Home / ಕವನ / ಕವಿತೆ / ಬೆಳಕು ಬೇಕು

ಬೆಳಕು ಬೇಕು

ಕಣ್ಣು ತೆರೆಸುವ ಬೆಳಕು
ನಮಗೀಗ ಬೇಕು

ಯಾರಿಗೆ ಬೇಕು ಷಂಡ
ಬೂದಿ ಮುಚ್ಚಿದ ಕೆಂಡ?
ಬೇಕೀಗ ಪ್ರಜ್ವಲಿಸುತ
ಬೆಳಗುವಾ ಜ್ವಾಲೆ

ಒಳಗೇ ಕುದ್ದರೇನು ಲಾವಾ?
ಜ್ವಾಲಾಮುಖಿ ಹೊರ ಉಕ್ಕಿ
ಸುರಿಯಬೇಕು
ಕೆಡುಕೆಲ್ಲವ ಸುಡಬೇಕು

ಉಕ್ಕುಕ್ಕಿ ಬರುವ
ಬಿಕ್ಕುಗಳ ಒಳತಳ್ಳಿ
ಆಂತರ್ಯ ಸುಟ್ಟರೇನು?
ಭೋರ್ಗರೆದು ಬರಲಿ
ಕಣ್ಣೀರ ಶರಧಿ
ಕೊಚ್ಚಿ ಹೋಗಲಿ ಕೊಳೆಯು
ಉಳಿದೀತು ಹಸನು!

ಉಸಿರು ತಾಗೀತೆಂದು
ಒಳಗೆಳೆದುಕೊಂಡು
ಬಚ್ಚಿಟ್ಟ ನಿಟ್ಟುಸಿರು
ಇನ್ನಾದರೂ ಹೊರಚಿಮ್ಮಬೇಕು
ಬಿರುಗಾಳಿಯಾಗಿ
ಹಗುರಾದುದೆಲ್ಲವೂ ತೂರಿಹೋಗಬೇಕು,
ಗಟ್ಟಿ ಉಳಿಯಬೇಕು!

ಮಣ್ಣೊಳಗೇ ಹೂತು
ನಿರ್ವೀರ್ಯವಾದೆಲ್ಲ ಕಾಳು
ತನ್ನೊಳಗಿನ ಜೊಳ್ಳೆಲ್ಲಾ ತೂರಿ
ಬಂಡೆ ಸೀಳುತ
ಮೊಳೆತು ಬರಬೇಕು
ಹಸಿರು ತರಬೇಕು!

ಮನದ ಆಳದಲ್ಲೆಲ್ಲೋ
ಅವಿತಿಟ್ಟ
ಅವ್ಯಕ್ತ ಭಾವಗಳು
ಎಲ್ಲ ಮುಸುಗುಗಳ
ಒದ್ದು
ಹೊರ ಹೊಮ್ಮಬೇಕು
ಸವಿ ಮಾತಾಗಬೇಕು!

ಬಚ್ಚಿಟ್ಟ ಬೆಳಕು
ಹೊರಹೊಮ್ಮಬೇಕು
ಕತ್ತಲಲಿ ಕಾದಿದ್ದು ಸಾಕು
ಇನ್ನು ಬೆಳಗಾಗಬೇಕು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...