ಕೈದೋಟ

ನಡೆಯಿರಿ ಮಕ್ಕಳೇ
ಶಾಲೆಯ ಕೈದೋಟಕೆ
ಕೇಳಿರಿ ಕೇಳಿರಿ
ಪುಟಾಣಿ ಮಕ್ಕಳೇ

ದೇಹದ ಬಲವರ್‍ಧನಕೆ
ನಿರ್ಮಲ ಮನಸು ಕಾರಣವು
ಇರದಂತೆ ಕ್ರಿಮಿ ಕೀಟ ಕಸ ಕಡ್ಡಿ
ಸ್ವಚ್ಛ ಮಾಡೋಣ ಮನೆಯನು

ಬೀಸಾಡದಿರಿ ಎಲ್ಲೆಂದರಲ್ಲಿ
ಜೋಡಿಸಿ ವಸ್ತುಗಳ ಒಪ್ಪ ಓರಣದಲಿ
ಹಾಕಿರಿ ಬೇಡವಾದ ಪದಾರ್‍ಥಗಳ
ಅದಕ್ಕಿಟ್ಟ ತೊಟ್ಟಿಯಲಿ

ಮನೆಯೇ ಮಂದಿರವು
ತಿಳಿಯಿರಿ ಇದನು ನೀವು
ಉನ್ನತ ಶಕ್ತಿ ಪಡೆಯಿರಿಲ್ಲಿ
ಎಲ್ಲರ ಪ್ರೀತಿ ವಾತ್ಸಲ್ಯದಿಂದಲಿ

ಸಸಿಗಳ ನೆಡಿರಿ ಕಳೆಯನು ಕೀಳಿರಿ
ಕೆಸರಾಗಲಿ ಬೆರಳು ಹಸನಾಗಲಿ ಬದುಕು
ಗಿಡ ಮರ ಬಳ್ಳಿಗಳ ಸಾನ್ನಿಧ್ಯತೆಯಲಿ
ಶುದ್ಧ ಪ್ರಾಣವಾಯು ಸಿಗಲಿ

ಬೆಳೆಯಿರಿ ಪ್ರಕೃತಿ ಮಡಿಲಲಿ
ದೇಹ ಪರಿಶುದ್ಧವಾಗಲಿ
ಸಹೋದರತೆ ಸಮಾನತೆ
ರಕ್ತದಲಿ ಮಿಳಿತವಾಗಲಿ

ನೀವಾಗಿರಿ ಶ್ರವಣ
ಅವ್ವ ಅಪ್ಪನ ಸೇವೆ ಮಾಡುತಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಧನೆ
Next post ಓಲೆ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys