Home / ಕಥೆ / ಸಣ್ಣ ಕಥೆ

ಸಣ್ಣ ಕಥೆ

ನನ್ನಲ್ಲೇನು ಕಂಡು ನೀ ನನ್ನ ಇಷ್ಟಪಟ್ಟೆ? ನೆನಪಿದೆಯಾ ಮನು…..ನೀನಂದು ನನ್ನಲಿ ಏಕಾ‌ಏಕಿ ಪ್ರಶ್ನಿಸಿದಾಗ ನಾ ಏನೂ ಹೇಳಲಾರದೆ ಸುಮ್ಮನಾಗಿದ್ದೆ. ಆದ್ರೆ ಈಗ ಹೇಳ್ತಿದ್ದೇನೆ ಕೇಳು. ಜೀವನದಲ್ಲಿ ಮುನ್ನುಗ್ಗುವಂತೆ ಧೈರ್ಯ ತುಂಬುವ ನಿನ್ನ ಪರಿ, ...

ಹೋಗಬೇಕು, ಹೋಗಿ ನೋಡಬೇಕು. ನೋಡಿ ನಾಲ್ಕು ಸಾಂತ್ವನದ ಮಾತು ಹೇಳಿ ಬರಬೇಕು ಎಂದು ಪ್ರತಿದಿನವೂ ಅನ್ನಿಸುತ್ತದೆ. ಹೃದಯ ಹೋಗು ಹೋಗು ಎನ್ನುತ್ತದೆ. ಮನಸ್ಸು ಒಮ್ಮೊಮ್ಮೆ ತಿರುಗೇಟು ಹಾಕುತ್ತದೆ. ಮನಸ್ಸಿಗೇಕೆ ಹೃದಯದ ಭಾಷೆ ಅರ್ಥವಾಗುವುದಿಲ್ಲ? ಅಥವಾ ಅ...

ಅವಳು ಹಾಗೆ ಕೂತು ಎಷ್ಟು ಹೊತ್ತಾಗಿತ್ತೋ? “ನೀನು ತೋಟಕ್ಕೆ ಹೋಗಿ ಹುಲ್ಲು ತಂದು ಹಸುಗಳಿಗೆ ಹಾಕು. ಹಾಗೆ ಕುಕ್ಕೆ ತೆಗೆದುಕೋ. ಅಡಿಕೆ ಸಿಕ್ಕಿದ್ದನ್ನು ಅದರಲ್ಲಿ ಹಾಕಿಕೊಂಡು ಬಾ. ನನಗೆ ತುಂಬಾ ಕೆಲಸವುಂಟು.” ಅಪ್ಪ ಹಾಗೆ ಹೇಳುತ್ತಿರು...

ಊರ ಚೇರುಮನ್ನರಿಗೆ ರಾಷ್ಟ್ರಪ್ರಶಸ್ತಿ ಬಂದದ್ದಕ್ಕೆ ಊರಿಗೆ ಊರೇ ರೋಮಾಂಚನಗೊಂಡಿತ್ತು. ತೀರಾ ಸಣ್ಣ ಊರದು. ಭಾರತದ ಭೂಪಟದಲ್ಲಿ ಅದಕ್ಕೊಂದು ಸ್ಥಾನವೇ ಇರಲಿಲ್ಲ. ಸಂತೋಷಪಡಲು ಅದಕ್ಕೊಂದು ಕಾರಣವೂ ಇರಲಿಲ್ಲ. ಈಗ ಅದು ದೊರಕಿತ್ತು. ಚೇರುಮನ್ನರ ಹೆಸರು ...

ಅದು ಊರನ್ನು ದಂಗುಬಡಿಸುವ ವಿಷಯವಾಗಿತ್ತು. ಆಶಾ ಮತ್ತು ರಮೇಶ ಮದುವೆ ಮಾಡಿಕೊಂಡರಂತೆ ಎಂಬ ಸುದ್ದಿ ಅದು. ಅಕ್ಕಪಕ್ಕದ ಮನೆಯ ಆಶಾ ಮತ್ತು ರಮೇಶ ಒಟ್ಟಿಗೆ ಬೆಳೆದವರು. ವೈದಿಕರ ಮನೆಯ ರಮೇಶ ಮಾಂಸ ಮಡ್ಡಿ ತಿನ್ನುವ ಗೀತಾಳ ಮನೆಯಲ್ಲಿ ಗಂಟೆಗಟ್ಟಲೆ ಸಮಯ ...

ಅವಳನ್ನು ನಾನು ಭೇಟಿಯಾದದ್ದು ಫೀಲ್ಡ್ ಸ್ಟಡಿಗೆ ಹೋಗಿದ್ದಾಗ. ಹೆಚ್ಚೆಂದರೆ ಮೂವತ್ತರ ಹರೆಯ. ದೃಡಕಾಯದ ಯಾರನ್ನೂ ಆಕರ್ಷಿಸಬಲ್ಲ ಮೈಕಟ್ಟಿನ ಕೃಷ್ಣ ವರ್ಣದ ಸುಂದರಿ. ರಿಸರ್ಚ್ ಗೈಡ್ ಏಕಾಕಿ ವಿಧವೆಯರನ್ನು ಸಂದರ್ಶಿಸಿ ಡೆಸರ್ಟೇಶನ್ ಸಿದ್ಧಪಡಿಸಬೇಕೆಂದ...

ಅಪೇಕ್ಷೆಗಳಿಗೆ ಮಿತಿಯೆಂಬುದಿದೆಯಾದರೂ ಪ್ರತಿಫಲಾಕ್ಷೇಗೆ ಮಿತಿಯೆಂಬುದೇಯಿಲ್ಲ. ಅದು ನಮ್ಮ ಸಾವಿನೊಂದಿಗೇ ಸುಖ ಕಾಣುವಂತಾದ್ದಾಗಿರಬಹುದು. ಬಯಸಿದೊಡನೆ ಬಯಸಿದಂತಹ ಸಾವು ಕೂಡ ಮನುಷ್ಯನಿಗೆ ದಕ್ಕದು. ಮನುಷ್ಯ ಅದೆಷ್ಟು ಅಸಹಾಯಕನಲ್ಲವೆ. ಈ ಸಾವು ಯಾಕಾದ...

ಗತ ಶತಮಾನದ ಕೊನೆಯ ದಿನಗಳ ಮಾತು. ಸೂಳೆಗಾರಿಕೆಯನ್ನು ತೊಡೆದು ಹಾಕಬೇಕೆಂಬ ಒಂದು ಉದ್ರೇಕದ ಭಾವ ಸಮಾಜವನ್ನೆಲ್ಲಾ ಅವರಿಸಿತ್ತು. ಚೆನ್ನ ರಾಷ್ಟ್ರ (ಹಳೆಯ ಮದ್ರಾಸು ರಾಷ್ಟ್ರ) ದ ತುಂಬಾ ಇದೇ ಚಳುವಳಿ. ತರಂಗದಂತೆ ದೇಶವನ್ನೆಲ್ಲಾ ಮುಳುಗಿಸಿ ಒಳ್ಳೆಯ ಸ...

ಗಂಗಾಧರ ಮಾಸ್ತರರು ಆ ಊರಿಗೆ ವರ್ಗವಾಗಿ ಬಂದ ಬಳಿಕ ಊರಿನ ವಾತಾವರಣವೇ ಬದಲಾಗಿ ಹೋಗಿತ್ತು. ಮಕ್ಕಳ ಪಾಲಿಗೆ ಅವರು ಶಿಕ್ಷೆ ಕೊಡುವ ಅಧ್ಯಾಪಕರಾಗಿರಲಿಲ್ಲ. ಪ್ರೀತಿಯಿಂದ ಹಾಡಿ ಕುಣಿದು ಪಾಠ ಹೇಳಿಕೊಡುವುದು ಅವರ ರೂಢಿ. ಸದಾ ಹಸನ್ಮುಖದ ಗಡ್ಡ ಮೀಸೆ ಎರಡ...

ಅವನು ಯೋಚಿಸುತ್ತಾ ಕೂತಿದ್ದ. ಮನೆ ಗುಡಿಸದೇ ಎಷ್ಟೋ ದಿವಸಗಳಾಗಿದ್ದವು. ಈ ಗೋಡೆಯೆಲ್ಲ ಯಾಕೆ ಹೀಗೆ ನಿಂತಿದೆ? ಇದು ತನ್ನ ಮೇಲೆ ಕುಸಿದು ಬೀಳಬಾರದೆ? ರಾತ್ರೆ ತನಗೆ ನಿದ್ದೆ ಬಂದಾಗ ಅಲ್ಲೇ ಹೃದಯ ಸ್ತಂಭನವಾಗಿ ತಾನು ಸತ್ತು ಹೋಗಬಾರದೆ ಎಂದು ಅವನಿಗೆ ...

1...4142434445...52

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...