ಕಣ್ಣಂಚಿನವರೆಗೆ ಬಂದು ಕೂತು ಕೇಳಿ ಬಿಡುತ್ತದೆ ಒಂದು ಮಾತು! ಒಳಗಿರಲೋ? ಹೊರಬರಲೋ? ಹೊರಬರಲು ಒಂದೇ ಮಿಟುಕು ಸಾಕು! ಒಳಹೋಗಲು ವರ್ಷಗಳು ಕಾಯಬೇಕು! ಹೊರಬಿದ್ದುದು ನೀರಾಗಿ ಒಂದೇ ಗಳಿಗೆಗೆ ಆವಿಯಾಗಿ ಸಾವು! ಒಳಗುಳಿದದ್ದು ಒಡಲಾಳದಲ್ಲೇ ಮಥಿಸಿ,...
ಎಲ್ಲೋ ಕಳೆದುಹೋಗಿದ್ದಾಳೆ ನನ್ನ ಹುಡುಗಿ! ಅಕ್ಕಿ, ಗೋಧಿ, ಸಕ್ಕರೆಗಳಲ್ಲೋ ಹೆಸರು, ಉದ್ದು, ಕಡಲೆಗಳಲ್ಲೋ ಒಗ್ಗರಣೆ, ಲಟ್ಟಣಿಕೆಗಳಲ್ಲೋ ಕಳೆದುಹೋಗಿದ್ದಾಳೆ ನನ್ನ ಹುಡುಗಿ ಟಿ.ವಿ. ಫ್ರಿಜ್ಜು ಸೋಫಾಗಳಲ್ಲೋ ಕರೆಂಟು ಗ್ಯಾಸು ಸೀಮೆಎಣ್ಣೆಗಳಲ್ಲೆಲ್ಲೋ ಕಳೆದು ಹೋಗಿದ್ದಾಳೆ ನನ್ನ ಹುಡುಗಿ...
ಬೇಕಿಲ್ಲ ಗೆಳತಿ ನಮಗೆ ಯಾರ ಭಿಕ್ಷೆ ಆತ್ಮವಿಶ್ವಾಸವೇ ನಮಗೆ ಶ್ರೀರಕ್ಷೆ ಇಲ್ಲಿ ನೀಲಿ ಬಾನಿಲ್ಲ ಮಿನುಗುವ ತಾರೆಗಳಿಲ್ಲ .................. .................. ಅದಿಲ್ಲ ಇದಿಲ್ಲ ಇಲ್ಲ. ಎನೇನೂ ಇಲ್ಲ! ಇಲ್ಲಗಳ ಬದಿಗೊತ್ತಿ ಎಲ್ಲವಾಗುವ ಛಲ ನಮ್ಮಲೇಕಿಲ್ಲ?...
ಎಲ್ಲಿ ಹೋದರೂ ಚಿನ್ನಾರಿ ಪೇಪರಿನಲಿ ಜೋಪಾನ ಮಾಡಿ ಎತ್ತೊಯ್ಯುತ್ತಾಳೆ ತನ್ನ ಪ್ರೀತಿಯ ಸೂಜಿಯನ್ನೂ! ಸೂಜಿಯೊಂದಿಗೇ ರೀಲುಗಟ್ಟಲೆ ಗಟ್ಟಿದಾರ ಹೊತ್ತು ಸಾಗಿ ಪಿಸುಗಿಹೋದ ಎಲ್ಲ ಎಲ್ಲವನ್ನೂ ಹೊಲಿಯುತ್ತಾಳೆ ಹರಕುಗಳು ಕಾಣದಂತೆ ಮುಚ್ಚುತ್ತಾಳೆ! ಹೋದ ಬಂದೆಡೆ ಎಲ್ಲಾ...
ಕೈ ಕಾಲು ಕಟ್ಟಿ ಹಾಕಿ ದೇಹದೊಂದಿಂಚೂ ಹೊಸಗಾಳಿಗೆ, ಹೊಸ ಬೆಳಕಿಗೆ ಸೋಕದಂತೆ ಮುಸುಕೆಳೆದು ಕೂರಿಸಿ ಎಷ್ಟೊಂದು ದಿನಕಳೆದವೋ ಕೂತಲ್ಲೇ ಕೆಟ್ಟು! ಸಮುದ್ರದ ಅದದೇ ಅಲೆಗಳೂ ವ್ಯರ್ಥ ದಂಡೆಗಪ್ಪಳಿಸಿ ಹಿಂದಿರುಗುವಂತೆ ಅದದೇ ನಿಟ್ಟುಸಿರು ಮತ್ತೆ ಮತ್ತೆ...
ಹೌದು ಗೆಳೆಯಾ ಇದು ಅಡುಗೆ ಮನೆ ಸಾಹಿತ್ಯವೇ! ಒಗ್ಗರಣೆಯ ಸಾಸಿವೆ ಸಿಡಿದಾಗ ಮನವೂ ಸಿಡಿದು ಸಾವಿರ ಹೋಳಾಗಿ ಒಲೆಯ ಮೇಲೆ ಹುಳಿ ಕುದಿವಾಗ ಎದೆಯೂ ಕುದ್ದು ಕುದ್ದು ಹದವಾಗಿ ಚಾಕು ಈಳಿಗೆ ಮಣೆಗಳು ತರಕಾರಿ...
ಎಡಬಿಡದೆ ಸುರಿದ ಮಹಾ ಮಾರಿ ಮಳೆಗೆ ರೆಕ್ಕೆಪುಕ್ಕಗಳೆಲ್ಲಾ ಒದ್ದೆಮುದ್ದೆಯಾಗಿ ನೆಲಕ್ಕೆ ಕವುಚಿಬಿದ್ದ ಮರಿ ಹಕ್ಕಿ ಛಳಿಗೋ, ತೇವಕ್ಕೋ ಗಡಗಡನೆ ನಡುಗುತ್ತಾ ರೆಕ್ಕೆ ಬಿಚ್ಚಲಾಗದೇ ಮತ್ತಷ್ಟು ಮುದುಡುತ್ತಾ ತನ್ನ ಅಸಹಾಯಕತೆಗೆ ಬಿಕ್ಕುತ್ತಾ ಮನದೊಳಗೆ ಒಂದೇ ಪ್ರಶ್ನೆ...