ಕವನ

ಈಡಿಪಸ್‌ಗೊಂದು ಪ್ರಶ್ನೆ

ಓ ಈಡಿಪಸ್ ನಿನ್ನೆದೆಂತಹ ಬದುಕು ಅಮಾನುಷ ವಿಧಿಬರಹಕೆ ಈಡಾಗಿ ಅರಿಯದೆ ಹಿಂದೆಂದೂ ನಡೆಯದಿದ್ದ ಮುಂದೆಂದೂ ನಡೆಯದಿರುವ ಘನಘೋರ ದುರಂತಕ್ಕೆ ಬಲಿಯಾದೆ ನವಮಾಸಗಳು ತನ್ನೊಡಲಲಿ ನಿನ್ನನಿರಿಸಿಕೊಂಡ ಹೆತ್ತವಳಿಗೆ ಮಾಲೆ […]

ದೂರ

ಇಷ್ಟುಕಾಲ ಒಟ್ಟಿಗಿದ್ದು ಅರ್ಥೈಸಿ ಕೊಂಡದೆಷ್ಟು ನನ್ನ ಕಣ್ಣೀನಾಳದ ಭಾವ ನೀ ಅಳೆಯಲು ನಿನ್ನ ಅಂತರಂಗದ ಬಿಂಬವಾ ನಾ ಅರಿಯಲು ಯತ್ನಿಸಿದಷ್ಟು ಗೌಪ್ಯ ಇದ್ದವಲ್ಲ ಮದ್ಯ ಗೋಡೆಗಳು ನೀನು […]

ಹವಳ ದ್ವೀಪ

ದ್ವೀಪದ ಸುತ್ತಲೂ ನೀಲ ಕಡಲು ಹವಳದ ಒಡಲು ಮುಚ್ಚಿಟ್ಟ ಲೋಕ ಬಿಚ್ಚಿಡಲಾರದ ನಾಕ ಆಳದಲ್ಲೆಲ್ಲೋ ಬಿಸುಪು ಕಣ್ತಪ್ಪಿಸುವ ಹೊಳಪು ದೂರ ಬಹುದೂರ ದ್ವೀಪದ ಮಡಿಲು ಈಜಿದಷ್ಟು ದಣಿವು […]

ಚಿಟ್ಟೆಗಳು

ಧರೆಯ ಮೇಲೆಲ್ಲಾ ಹಾರುವ ಬಣ್ಣ ಬಣ್ಣದ ಚಿಟ್ಟೆಗಳು ಹಾರುತ್ತವೆ ಒಮ್ಮೊಮ್ಮೆ ಒಡಲೊಳಗೆ ಅಂದೆಂದೋ ಯಾವನದೋ ತೆವಲಿಗೆ ಹುಟ್ಟಿದ ಆಚಾರ ವಿಚಾರಗಳ ತುಳಿದರೆ, ಉಕ್ಕುಕ್ಕಿ ಹರಿಯುತ್ತಿದ್ದ ಮಧುರ ಪ್ರೇಮದ […]

ಸೃಷ್ಟಿಕ್ರಿಯೆ

ಅದಾವ ಕ್ಷಣದಲೊ ಗಮ್ಯತೆ ಸೇರಿ ಮಾಸವೊಂದರಲ್ಲೇ ಅಸ್ತಿತ್ವ ತೋರಿ ಅಸ್ಪಷ್ಟತೆಯಲ್ಲೇ ಪ್ರಭಾವ ಬೀರಿ ನಿನ್ನಾಟ ಒಡಲಲಿ ಬಾರಿ ಮತ್ತೇರಿ ಸೃಷ್ಟಿಕ್ರಿಯೆಯ ಆ ಕೈಚಳಕ ಹೊತ್ತು ತಂದಿದೆ ವರ್ಣಿಸಲಾಗದ […]

ಮಡಿಲು ಬರಿದೇ

ಒಡಲಲ್ಲೊಂದು ಕುಡಿ ಚಿಗುರಲಿಲ್ಲವೆಂದೇಕೆ ಹಲುಬುವಿರಿ, ಕುಡಿ ಗಾಗಿ ಹಂಬಲಿಸಿ ಕೊರಗಿ ಸೊರಗಿ ಬಾಳನ್ನೇಕೆ ವ್ಯರ್ಥಗೊಳಿಸಿ ಶೂನ್ಯ ವನ್ನಾಗಿಸುವಿರಿ ನಿಮ್ಮದೇನು ರಘುವಂಶ ಸೂರ್ಯವಂಶವೇ ಕುಲದೀಪಕನಿಲ್ಲದೆ ವಂಶ ಅಳಿಯತೆನಲು ಒಡಲು […]

ಕೇಳಿಸದೆ ನಿಮಗೂ ಅಃತಪುರದ ಪಿಸುದನಿ

ಬಣ್ಣಗೆಟ್ಟ ಇರುಳುಗಳ ನಡುನಡುವೆ ಹೊರಳಿ ನರಳಿವೆ ವಿರಹದುರಿಯ ದಳ್ಳುರಿ, ಎಲ್ಲಿ? ಎಲ್ಲಿ? ಹೋದವೆಲ್ಲಿ ಮುಗಿಲ ಪಡೆ? ಸುರಿಸದೆ ಒಂದಿಷ್ಟು ತಣ್ಣನೆ ಹನಿಗಳ ಬಾಯಾರಿವೆ, ತೊನೆಯುವ ಬಯಕೆ ಆಸೆಗಳ […]

ಇವಳು ನನ್ನವ್ವ

ಇವಳು ನನ್ನವ್ವ ತಂಪಿಗಾಗಿ ಕಾದವಳು ಹನಿ ಬೀಳದೆ ಒಡಲೆಲ್ಲ ಬಿರುಕು ಬಿರುಕು ಬರಗಾಲ ಒಳಗೂ ಹೊರಗು ಒಲೆಯ ಒಳಗಿನ ಬಿಸಿ ಕಾವು, ಕಾವಿನಲಿ ಬೆಂದ ಅವ್ವ ಹನಿಗಾಗಿ […]

ಮುಗಿದ ಅಧ್ಯಾಯ

ನನ್ನ ಎದೆಯ ಮೀಟಿಮೀಟಿ ಏನ ಹುಡುಕತಲಿರುವೆ ಅಲ್ಲಿಲ್ಲ ಯಾವ ಲೋಹದದಿರು ಹೊನ್ನ ಹೊಂಗನಸು, ಬೆಳ್ಳಿನವಿರು ಪಚ್ಚೆ ಹವಳದ ಭಾವಗಳು ಬರಿದು ಬರಿದು, ಈಗಿನ್ನೇನು ಅಲ್ಲಿಹುದು ನೀನಿದ್ದೆ ಅಂದು […]