Home / ತನ್ನಷ್ಟಕ್ಕೆ

Browsing Tag: ತನ್ನಷ್ಟಕ್ಕೆ

೧ ಹೊತ್ತು ಕಂತುವ ಮೊದಲೇ ನಿನಗೆ ಜಡೆ ಹೆಣೆದು ಮುಗಿಸಲೇಬೇಕೆಂಬುದಿವರ ಉಗ್ರ ಆದೇಶ. ನೀನೋ ಅಂಡಲೆವ ಬೈರಾಗಿ! ನಿಂತಲ್ಲಿ ನಿಲ್ಲುವವನಲ್ಲ ಕೂತಲ್ಲಿ ಕೂರುವವನಲ್ಲ ಕ್ಷಣಕ್ಕೊಮ್ಮೆ ಧಿಗ್ಗನೆದ್ದು ಗರಗರ ದಿಕ್ಕು ತಪ್ಪಿ ತಿರುಗುವ ವಾಚಾಳಿ ಪಾದದವನು! ನನ್ನ...

೧ ಬಯಲಿನಲಿ ಕೂತು ಆಕಾಶಕ್ಕೆ ಕಣ್ಣು. ಬೆಳ್ಳಂಬೆಳಗೇ ತಾರೆಗಳ ಹುಡುಕಿ ಕಿತ್ತು ಪೋಣಿಸಿ ಮಾಲೆ ಮಾಡುತ್ತ ಮಡಿಲು ತುಂಬಿಕೊಳುವುದರಲೇ ಮಗ್ನ ಈ ಬಯಲ ಬುದ್ಧ. ೨ ಗುಡಿಸಿದ ರಾಶಿ ಬೀದಿ ಕಸ ತನ್ನ ಪುಟ್ಟ ಬೊಗಸೆಗೆ ತುಂಬಿ ದಿನವೂ ಪುಟ ಪುಟನೆ ಓಡಿ ಬಂದು ಅವನ...

೧ ಅವರ ಬಂಗಲೆಯ ಹಜಾರದ ನೀರ ಬೋಗುಣಿಯಲಿ ನೆಟ್ಟ ಅಲ್ಲಲ್ಲ… ಇಟ್ಟ ಅದು ವಾಸ್ತು ಗಿಡವಂತೆ. ನಿಂತಿದೆ ತಾನೇ, ದಯನೀಯವಾಗಿ. ಅದರ ಮೊಗದ ತುಂಬಾ ದುಗುಡ ಈಗಲೋ ಆಗಲೋ ಕಟ್ಟೆ ಒಡೆವಂತೆ. ದಿಕ್ಕೆಟ್ಟು ನಿಂತ ಜೀವಂತ ಗಿಡವೂ ಒಂದು ಬೆದರುಬೊಂಬೆ! ಅವರ ಷ...

೧ ನನಗಾಗಿ ನನ್ನದೇ ಒಂದು ಕನ್ನಡಿ ಬೇಕೆಂಬ ಗುಪ್ತ ಬಯಕೆಗೆ ಬಿದ್ದಿರುವೆ ಗುರುವೆ ಕನ್ನಡಿಯೇ ಇಲ್ಲವೆಂದಲ್ಲ ಊರ ತುಂಬಾ ಕನ್ನಡಿ ನೆಟ್ಟಿದ್ದಾರೆ ಅವರಿಗಿಷ್ಟದ ಪಾದರಸ ಇವರಿಗಿಷ್ಟದ ಮಾಪಕ ಅವರಿಗೆ ಬೇಕೆನಿಸಿದಷ್ಟು ಹೊತ್ತು ಕಾಯಿಸಿ ಎರಕ ಹೊಯ್ದು ಕನ್ನಡ...

೧ ಕಾಂಡವೇ ಶಿಲೀಕೃತಗೊಂಡು ಕಲ್ಲಾದ ಪಳೆಯುಳಿಕೆ, ಮರಗಲ್ಲಿನಲಿ ಕೆತ್ತಿದ ಬುದ್ಧನಿಗೆ ಅವಳಡುಗೆ ಮನೆಯೀಗ ತಪೋವನ. ನೀಳ ಕಣ್ಣು ಮುಚ್ಚಿ ಧ್ಯಾನಕ್ಕೆ ಕೂತ ಅವನೊಂದಿಗೆ ಅವಳ ನಿತ್ಯ ಕಸುಬಿನಲ್ಲೇ ಮೌನ ಜುಗಲ್‌ಬಂದಿ. ೨ ಸೊಪ್ಪು ಸೋಸುತ್ತಾ ಕಾಳು ಬಿಡಿಸುತ್...

ಇದ್ದಕ್ಕಿದ್ದಂತೆ ರಾತ್ರಿಯೆಲ್ಲಾ ಧೋ ಎಂದು ಸುರಿದ ಮಳೆಗೆ ಬೆಳಗಿಗೇ ಅರಳಿ ನಿಂತಿದೆ ಈ ಮಳೆ ಲಿಲ್ಲಿ ಹೂವು! ಮೊಗ್ಗಿಲ್ಲ, ಮೊಗ್ಗಿನ ಸುಳಿವಿರಲಿಲ್ಲ ಗಿಡದ ಗರ್ಭದ ಯಾವ ಮೂಲೆಯಲ್ಲಡಗಿತ್ತು ಈ ಹೂವಿನ ಮಿಂಚು? ಮಳೆಗೂ, ಈ ಮಳೆ ಲಿಲ್ಲಿಗೂ ಯಾವ ಹೊಕ್ಕುಳು...

ಮುಟ್ಟುವುದೆಂದರೆ ಮುಟ್ಟದಿರುವುದು ಮುಟ್ಟದಿರುವುದೆಂದರೂ ಮುಟ್ಟುವುದು ಕಣ್ಣಾಗಿ ಕಾದು ಕೂತ ಮೈಮರೆವಿನ ಎಚ್ಚರದಲಿ ಎವೆಗಳೊಂದಾಗುವ ಚಡಪಡಿಕೆ ಮುಟ್ಟಿತಾಗುವ ಮೈಮರೆವು. ಒಂದಾಗಿಯೂ ಬೇರಾದ ಎರಡಾಗಿಯೂ ಒಂದಾದ ಕಣ್ಣೆವೆ ಮೈ ಮರೆವಿನಲ್ಲೂ ಮೊಗ್ಗುಗಳರಳಿ ಪ...

೧ ಜೀಯಾ ಹೀಗೆ ನಿನ್ನ ಮುಂದೆ ಒಳಗಿನದೆಲ್ಲ ಸುರಿದು ಖಾಲಿಯಾಗಿ ನಿಂತುದು ಅದೆಷ್ಟನೆಯ ಸಲವೋ ಲೆಕ್ಕವಿಟ್ಟಿರಬಹುದು ನೀನು. ಮತ್ತೆ ಮತ್ತೆ ನನ್ನ ತುಂಬುವವನು ಕರುಣಾಳು ನೀನೇ ತಾನೇ? ಅಬ್ಬರದ ಶರಧಿಯಲಿ ಅಲೆವ ಮೀನು ನಾನು ದಿಕ್ಕು ತಪ್ಪುತ್ತ ಬೆಚ್ಚಿ ಸ್ತ...

ಘಾತಕ್ಕೊಳಗಾಗಿ ಪತರುಗುಟ್ಟುತ್ತಿದ್ದ ನನ್ನ ನಿರಾಕಾರ ಮಾನಕ್ಕೆ ಸೊಕ್ಕೆಂಬುದು ನೀವಿಟ್ಟ ಹೆಸರು. ಎತ್ತೆತ್ತಲಿಂದಲೂ ನೀವೆಷ್ಟೇ ಬೆಂಕಿ ಇಟ್ಟರೂ ‘ಅದು’ ದಹಿಸಿ ಹೋಗದ್ದಕ್ಕೆ ಕ್ಷಮೆ ಇರಲಿ ನನಗೆ. ಗವ್ವೆನುವ ಕತ್ತಲ ಗವಿಯೊಳಗೆ ನನಗೆಂದೇ ಹಚ್ಚಿಟ್ಟ ಆ ದ...

ನಡೆವುದೆಂದರೆ ಹೀಗೆ…. ಪ್ರದಕ್ಷಿಣಿಯೋ ಅಪ್ರದಕ್ಷಿಣಿಯೋ ಗಿರಗಿರನೆ ಗುಂಡಗೆ ಬುಗುರಿಹುಳದ ಇಡೀ ದೇಹವೇ ವೃತ್ತಾಕಾರ ತಿರುಗುತ್ತಾ ಗಾಳಿಯಿಲ್ಲದೆಯೂ ಗಿರಗಟ್ಟೆ. ತಿರುಗುತ್ತಲೇ ಒಂದಿಷ್ಟು ಮುಂದೆ ಯಾರಿಗೆ ಗೊತ್ತು? ಹಿಂದಕ್ಕೂ ಆಗಿರಬಹುದು ಆ ನಡಿ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...