ಅಗಲಿದ ಗೆಳೆಯನಿಗೊಂದು ಪತ್ರ

ಓ ಗೆಳೆಯಾ ನನ್ನ ನಿನ್ನ ವಯಸ್ಸಿನ ಅಂತರ ಅಜಗಜಾಂತರ ಆದರೂ! ನೀನಾದಿ ಸ್ನೇಹ ಜೀವಿ ಓ ಗೆಳೆಯಾ ನೀ ಹೋಗಿ ಮಾಸಗಳಳಿದು ವರ್‍ಷಗಳುರುಳುತಿಹವು ನೀನಡೆದಾಡುವಾಗಿನ ಆ ಊರುಗೋಲಿನ ಸಪ್ಪಳ ಯಾರ ಮನದಲ್ಲೂ ಮಾಸಿಲ್ಲ ನಿನ್ನ...

ಹಂಬಲ

ನನಗೋ ತಂತಿ ಮೀಟುವಾಸೆ ಆಕೆಗೋ ತಂಬೂರಿ ಆಗುವಾಸೆ ಆಕೆಗೊ ಕಾಮನ ಬಿಲ್ಲಾಗುವಾಸೆ ನನಗೋ ಕಾಮನಬಿಲ್ಲು ಕಾಣುವಾಸೆ ಪಕ್ಕದ ಮನೆ ಬೆಳಕಿಗೆ ನಮ್ಮಿಬ್ಬರ ಕಾಡುವಾಸೆ ಸದ್ದಿಗೇಕೋ ಮುನಿಸು ದಿಗ್ಗನೆದ್ದು ನೋಡಿದಳಾಕೆ ಜಾರಿದ ಸೆರಗನ್ನು ಸರಿಪಡಿಸುತ ಬೆಕ್ಕೊಂದು...

ಯಾರದ್ದು ಕಾರು?

‘ಈ ಕಾರು ಯಾರದ್ದು?’ ಕೇಳಿದ ತಿಮ್ಮ ಯಜಮಾನ್ರನ್ನ ಮಗ ಒಯ್ದಾಗ ಅದು ಮಗಂದು ಮಗಳು ಒಯ್ದಾಗ ಅದು ಮಗಳದ್ದು ಅರ್ಧಾಂಗಿ ಕ್ಲಬ್ಬಿಗೆ ಒಯ್ದಾಗ ಅದು ಅರ್ಧಾಂಗೀದು ಎಂದ ಯಾವಾಗ ನಿಮ್ದಾಗುತ್ತೆ ಯಜಮಾನ್ರೇ? ಪುನಃ ಕೇಳಿದ...

ನಿರೀಕ್ಷೆ

ಶುಷ್ಕವಾದ ಭೂಮಿ ಚಿಗುರುವ ಗಿಡ ಮಳೆಗಾಗಿ ಕಾಯುತಿವೆ ಮುಂದಿನ ದಿನಗಳು ಹೀಗೆ ಇವೆಯೆಂದು ಮನದ ದುಗುಡ ನಿರೀಕ್ಷೆಯಲ್ಲಿದೆ ಚುಕ್ಕಿಗಳಿಗೆ ಹೊರ ಕಾಣುವ ಹಂಬಲ ಬಳ್ಳಿಗೆ ಮರವೇರುವ ಬಯಕೆ ಸಕಲ ಜೀವಿಗಳಾಶ್ರಯ ಈ ಧರೆ ಈಗಲೇ...

ನಮ್ಮ ಚಲುವ ಕನ್ನಡ ನಾಡು

ಕನ್ನಡ ನಾಡು ನಮ್ಮ ನಾಡು ಭುವನೇಶ್ವರಿ ಮಡಿಲಲಿ ಪವಡಿಸಿದ ನಾಡು ಕನ್ನಡ ಚೆಲ್ವ ಕುವರ ಕುವರಿಯರ ನಾಡು ನಮ್ಮ ಚಲುವ ಕನ್ನಡ ನಾಡು ಸುಂದರ ಬನ ಸಿರಿಗಳ ಸಾಲೇ ಸಹ್ಯಾದ್ರಿ ಮಡಿಲಲಿ ಬೆಳೆದಿಹ ನಾಡೆ...

ಯಾರು….?

ನನ್ನ ಹಾದಿಯಲ್ಲಿ ಹೂವ ಚೆಲ್ಲಿ ಸ್ವರ್ಗದ ದಾರಿಯನು ಸುಗಮ ಗೊಳಿಸಿದವರಾರು? ಮೇಲೆ ಮೇಲೆ ನೀಲ ಗಗನಕ್ಕೇರಿಸಿ ಮಿನುಗುವ ತಾರೆ ಮಾಡಿದವರಾರು? ಈ ಹಕ್ಕಿಗೆ ಗುಟುಕನು ಕೊಟ್ಟು ಗೂಡ ಬಿಟ್ಟು ಮೇಲೆ ಹಾರಲು ರೆಕ್ಕೆಗಳಿಗೆ ಬಲವ...

ದಿಂಬು

ನಿದ್ದೆ ಬರುವುದುಂಟೆ ದಿಂಬಿಲ್ಲದೇ ಮಲಗುವುದಕ್ಕಂತೂ ಇರಲೇ ಬೇಕು ದಿಂಬು ತಲೆಗೆ ಆರಾಮು ಮನಕೆ ಹಿತ ಹೆಂಡತಿ ಹಾಕಿದ ಹೂವೊಂದಿದ್ದರೆ ಗಮ್ಮತ್ತೆ ಬೇರೆ ಸುಖ ನಿದ್ರೆಯಲಿ ಕನಸಿನ ಮೇಲೆ ಕನಸುಗಳು ಶಯನೋತ್ಸವಕೆ ಬೇಕು ಮೋಹಕ ದಿಂಬು...

ಹೊಸಬೆಳಕು

ಛೇ ಛೇ ಅಸ್ತವ್ಯಸ್ತ ಅಶ್ಲೀಲ ಹಿಂಸೆ ಕ್ರೌರ್ಯದ ಖಂಡನೆ ಉಪ್ಪುಂಡ ದೇಹದ ಬಯಕೆಯ ನಾಗಾಲೋಟಕೆ ತಡೆವುಂಟೆ? ತರುಣ ತರುಣಿಯರ ಸುಪ್ತಬಯಕೆ ಹೆಪ್ಪುಗಟ್ಟಿ ತಡೆಯದೇ ಅಡ್ಡ ಹಿಡಿದ ಮನ ಪಥ ಭ್ರಮಣೆಯಾಗಿ ರಸ್ತೆಗಿಳಿದು ಹಾಕಿತು ಪ್ರೇಮದ...

ಗೋಕಲ್ಲು

ಮೇಯಾಕ ಹ್ವಾದ ದನಕರುಗಳ ಹಿಂಡು ಸಂಜೆಯಾಗತ್ಲು ಊರೊಳಗ ಬರಾಕ್ಕೊಲ್ದು ಕೊರಳೆತ್ತಿ ಬಾಯ್ತೆರೆದು ಬಾಲವ ಸೆಟೆಸಿ ಹುಗಿದು ನಿಲ್ಲಿಸಿದ್ದ ಊರ ಹೊರಗಿನ ಇತಿಹಾಸವಿದ್ದ ಈ ಕಲ್ಲಿಗೆ ಉಜ್ಯಾವ ಅರೆತೆರದ ಕಣ್ಣಿನಾಗ ತಮ್ಮ ಮೈ ನವೆ ನೀಗಿಸಿಕೊಳ್ತಾ...

ಸೃಷ್ಟಿಯ ಲೀಲೆ

ಮೂಡಣದ ಬಾಗಿಲಲಿ ತೆರೆಗಳ ಸರಿಸಿ ಜೀವಿಗಳ ಬೆಳಗುತಿಹನು ಬಿಂಕದಲಿ ತಾರೆಗಳು ಮಿನುಗುತಿವೆ ರಾತ್ರಿ ಚೆಲುವಿಯ ಕಂಗಳಲಿ ರಮಿಸುತಿಹವು ನೀರವತೆ ಬೆಳ್ದಿಂಗಳ ತಂಪಿನಲಿ ಜಗವೆಷ್ಟೊಂದು ಸುಂದರ ಈ ಸೋಲಾರಿನಲಿ ಹಣ್ಣೆಲೆ ಉದುರಿ ಚಿಗುರೆಲೆ ಮೂಡಿರಲು ಧರೆ...