

* It is also a matter of regret that Article 44 of our constitution has remained a dead letter. It provides that “The state shall endeavour to secure for the citizens a uniform civil code through out the territory of India.” There is no evidence of any official activity for framing a common civil code for the country. A belief seems to have gained ground that it is for the Muslim community to take a lead in the matter of reforms of their personal law. A common civil code will help the cause of nation; integration by removing disparate loyalities to laws which have conflicting ideoligies, no community is likely to bell the cat by making gratuitious concession on this issue. It is the state which is charged with the duty of securing a uniform civil code for the citizens of the country and, unquestionably, it has the legislative competence to do so. A counsel in the case whispered, somewhat audibly, that legislative competence is one thing, the political courage to use that is quite another. We understand the difficulties involved in bringing persons of different faiths and persuasions on a common platform. But, a beginning has to be made if the constitution is to have any meaning. Inevitably, the role of the reformer has to be assumed by the courts because, it is beyond the endurance of sensitive minds to allow injustice to be suffered when it is so palpable. But piecemeal attempt of courts to bridge the gap between personal laws cannot take the place of a common civil code. Justice to all is a far more satisfactory way of dispensing justice than justice from case to case.

-ಷಹಬಾನೊ ಬೇಗಂ ಕೇಸಿನಲ್ಲಿ ಸರ್ವೋಚ್ಛ ನ್ಯಾಯಾಲಯದ ಶ್ರೇಷ್ಠ ನ್ಯಾಯಾಧೀಶ ವೈ.ವಿ.ಚಂದ್ರಚೂಡ್ ಮತ್ತು ನ್ಯಾಯಾಧೀಶರಾದ ಡಿ.ವಿ.ದೇಸಾಯ್, ಚಿನ್ನಪ್ಪ ರೆಡ್ಡಿ, ಇ. ಎಸ್. ವೆಂಕಟರಾಮಯ್ಯ ಮತ್ತು ರಂಗನಾಥಮಿಶ್ರ ಅವರು ನೀಡಿದ ತೀರ್ಪಿನಲ್ಲಿ. All India Reporter, 1985, Supreme Court Page 954.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು
Next post ಭಂಡ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…